ದಾವಣಗೆರೆ ಸೆ..24:ದಲಿತ ಹಿಂದುಳಿದ ಅಲ್ಪಸಂಖ್ಯಾತರ ಹಿರಿಯ ಸ್ಥಾನ ದಲ್ಲಿರುವ ಕುರುಬ ಸಮುದಾಯದವರಿಗೇ ಈ ಭಾರಿಯ ಲೋಕಸಭಾ ಸಭಾ ಟಿ ಕೆಟ್ ನೀಡುವಂತೆ ಒತ್ತಾಯಿಸಲಾಗುವುದೆಂದು ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಸಚಿವ ಅಖಿಲ ಭಾರತ ಕುರುಬ ಸಮುದಾಯದ ಸಂಘಟನೆ ರಾಷ್ಟ್ರೀಯ ಉಪಾಧ್ಯಕ್ಷ ಹೆಚ್ ಎಂ ರೇವಣ್ಣ ಆಗ್ರಹ ಮಾಡಿದರು.
ನಗರದ ಅಕ್ಕಮಹಾದೇವಿ ರಸ್ತೆಯಲ್ಲಿ ಇರುವ ಗುರುಭವನದಲ್ಲಿ ಶೇಪರ್ಡ್ಸ ಇಂಡಿಯಾ ಇಂಟರ್ ನ್ಯಾಷನಲ್ ಮೀಟ್ ಪೂರ್ವ ಭಾವಿ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.
ಎಲ್ಲಾ ಸಮುದಾಯದಗಳು ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತವಾಗುತ್ತಿದ್ದು ಈಗಾಗಲೇ ದಲಿತ, ಗೊಲ್ಲ ಯಾದವ್ ರು ಲಂಬಾಣಿ ಬಂಜಾರ ಸಮುದಾಯದ ಅಡಿಯಲ್ಲಿ ಸಾಮಾಜಿಕ ನ್ಯಾಯ, ರಾಜಕೀಯವಾಗಿ ಸಂಘಟನೆ ಮಾಡಿ ದೇಶದಲ್ಲೇ ತಮ್ಮ ಮೂಲ ಭೂತ ಹಕ್ಕುಗಳ ಪ್ರತಿಪಾದನೆ ಮಾಡುತ್ತಿವೆ.
ಈ ಕಾರಣದಿಂದ ರಾಜಕೀಯ ವಾಗಿ ಸುಮಾರು ಮೂರು ದಶಕಗಳ ಕಾಲ ಇಲ್ಲಿ ಅಹಿಂದ ವರ್ಗದವರಿಗೆ ಯಾವುದೇ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ, ಈಗಾಗೀ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹಿಂದುಳಿದ ಕುರುಬ ಜನಾಂಗದ ಸೂಕ್ತ ವ್ಯಕ್ತಿ ಗೇ ಎಲ್ಲಾ ಸಮುದಾಯದ ಜತೆ ಒಡನಾಟ ಹೊಂದಿರುವ ಒಟ್ಟಾರೆ ಕುರುಬರಿಗೆ ಟಿಕೆಟ್ ಕೊಡಿ ಎಂದು ಕೇಳಲು ಯಾವುದೇ ರೀತಿಯ ಅಂಜಿಕೆ ಇಲ್ಲ, ಇದು ಸಿದ್ಧರಾಮಯ್ಯ ನವರ ಸಾಮಾಜಿಕ ನ್ಯಾಯ, ಮೌಲ್ಯಯುತ ರಾಜಕಾರಣ ಎಂದು ರೇವಣ್ಣ ಒತ್ತು ಕೊಟ್ಟು ಹೇಳಿದರು.
ಪ್ರಪಂಚದ ಎಲ್ಲೇಲ್ಲೀ ಕುರಿ ಕಾಯುವ ಕಸುಬು ಮಾಡವರೋ ಅವರನ್ನು ಕುರುಬರು ಎನ್ನಲಾಗುತ್ತಿದೆ
ಅಲೆಮಾರಿ, ಬುಡಕಟ್ಟು ಜನಾಂಗದ ಈ ಕುರುಬರನ್ನೆ ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತವಾಗುತ್ತಿದ್ದು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ,ಗಡಾರೀಯ ಧನಗರ್,ಗೊಂಡ, ರಆಜಗಓಂಡ, ಪಾಲ್,ಕುರುಂಬ, ಗೊಲ್ಲಡು, ಕುರುಂಬರ್ ಹಲವಾರು ಹೆಸರುಗಳಿಂದ ಗುರುತಿಸಲಾಗುತ್ತದೆ.
ಆದರೆ ಮೀಸಲಾತಿ ಸೌಲಭ್ಯ ಇಲ್ಲದ ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ವಾಗಿ ಹಿಂದುಳಿದ ಈ ಸಮಾಜವನೂ ಒಂದೇ ವೇದಿಕೆಯಡಿ ಸಂಘಟಿಸಿ ಸಾಮೂಹಿಕ ವೇದಿಕೆಗೇ ಕರೆದು ತರುವ ಸಾಮಾಜಿಕ ಜವಾಬ್ದಾರಿ ಇದೆ ಎಂದು ರೇವಣ್ಣ ತಿಳಿಸಿದರು
ದಾವಣಗೆರೆ ಹಲವು ದಾಖಲೆಗಳನ್ನು ಸೃಷ್ಟಿಸಿದ ಸ್ಥಳ
ಇಲ್ಲಿಂದಲೇ ಸಿದ್ಧರಾಮಯ್ಯ ನವರಿಗೆ ರಾಜಕೀಯ ಸ್ಥಾನಮಾನ ನೀಡಿದ ನೆಲೆಯೂ ಹೌದು, 1992 ಕನಕ ಗುರುಪೀಠದ ಸ್ಥಾಪನೆಗೆ ಬುನಾದಿ ಹಾಕಿಕೊಟ್ಟ ಊರು,
ಚೆನ್ನಯ್ಯ ಒಡೆಯರ್ ಕೆ ಮಲ್ಲಪ್ಪ,ನವರಂತಹ ಹಲವು ಸಮಾಜದ ಮುತ್ಸದ್ಧಿ ಗಳು ಸೇವೆಗೈದ ಕ್ಷೇತ್ರ ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯದ ಜನರು ಎಷ್ಟೋ ಸುಧಾರಣೆ ಯಾಗಿದ್ದಾರೆ.
ಪ್ರಪಂಚದೇಲ್ಲಡೇ ಇರುವ ಕುರುಬ ಸಮಾಜವನ್ನು ಒಗ್ಗೂಡಿಸಲು ರಾಷ್ಟ್ರ ಮಟ್ಟದ ಅಖಿಲ ಭಾರತ ಕುರುಬ ಸಂಘ ಎಂಬ ಹೆಸರಿನ ಅಡಿಯಲ್ಲಿ ನೋಂದಣಿ ಪ್ರಕ್ರಿಯೆ ಆಗೋದು ಏನು ದೊಡ್ಡದಲ್ಲ, ಶೇಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ಜಾಗತೀಕರಣದ ಸಂದರ್ಭದಲ್ಲಿ ಇಂಥ ಸಂಘಟನೆ
ಇರಲೇಬೇಕು.ಎಂದರು.
ಇನ್ಸೇಟ್ಸ್ ಐಎಎಸ್ ದಾವಣಗೆರೆ ಲೋಕಸಭಾ ಟಿಕೆಟ್ ಆಕಾಂಕ್ಷಿ ವಿನಯ್ ಕುಮಾರ್ ರವರು ಮಾತನಾಡಿ ನಾನೇನೋ ಐಎಎಸ್ ಐಪಿಎಸ್ ಕೋಚಿಂಗ್ ಸೆಂಟರ್ ಪ್ರತಿ ರಾಜ್ಯದ ಪ್ರಮುಖ ಸ್ಥಳಗಳು, ಊರಲ್ಲಿ ಮಾಡಿರುವೆ.
ಇದೇ ಸಂದರ್ಭದಲ್ಲಿ ಯಾರೂ ತಪ್ಪು ಭಾವನೆ ಇಲ್ಲದೇ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ಅಲ್ಪಸಂಖ್ಯಾತರ ಅಭಿವೃದ್ಧಿ ದೃಷ್ಟಿಯಿಂದ ಒಂದಿಷ್ಟು ಯುವ ಉತ್ಸಾಹಿ ಯುವ ತರುಣರಿಗೆ ಉಚಿತ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು
ನನ್ನದೇ ಕಳಕಳಿಚರ್ಚೆ ನಡೆಯುತ್ತಿದೆ.ಎಂದರು.
ಇದೇ ಸಂದರ್ಭದಲ್ಲಿ ರೇವಣ್ಣ ಅವರು ಹೇಳುವ ಮುನ್ನ ವಿನಯ್ ಇದೇ ಸಂಸ್ಥೆ ಕುರುಬರ ಆರ್ಥಿಕ ಸ್ಥಿತಿ ಸುಧಾರಣೆ ಗೊಳಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದೆ ಎಂದರು.
ವೇದಿಕೆಯಲ್ಲಿ ರಾಜ್ಯ ಪದಾಧಿಕಾರಿಗಳಾದ ಸಿ ಎಂ ನಾಗರಾಜ್, ಅಧ್ಯಕ್ಷ ರು ಖಚಾಂಚಿ ಎಂ ಜಯಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಪ್ರೇಮಾ ಲತಾ, ದಾವಣಗೆರೆ ಪಾಲಿಕೆ ಸದಸ್ಯ ಶ್ರೀನಿವಾಸ, ದಾವಣಗೆರೆ ಲೋಕಸಭಾ ಟಿಕೆಟ್ ಮತ್ತೋರ್ವ ಆಕಾಂಕ್ಷಿ ಶಿವಕುಮಾರ್ ಒಡೆಯರ್ ಪ್ರಸನ್ನ ಕುಮಾರ್,
ನಾ.ಲೋಕೇಶ್ ಒಡೆಯರ್, ಲೋಕಿಕೆರೆ ಸಿದ್ದಪ್ಪ, ಹರಪನಹಳ್ಳಿ ಪರಶುರಾಮ,
ಮುದಹದಡಿ ದಿಳ್ಳೆಪ್ಪ, ದಾವಣಗೆರೆ ಜಿಲ್ಲೆಯ ಕುರುಬ ಸಮಾಜದ ಬಾಂಧವರು, ಹೆಚ್ಚಿನ ಸಂಖ್ಯೆಯಲ್ಲಿ ಸಂಭ್ರಮ, ಸಡಗರದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೇ ಕಾರಣರಾದರು.
ಚಿತ್ರ ದುರ್ಗ, ದಾವಣಗೆರೆ ಜಿಲ್ಲೆ ಎಲ್ಲಾ ತಾಲೂಕು ಮಟ್ಟದ
ಮುಖಂಡರು, ಮಹಿಳಾ ಧುರೀಣರು, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ