ದಾವಣಗೆರೆ ಆ .೫:ಪತ್ರಕರ್ತ, ಪತ್ರಿಕೋದ್ಯಮಿ ಈಗೀನ ಟ್ರೆಂಡ್. ನಡುವೆ ಸಾಮಾಜಿಕ ಬದ್ಧತೆ, ಹೊಣೆಗಾರಿಕೆ ಹೊತ್ತು
ನೈತಿಕತೆ ಯಿಂದ ಆರೋಗ್ಯಪೂರ್ಣ ಜನ ಸಮೂಹದ ನಡುವೆ ಅವರ ಸಮಸ್ಯೆ ಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ
ಇದರಿಂದಾಗಿ ಎಂಥದೇ ವಾಣಿಜ್ಯೀಕರಣ , ಡಿಜಿಟಲ್ ಮಾಧ್ಯಮ ಬಂದರೂ ಎಂದೇ ಗುಂದದೇ ಪತ್ರಕರ್ತ ಮುನ್ನುಗ್ಗಿದಾಗಿ ಪತ್ರಿಕೋದ್ಯಮ ಪತ್ರಕರ್ತ ನಿಗೇ ಉತ್ತಮ ಭವಿಷ್ಯವಿದೆಯೆಂದು ಹಿರಿಯ ಪತ್ರಿಕೋದ್ಯಮಿ ಬೆಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಗಿದ್ದ ಹಾಲಿ ನೂತನ ಕೊಪ್ಪಳ ವಿವಿ ಉಪ ಕುಲಪತಿ ಡಾ.ಬಿ.ಕೆ.ರವಿ ಅಭಿಪ್ರಾಯ ಪಟ್ಟರು.
ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ದಾವಣಗೆರೆ ಜಿಲ್ಲೆ, ಮತ್ತು ಚಿತ್ರದುರ್ಗ ಜಿಲ್ಲೆ , ಜಿಲ್ಲಾ ವರದಿಗಾರದ ಕೂಟ ದಾವಣಗೆರೆ ಸಂಯೋಗದಲ್ಲಿ ದಾವಣಗೆರೆ ವಿವಿ ಸಂಬಾಂಗಣಧಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಡಿಜಿಟಲ್ ಮಾಧ್ಯಮ ಯುಗದಲ್ಲಿ ಪತ್ರಕರ್ತನ ಭವಿಷ್ಯ
ಪತ್ರಕರ್ತ ರ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
೬೦-೭೦ ರೇ ದಶಕದ ಅಚ್ಚುಮೊಳೆ ಜೋಡಣೆ
ಈಗೀನ ಡಿಜಿಟಲ್ ತಂತ್ರಜ್ಞಾನ ವರೆಗೂ
ಪತ್ರಿಕೆ ಗಳು ಬೆಳೆದು ಬಂದ ಹಾದಿ ಬಗ್ಗೆ ಸುದೀರ್ಘ ವಾಗಿ ವಿವರಿಸಿದ ಅವರು ಈಗೀನ ಪತ್ರಿಕೋದ್ಯಮ
ಯುವ ಉತ್ಸಾಹಿ ಪೀಳಿಗೆಗೇ ಆಗೀನ ಪತ್ರಿಕೆ, ಪತ್ರಕರ್ತ ನ ನೋವು, ಬವಣೆ ಪತ್ರಿಕೆ ಹೊರತರುವ ಸವಾಲು ಗಳು ತಿಳಿದಿಲ್ಲ, ಅವುಗಳನ್ನು ಎದುರಿಸಿ ಈಗಿನ ತಂತ್ರಜ್ಞಾನ ಯುಗದಲ್ಲಿ ನ ಭರಾಟೆ ನಡುವೆ ಪತ್ರಿಕೆ ಗಳು ಪತ್ರಕರ್ತ ಸಮಾಜದ ಏಳ್ಗೆಗಾಗಿ ಶ್ರಮಿಸಿ
ಆರೋಗ್ಯಕರ ಸಮಾಜ ಸೇವೆಗೆ ಕಂಕಣ ಬದ್ಧರಾಗಿ ಸೇವಾ ನಿರತ ರಾಗಿರುವುದೇ ಸಾಕ್ಷಿ ಎಂದರು.
ಈಗೀನ ಟ್ರೆಂಡ್ ಹೇಗಿದೆ ಎಂದರೆ ಏನೇ ಕಂಟೆಂಟ್ ಕೊಟ್ಟರೂ ಸ್ವೀಕರಿಸುವ ಪ್ರವೃತ್ತಿ ಬೆಳೆದಿದೆ
ಬಂಡವಾಳ ಶಾಹಿ ಡಿಜಿಟಲ್ ಮಾಧ್ಯಮ ಬಂದರೂ
ಪತ್ರಕರ್ತ ತುಲನೆ ಮಾಡಿ ವರದಿ ಮಾಡುವ ಜಾಣ್ಮೆ ಮತ್ತು ತಾಳ್ಮೆ ಅವಶ್ಯ ಎಂದು ಕಿವಿಮಾತು ಹೇಳಿದರು
ಇವತ್ತು ಕನ್ನಡ ಭಾಷೆ ಪ್ರಾದೇಶಿಕ ಪತ್ರಿಕೆಗಳು
ಉಳಿದಿರುವುದು ಕೇವಲ ಸಣ್ಣ ಮತ್ತು ಮಧ್ಯಮ
ಪತ್ರಿಕೆ ಗಳಿಂದ ಈಗ ಬೇಕಾದಷ್ಟು ಸುದ್ದಿ ಸಿಗುತ್ತಿದೆ
ಆದರೆ ತುಲನಾತ್ಮಕ ವಿಮರ್ಶೆ, ಅಧ್ಯಯನ
ಕೊಂಚ ಜಾಣ್ಮೆ ಬಳಸಿ ನಮ್ಮ ಮುಂದಿರುವ ಸವಾಲು ಗಳನ್ನು ಜನರು ಜೊತೆಗಿದ್ದು ಎದುರಿಸುವ ಕಲೆ ರೂಢಿಸಿಕೊಳ್ಳಿ ಎಂದು ಮನವಿ ಮಾಡಿದರು
ಕನ್ನಡ ಭಾಷೆಗೆ ಕುತ್ತಿಗೆಯಿಂದ ರೀತಿಯಲ್ಲಿ ಬಹು ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಇದರ ಪರಿಣಾಮ ಭಾಷೆ ಮೇಲೆ ಜನರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ನೀವು ಸ್ಪಷ್ಟ ಮಾಹಿತಿ ಸಂಗ್ರಹಿಸಿ ಕೊಡಿ ಜನರ ನಡುವೆ ಸದಾ ಇದ್ದ ಬದ್ಧತೆ ರೂಢಿಸಿಕೊಳ್ಳಿ
ಹೊಣೆಗಾರಿಕೆ ಇಂದು ಕಾರ್ಯ ನಿರ್ವಹಿಸಿ ಸಧೃಡರಾಗಿ ಬಲಿಷ್ಠ ರಾಷ್ಟ್ರ ನಿರ್ಮಾಣ ಕಟ್ಟಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಸಧೃಡ ರಾಷ್ಟ್ರ ಕಟ್ಟೋಣ ಎಂದು ಡಾಕ್ಟರ್ ರವಿ ಕರೆ ನೀಡಿದರು.
ವೇದಿಕೆಯಲ್ಲಿದ್ದ ದಾವಣಗೆರೆ ವಿವಿ ಕುಲಸಚಿವೆ ಶ್ರೀಮತಿ ಸರೋಜ, ಪರೀಕ್ಷಾಂಗ ರಿಜಿಸ್ಟ್ರಾರ್ ಶಿವಶಂಕರ್, ದಾವಣಗೆರೆ ಜಿಲ್ಲೆ ವರದಿಗಾರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಕಾರ್ಯನಿರತ ಪತ್ರಕರ್ತ ಸಂಘ ಪ್ರ.ಕಾರ್ಯಧರ್ಶಿ ಲೋಕೇಶ್, ಜಿಲ್ಲಾಧ್ಯಕ್ಷ ಇ,ಎಂ.ಮಂಜುನಾಥ್,ಚಿತ್ರ ದುರ್ಗ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ ಗೌಡಗೆರೆ, ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿವಿ ಉಪ ಕುಲಪತಿ ಪ್ರೊ ಬಿ.ಡಿ.ಕಂಬಾರ್ ಪ್ರಸಕ್ತ ವರ್ಷ ಪತ್ರಕರ್ತ ರೊಂದಿಗೆ ಕಾರ್ಯಾಗಾರ ಹಮ್ಮಿಕೊಂಡ ಉದ್ದೇಶ
ಈಗೀನ ಹೊಸ ಪೀಳಿಗೆಯ ಯುವ ಉತ್ಸಾಹಿ
ಪತ್ರಕರ್ತ ಪತ್ರಿಕೋದ್ಯಮಿ ಗಳಿಗೆ ತರಬೇತಿ ಶಿಬಿರ
ಅಗತ್ಯತೆ ಬಗ್ಗೆ ಹೇಳಿದರು.
ಆರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ನಂತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಣಸೋಗಿ ಪ್ರಾಸ್ತಾವಿಕವಾಗಿ ಮಾತನಾಡಿ ದರೇ ಪ್ರಾಧ್ಯಾಪಕ ವಿನಯ್ ಸ್ವಾಗತಿಸಿ ಕೊನೆಯಲ್ಲಿ ವಿಶಾಲಾಕ್ಷಿ ವಂದಿಸಿದರು.

ಮಧ್ಯಾಹ್ನ ನಂತರ ನೆಡೆದ ಪತ್ರಕರ್ತರ ಕಾರ್ಯಾಗಾರ ಸಂವಾದ ಗೋಷ್ಠಿ ಯಲ್ಲಿ
ಕೊಪ್ಪಳ ವಿವಿ ಉಪ ಕುಲಪತಿ ಪ್ರೊ ಬಿ ಕೆ ರವಿ ರವರು ಪತ್ರಕರ್ತ ರ ಹಲವು ಪ್ರಶ್ನೆಗಳಿಗೆ ಉತ್ತರಿಸಿ
ಪ್ರಸ್ತುತ ಸಂದರ್ಭ ದಲ್ಲಿ ಸವಾಲುಗಳು
ಫ್ರೀಡಮ್ ಆಫ್ ಪ್ರೆಸ್ ಕಾಯ್ದೆ ಗಳು ಜಾಹೀರಾತು
ನೀತಿ ಸಂಹಿತೆ, ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಹಿರಿಯ ಸಂಪಾದಕ ಕೆ.ಚಂದ್ರಣ್ಣ, ರಾಷ್ಟ್ರೀಯ ಮಂಡಳಿ ಸದಸ್ಯರಾದ ಎಸ್ ಕೆ ಒಡೆಯರ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಣಸೋಗಿ ಪತ್ರಕರ್ತ ಸಂಘ ದ ಅಧ್ಯಕ್ಷರುಗಳು ಈ.ಎಂ.ಮಂಜುನಾಥ್, ದಿನೇಶ ಗೌಡಗೆರೆ, ವರದಿಗಾರ ಕೂಟದ ಅಧ್ಯಕ್ಷ ಕೆ ಏಕಾಂತಪ್ಪ ಸೇರಿದಂತೆ ಉಪಸ್ಥಿತರಿದ್ದರು.