ದಾವಣಗೆರೆ.ಆ.4.ಭಾರತದ ಯುವ ಜನತೆ ವಿಶ್ವವನ್ನೇ ಆಳಬಲ್ಲರು ಎಂಬ ನಿರೀಕ್ಷೆ ಜಗತ್ತಿನ ಬೇರೆ ದೇಶಗಳವರಿಗೆ ಇರುವಾಗ ಸ್ವಸಾಮರ್ಥ್ಯದ ಅರಿವು ನಮ್ಮ ಯುವ ವಿದ್ಯಾರ್ಥಿಗಳಲ್ಲಿ ಜಾಗೃತ ವಾಗದೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ, ಸ್ವಸಾಮರ್ಥ್ಯದ ಅರಿವು ದೇಶದ ಯುವ ವಿದ್ಯಾರ್ಥಿಗಳಲ್ಲಿ ಜಾಗೃತವಾಗಬೇಕಿದೆ” -ಎ.ಆರ್.ಜಿ.ಪದವಿ ಪೂರ್ವ ಕಾಲೇಜು ಸ್ನೇಹ ಸಂಪದದಲ್ಲಿ ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ- ಹೇಳಿದರು ಶಾಲಾ ಕಾಲೇಜುಗಳ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿನ ಸ್ವ ಸಾಮರ್ಥ್ಯದ ಅರಿವಿನ ಜಾಗೃತಿಗೆ ಕಾರಣವಾಗಬೇಕು ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಕರೆ ಕೊಟ್ಟರು. ಅವರಿಂದು ನಗರದ ಎ ಆರ್ ಜಿ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ,ಕ್ರೀಡಾ, ಎನ್ ಎಸ್ ಎಸ್, ಎನ್ ಸಿ ಸಿ ಚಟುವಟಿಕೆಗಳ ಉದ್ಘಾಟನೆ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ‘ಸ್ನೇಹ ಸಂಪದ’ದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಶಿಕ್ಷಣದಿಂದ ದೊರೆಯುವ ವಿದ್ವತ್ತಿನ ಜೊತೆಗೆ ವಿವೇಕ ಮತ್ತು ವಿವೇಚನೆಗಳು ಸಹಾ ಒಡಗೊಂಡಾಗ ಯಾವುದೂ ಅಸಾಧ್ಯವೆನಿಸುವುದಿಲ್ಲ, 800 ಕೋಟಿ ದಾಟಿರುವ ವಿಶ್ವದ ಜನಸಂಖ್ಯೆಯಲ್ಲಿ 139 ಕೋಟಿ ದಾಟಿರುವ ಭಾರತದ ಜನಸಂಖ್ಯೆಯು ಶೇಕಡ 64 ಕ್ಕೂ ಹೆಚ್ಚು ಯುವಕ ಯುವತಿಯರನ್ನು ಹೊಂದಿದ್ದು ಇಡೀ ವಿಶ್ವವೇ ಭಾರತದ ಈ ಯುವಶಕ್ತಿಯ ಕಡೆಗೆ ಗಮನಿಸುತ್ತಿದ್ದು ಈ ಯವಶಕ್ತಿಯು ಯುವ ಸಂಪನ್ಮೂಲವಾಗಿ ಹೊರಹೊಮ್ಮಿದಲ್ಲಿ ಜಗತ್ತನ್ನೇ ಆಳಬಲ್ಲವರಾಗಿದ್ದು ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವಿಧಾನವು ವಿದ್ಯಾರ್ಥಿಗಳನ್ನುಪ್ರೇರೇಪಿಸಬೇಕಾಗಿದೆ ಎಂದ ಎಚ್ ಬಿ ಮಂಜುನಾಥ್ ಇದು ಕಾರ್ಯಗತವಾದಲ್ಲಿ ಭಾರತದ ಆರ್ಥಿಕ ಶಕ್ತಿಯು ಪ್ರಸ್ತುತ 3.9 ಟ್ರಿಲಿಯನ್ ಡಾಲರ್ ಗಳಿಂದ 5 ಟ್ರಿಲಿಯನ್ ಡಾಲರ್ ಗಳಿಗೆ ತಲುಪುವುದು ಸುಲಭ ಸಾಧ್ಯವಾಗಲಿದೆ ಎಂದರು. ಆರ್ಥಿಕ ಸಾಮಾಜಿಕ ವಾಣಿಜ್ಯಾತ್ಮಕ ವಿಷಯಗಳ ಅಧ್ಯಯನ ಮಾಡುವ ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳು ಇದರ ಸಾಕಾರದಲ್ಲಿ ಹೆಚ್ಚು ಚಿಂತಿಸಬೇಕಿದೆ, ಶಾಲಾ ಕಾಲೇಜುಗಳ ವಾರ್ಷಿಕ ಪರೀಕ್ಷೆಗಳನ್ನೆದುರಿಸಲು ಶೈಕ್ಷಣಿಕ ಜ್ಞಾನವು ಸಾಧನವಾದರೆ ಜೀವನ ಪರೀಕ್ಷೆ ಎದುರಿಸಲು ಅನುಭವಾಧಾರಿತ ಜ್ಞಾನ ಅವಶ್ಯ, ಪಠ್ಯೇತರವಾದ ಸಾಂಸ್ಕೃತಿಕ ಚಟುವಟಿಕೆಗಳಿಂದ ಮನೋಸ್ಥೈರ್ಯವೂ, ಕ್ರೀಡಾ ಚಟುವಟಿಕೆಗಳಿಂದ ದೈಹಿಕ ಸಾಮರ್ಥ್ಯವು, ಎನ್ ಎಸ್ ಎಸ್ ಚಟುವಟಿಕೆಗಳಿಂದ ಗ್ರಾಮೀಣ ಬದುಕಿನ ಅನುಭವವೂ, ಎನ್ ಸಿ ಸಿ ಚಟುವಟಿಕೆಗಳಿಂದ ರಾಷ್ಟ್ರ ರಕ್ಷಣೆಯ ಪರಿಕಲ್ಪನೆಯೂ ಜಾಗೃತವಾಗಲು ಸಹಕಾರಿ ಎಂದರು. ಕಾಲೇಜಿನ ಅಧ್ಯಕ್ಷರಾದ ಎ.ಜಿ. ಮಂಜುನಾಥ್ ಮುಖ್ಯ ಅತಿಥಿಗಳಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಎ ಆರ್ ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಜೆ ಬಿ ಬೋರಯ್ಯ ಉಪಸ್ಥಿತರಿದ್ದು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ ಬೊಮ್ಮಣ್ಣ ಅಧ್ಯಕ್ಷೀಯ ನುಡಿಗಳನ್ನಾಡಿದರು. ಹರ್ಷ ಎ ಮತ್ತು ಸಂಜನಾ ವಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಉಮಾ ಮತ್ತು ಸಂಗಡಿಗರು ಹಾಡಿದರು. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತವನ್ನು ಕನ್ನಡ ಉಪನ್ಯಾಸಕ ಡಿ ಬಿ ಬಸವರಾಜ್ ಕೋರಿದರು. ಪ್ರತಿಭಾ ಪುರಸ್ಕಾರ ಕಾರ್ಯವನ್ನು ಅರ್ಥಶಾಸ್ತ್ರ ಉಪನ್ಯಾಸಕ ಬಸವರಾಜ ಕಲಕಟ್ಟಿ ನಿರ್ವಹಿಸಿದರು. ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ರವಿಕುಮಾರ್ ಸಿ ವಂದನೆಗಳನ್ನು ಸಮರ್ಪಿ ಸಿದರು.