Wednesday, May 6, 2026
Homeಆರೋಗ್ಯವಿಶ್ವದಾದ್ಯಂತ ಆತ್ಮಹತ್ಯೆ ಸುಮಾರು ೮ ಲಕ್ಷ ಜನ ಹಾಗೂ ಭಾರತದಲ್ಲಿ ಶೇಕಡ ೯೦,೦೦೦ ಕ್ಕೂ ಹೆಚ್ಚು...

ವಿಶ್ವದಾದ್ಯಂತ ಆತ್ಮಹತ್ಯೆ ಸುಮಾರು ೮ ಲಕ್ಷ ಜನ ಹಾಗೂ ಭಾರತದಲ್ಲಿ ಶೇಕಡ ೯೦,೦೦೦ ಕ್ಕೂ ಹೆಚ್ಚು ಜನ ಪ್ರತಿ ೪೦ ಸೆಕೆಂಡುಗಳಿಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ

ಆತ್ಮಹತ್ಯೆ ಕುರಿತಾದ ಕೆಲವು ವಾಸ್ತವಾಂಶಗಳು:-
ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆಯ ಪ್ರಕಾರ ವರ್ಷದಲ್ಲಿ ವಿಶ್ವದಾದ್ಯಂತ ಸುಮಾರು ೮ ಲಕ್ಷ ಜನ ಹಾಗೂ ಭಾರತದಲ್ಲಿ ಶೇಕಡ ೯೦,೦೦೦ ಕ್ಕೂ ಹೆಚ್ಚು ಜನ ಪ್ರತಿ ೪೦ ಸೆಕೆಂಡುಗಳಿಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗೆ ೨೫ ಬಾರಿ ಆತ್ಮಹತ್ಯೆ ಆಲೋಚನೆ ಬರುತ್ತದೆ. ಆತ್ಮಹತ್ಯೆಗೆ ಶರಣಾಗುವವರ ವಯಸ್ಸು ೧೫ ರಿಂದ ೨೯ ವರ್ಷದ ವಯೋಮಾನದವರಾಗಿದ್ದಾರೆ. ಮತ್ತು ಸಾವಿನ ಕಾರಣಗಳಲ್ಲಿ ಜಾಗತಿಕ ಮಟ್ಟದಲ್ಲಿ ಆತ್ಮಹತ್ಯೆಯು ೧೫ನೇ ಸ್ಥಾನದಲ್ಲಿದೆ. ಆದ್ದರಿಂದ ಸಮುದಾಯದಲ್ಲಿ ಪ್ರತಿವರ್ಷವೂ ಸೆಪ್ಟೆಂಬರ್ ೧೦ರಂದು ಅಂತಾರಾಷ್ಟಿçÃಯ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಜನಸಾಮಾನ್ಯರಲ್ಲಿ ಆತ್ಮಹತ್ಯೆಗಿರುವ ಕಳಂಕವನ್ನು ಹೋಗಲಾಡಿಸಲು ಮನೋವೇದ್ಯಕೀಯ ಶಿಕ್ಷಣದ ಮೂಲಕ ಅರಿವನ್ನು ಮೂಡಿಸುವ ಕಾರ್ಯಕ್ರಮನ್ನು ಆಚರಿಸಲಾಗುತ್ತದೆ.
ಆತ್ಮಹತ್ಯೆ ಎಂದರೇನು ?
ಆತ್ಮಹತ್ಯೆ ಎಂದರೆ ವ್ಯಕ್ತಿಯು ತನ್ನನ್ನು ತಾನೇ ಉದ್ದೇಶ ಪೂರ್ವಕವಾಗಿ ಹತ್ಯೆ ಮಾಡಿಕೊಳ್ಳುವುದಾಗಿದೆ. ಆತ್ಮಹತ್ಯೆ ಎನ್ನುವ ಪದ ಖಿನ್ನತೆ ಖಾಯಿಲೆಯ ಲಕ್ಷಣವಾಗಿದ್ದು. ಇದು ಜಗತ್ತಿನಲ್ಲಿ ಶೇಕಡ ೧೫-೨೦ ಜನರನ್ನು ಕಾಡುತ್ತಿರುವ ಈ ಖಾಯಿಲೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಸಾವiರ್ಥ್ಯವನ್ನು ಕುಗ್ಗಿಸುವಲ್ಲಿ ಪ್ರಮುಖವಾದದ್ದು ಮತ್ತು ಆತ್ಮಹತ್ಯೆ ಒಂದು ಸಮಾಜದಲ್ಲಿ ಪಿಡುಗಾಗಿ ಜಗತ್ತಿನಾದ್ಯಂತ ಸರ್ವವ್ಯಾಪಿಯಾಗಿ, ಸಮಾಜಕ್ಕೆ ಸವಾಲಾಗಿದೆ.
ಆತ್ಮಹತ್ಯೆ ಕಾರಣಗಳು ಈ ಕೆಳಗಿನಂತಿವೆ:

೧. ಮಾನಸಿಕ ಖಾಯಿಲೆಗಳಿಂದ
೨. ಹಠಾತ್ ನಿರ್ಧಾರದಿಂದ
೩. ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆಗಳಿಂದ
೪. ಕುಟುಂಬದಲ್ಲಿ ಆತ್ಮಹತ್ಯೆಯ ಇತಿಹಾಸವಿದ್ದರೆ
೫. ನಕಾರಾತ್ಮಕ ಆಲೋಚನೆಗಳು
೬. ವ್ಯಕ್ತಿತ್ವ ದೋಷಗಳು
೭. ಮಾದಕ ಮತ್ತು ಮದ್ಯ ವ್ಯಸನ ಸೇವನೆಯಿಂದ
೮. ಸಾಮಾಜಿಕ ಸಮಸ್ಯೆ
೯. ಜೀವನದಲ್ಲಾಗುವ ಒತ್ತಡ ಕಾರಕಾಂಶಗಳು
೧೦. ಮಾನಸಿಕ ದೌರ್ಬಲ್ಯತೆಯಿಂದ
೧೧. ತೀವ್ರತರ ದೈಹಿಕ ಖಾಯಿಲೆಗಳಿಂದ (ಹೆಚ್.ಐ.ವಿ, ಕ್ಯಾನ್ಸರ್ ಇತ್ಯಾದಿ)
೧೨. ಆತ್ಮಹತ್ಯೆ ವರ್ತನೆಗಳಿಂದ

ಆತ್ಮಹತ್ಯೆ ಮತ್ತು ಮಾನಸಿಕ ಸಮಸ್ಯೆಗಳು
೧. ತೀವ್ರತರ ಖಿನ್ನತೆಯಿಂದ ೫೦ ರಿಂದ ೬೦ ರಷ್ಟು
೨. ಚಿತ್ತವಿಕಲತೆ ೧೦ ರಿಂದ ೧೫ ರಷ್ಟು
೩. ಮದ್ಯಪಾನ ದುರ್ಬಳಕೆಯಿಂದ ೫ ರಿಂದ ೧೦ ರಷ್ಟು
೪. ವ್ಯಕ್ತಿತ್ವ ದೋಷಗಳಿಂದ ೫ ರಿಂದ ೧೦ ರಷ್ಟು

ಆತ್ಮಹತ್ಯೆಯ ಎಚ್ಚರಿಕೆಯ ಚಿಹ್ನೆಗಳು:
೧. ಸಾಯುವುದರ ಬಗ್ಗೆ ಅತಿಯಾಗಿ ಮಾತನಾಡುವುದು ಮತ್ತು ಹಾನಿಕಾರಕ ವಸ್ತುಗಳನ್ನು ಸಂಗ್ರಹಿಸುವುದು
೨. ಬದುಕು ನಿಷ್ಪçಯೋಜನ ಎನ್ನಿಸುವುದು ಮತ್ತು ಭವಿಷ್ಯದ ಬಗ್ಗೆ ಭರವಸೆ ಇಲ್ಲದಿರುವುದು
೩. ವಿಷಯಗಳನ್ನು ಮುಚ್ಚಿಡುವುದು, ನನ್ನವರು ಯಾರು ಇಲ್ಲ ಎಂಬುವ ಭಾವನೆ ಮತ್ತು ಬೇರಯವರಿಗೆ ಹೊರೆಯಾಗುತ್ತೇನೆಂಬ ಭಾವನೆ
೪. ಸಾವಿನ ಕುರಿತು ಇತರೊಂದಿಗೆ ಚರ್ಚೆ ಮತ್ತು ತನ್ನ ಜವಾಬ್ದಾರಿಗಳನ್ನು ಬೇರೆಯವರಿಗೆ ಹಸ್ತಾಂತರಿಸುವುದು
೫. ಮAಕಾಗಿರುವುದು, ಏಕಾಂಗಿತನ, ಕೆಲಸ ಕಾರ್ಯದಲ್ಲಿ ನಿರ್ಲಕ್ಷೆö್ಯ, ಜಡತ್ವ ಮತ್ತು ಮಾದಕ ವಸ್ತುಗಳ ಅತಿಯಾದ ಬಳಕೆ
೬. ಸ್ನೇಹಿತ ಕುಟುಂಬದವರನ್ನು ಕೊನೆಯದಾಗಿ ಭೇಟಿಗೆ ಬಂದಿರುವೆನೆನ್ನುವುದು.
೭. ಆಕ್ರಮಣ ಶೀಲತೆ ಮತ್ತು ಮುಂಗೋಪಿತನ.

ಆತ್ಮಹತ್ಯೆ ತಡೆಗಟ್ಟುವ ವಿಧಾನಗಳು:
೧. ಪ್ರಾರಂಭಿಕ ಹಂತದಲ್ಲಿ ಗುರುತಿಸುವುದು
೨. ಆತ್ಮಹತ್ಯೆ ಪ್ರಯತ್ನ ಮಾಡುವಂತಹ ವ್ಯಕ್ತಿಯ ಜೊತೆ ಸಂಪರ್ಕ, ಸಂವಹನ, ಆರೈಕೆ ಮಾಡುವುದು ಮತ್ತು ಒಂಟಿಯಾಗಿ ಬಿಡಬಾರದು.
೩. ಮಾದಕ ಮತ್ತು ಮದ್ಯ ವ್ಯಸನದಿಂದ ದೂರವಿರುವಂತೆ ತಿಳಿಹೇಳುವುದು
೪. ಕುಟುಂಬದವರು ವ್ಯಕ್ತಿಯೊಡನೆ ಉತ್ತಮ ಸಂವಹನದಿAದ ಬೆಂಬಲಿಸುವುದು
೫. ಸಾಮಾಜಿಕ ಬೆಂಬಲ ಸಿಗುವಂತೆ ಮಾಡುವುದು
೬. ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಎಂದು ತಿಳಿ ಹೇಳುವುದು
೭. ವ್ಯಕ್ತಿಯನ್ನು ಸರಿಯಾದ ದಾರಿಯಲ್ಲಿ, ಸಮಾಜಕ್ಕೆ ತಕ್ಕಂತೆ ಅನುಸರಿಸುವುದು ಅಥವಾ ಮುನ್ನಡೆಸಬೇಕು
೮. ದೈನಂದಿನ ಧ್ಯಾನ, ಪ್ರಾಣಯಾಮ, ವ್ಯಾಯಮಗಳ ಅಭ್ಯಾಸ ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸುವುದು,
೯. ಮನರಂಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡÀÄವುದು
೧೦. ಸೂಕ್ತವಾದ ಮನೋವೈದ್ಯಕೀಯ ಗಮನ ಮತ್ತು ಚಿಕಿತ್ಸೆಗೆ ಪ್ರೇರೆಪಿಸುವುದು

ನಮ್ಮ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಸಿಗುವಂತಹ ಸೌಲಭ್ಯಗಳು:
೧. ಗುಣಮಟ್ಟದ ಔಷಧಿ ಚಿಕಿತ್ಸೆ
೨. ಆಪ್ತ ಸಮಾಲೋಚನೆ ಮತ್ತು ಸಲಹೆ
೩. ಮನೋವೈದ್ಯಕೀಯ ಶಿಕ್ಷಣ
೪. ಮನೆ ಭೇಟಿ ಕಾರ್ಯಕ್ರಮ
೫. ಮಾನಸಧಾರ ಹಗಲು ಆರೈಕೆ ಕೇಂದ್ರದಲ್ಲಿ ವೃತ್ತಿಪರ ತರಬೇತಿ ಶಿಕ್ಷಣ ಮತ್ತು ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಒದಗಿಸುವುದು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಆರೋಗ್ಯ ಸಹಾಯವಾಣಿ “೧೦೪”
ನಿಮ್ಮ ಹತ್ತಿರದ ಪ್ರಾಥಮಿಕ / ಸಮುದಾಯ / ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಮನೋವೈದ್ಯರನ್ನು ಸಂಪರ್ಕಿಸಬಹುದು.
ವಂದನೆಗಳೊAದಿಗೆ ಇಂತಿ ತಮ್ಮ ವಿಶ್ವಾಸಿ
ಡಾ. ಮಂಜುನಾಥ ಎಲ್. ಪಾಟೀಲ್
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳು
ಆರೋಗ್ಯ ಇಲಾಖೆ ದಾವಣಗೆರೆ
ಮೊ: ೯೪೪೮೮೯೮೭೫೧

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments