ವಿಜಯಪುರ : ವಿಜಯಪುರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ೪೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡವನ್ನು
ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ ಪರಿಶೀಲನೆ ನಡೆಸಿದರು.
ಆಸ್ಪತ್ರೆ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು, ಕಾಮಗಾರಿಯಲ್ಲಿ ಗುಣಮಟ್ಟದ ಕಾಯ್ದುಕೊಳ್ಳಬೇಕು, ವೈದ್ಯರ ಸಲಹೆಯನ್ನು ಆಧರಿಸಿ ಕೋಣೆ ಮೊದಲಾದವುಗಳನ್ನು ನಿರ್ಮಿಸಿ ಎಂದರು.
ಜನವರಿ ೧೫ ರೊಳಗಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.
ಇದು ವಿಜಯಪುರ ಜನತೆಗೆ ಉತ್ತಮ ಆರೋಗ್ಯ ಒದಗಿಸಲಿದ್ದು, ಚಿಕಿತ್ಸೆಗಾಗಿ ದೂರದ ಮೀರಜ್, ಸಾಂಗ್ಲಿ, ಸೊಲ್ಲಾಪೂರ ಮೊದಲಾದ ಊರುಗಳಿಗೆ ಹೋಗುವುದು ತಪ್ಪುತ್ತದೆ, ಸುಲಭವಾಗಿ ಇಲ್ಲಿಯೇ ಚಿಕಿತ್ಸೆ ದೊರಕಲಿದೆ, ಸುಸಜ್ಜಿತ ವೈದ್ಯಕೀಯ ಉಪಕರಣ, ತಜ್ಞ ವೈದ್ಯರ ಸೇವೆ ಇಲ್ಲಿಗೆ ಲಭ್ಯವಾಗಲಿದೆ,
ಈ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಾರ್ಡಿಯೋಲಾಜಿ, ಪ್ಲಾಸ್ಟಿಕ್ ಸರ್ಜರಿ, ನ್ಯೂರೋ ಸರ್ಜರಿ, ಸೇರಿದಂತೆ ಅನೇಕ ಮಹತ್ವದ ಚಿಕಿತ್ಸೆಗಳನ್ನು ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒದಗಿಸಲಾಗುತ್ತಿದೆ ಎಂದರು.
ಜನರಿಗೆ ಅನುಕೂಲಕರವಾದ ಈ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದರು.
ಎಂದು ಆಸ್ಪತ್ರೆಯ ಉದ್ದೇಶ, ಕಾರ್ಯಯೋಜನೆಗಳ ಕುರಿತು ಸುದೀರ್ಘವಾಗಿ ವಿವರಿಸಿದರು.
ಟ್ರಾಮಾ ಕೇಂದ್ರದ ಸೇವೆಯನ್ನು ಸಹ ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕೆ. ಆನಂದ, ಸಿಇಓ ರಿಷಿ ಆನಂದ, ಜಿಲ್ಲಾ ಆರೋಗ್ಯ. ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಂಪತ್ ಗುಣಾರೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ.ಜಾವೀದ ಜಮಾದಾರ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಇಲಿಯಾಸ ಅಹ್ಮದ್ ಸಿದ್ದಿಕಿ, ಬಾಬಾಸಾಹೇಬ ವಿಜಯದಾರ, ಜಿಲ್ಲಾ ಆಸ್ಪತ್ರೆ ಸಲಹಾ ಸಮಿತಿ ಸದಸ್ಯರು, ವೈದ್ಯರು ಪಾಲ್ಗೊಂಡಿದ್ದರು.

