ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯ ಅಂಗವಾಗಿ ಕಳೆದ ವರ್ಷದಿಂದ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೀಡಲಾಗುವ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಯು ಈ ಭಾರಿ ಅದಿತಿ ಅಶೋಕ್, ನಿತಿನ್ ಕಾಮತ್ ಹಾಗೂ ಜಯದೇವ ಹೃದ್ರೋಗ ಸಂಸ್ಥೆಗೆ ನೀಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಈ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು ಹಾಗೂ ಕೆಂಪೇಗೌಡರ ಪ್ರತಿಮೆಯನ್ನು ಒಳಗೊಂಡಿದೆ. ಕಳೆದ ವರ್ಷ ಈ ಪ್ರಶಸ್ತಿಯನ್ನು ಇನ್ಫೋಸಿಸ್ ಸಂಸ್ಥಾಪಕ ಏನ್.ಆರ್.ನಾರಾಯಣ ಮೂರ್ತಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಗೆ ನೀಡಲಾಗಿತ್ತು.
ಬೆಂಗಳೂರಿನವರಾದ ಅದಿತಿ ಅಶೋಕ್ ಭಾರತದ ಖ್ಯಾತ ಗಾಲ್ಫ್ ಆಟಗಾರ್ತಿಯಾಗಿದ್ದು ಪ್ರಸ್ತುತ ಲೇಡೀಸ್ ಯುರೋಪಿಯನ್ ಟೂರ್ (LET) and LPGA Tour ನಲ್ಲಿ ವೃತ್ತಿಪರ ಗಾಲ್ಫ್ ಆಟಗಾರ್ತಿಯಾಗಿದ್ದರೆ. ಇವರು ತಮ್ಮ 18ನೇ ವಯಸಿನಲ್ಲಿ 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್ ನಲ್ಲಿ ಅತ್ಯಂತ ಕಿರಿಯ ವಯಸ್ಸಿನ ಗಾಲ್ಫ್ ಆಟಗಾರ್ತಿಯಾಗಿ ಹಾಗೂ ಭಾರತದ ಏಕೈಕ ಮಹಿಳಾ ಗಾಲ್ಫ್ ಆಟಗಾರ್ತಿಯಾಗಿ ಸ್ಪರ್ದಿಸಿದ್ದರು ಮತ್ತು 2020ರಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್ ನಲ್ಲಿ 4ನೇ ಸ್ಥಾನ ಪಡೆದಿದ್ದಾರೆ. 13 ಫೆಬ್ರವರಿ 2023 ರಂತೆ ಅಧಿಕೃತ ವಿಶ್ವ ಶ್ರೇಯಾಂಕದಲ್ಲಿ ಇವರು 143ನೇ ಸ್ಥಾನದಲ್ಲಿದ್ದಾರೆ.
ನಿತಿನ್ ಕಾಮತ್
ನಿತಿನ್ ಕಾಮತ್ ಕೂಡ ಬೆಂಗಳೂರಿನವರಾಗಿದ್ದು 2010ರಲ್ಲಿ ತಮ್ಮ ಸಹೋದರ ನಿಖಿಲ್
ಕಾಮತ್ ರವರೊಂದಿದೆ ಸಹ-ಸಂಸ್ಥಾಪಕರಾಗಿ ಝೆರೋಧ(Zerodha) ಕಂಪನಿ ಸ್ಥಾಪಿಸಿದರು. 2019ರಲ್ಲಿ ಇದು ಭಾರತದ ಅತೀ ದೊಡ್ಡ ಸ್ಟಾಕ್ ಬ್ರೋಕರ್ ಸಂಸ್ಥೆಯಾಯಿತು.
ಶ್ರೀ ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಸರ್ಕಾರ ನಡೆಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದ್ದು 1150 ಹಾಸಿಗೆಗಳನ್ನು ಪ್ರತ್ಯೇಕವಾಗಿ ಹೃದಯ ಸಂಬಂಧಿ ಚಿಕಿತ್ಸೆಗೆ ಮೀಸಲಿಟ್ಟಿದೆ. ಇದು ಆಗ್ನೇಯ ಏಷ್ಯಾದ ಹೃದಯ ಚಿಕಿತ್ಸೆಯ ಅತಿದೊಡ್ಡ ಏಕ ಕೇಂದ್ರವಾಗಿದೆ. ಇದು ಸಂಪೂರ್ಣವಾಗಿ ಅತ್ಯಾಧುನಿಕ ಕಾರ್ಡಿಯಾಕ್ ಕೇರ್ ಹೊಂದಿರುವ ಲಾಭರಹಿತ ಸಂಸ್ಥೆಯಾಗಿದ್ದು, ಸಮಾಜದ ಎಲ್ಲಾ ವರ್ಗಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಹೃದಯ ಆರೈಕೆಯನ್ನು ಮತ್ತು ಅರ್ಹ ಬಡವರಿಗೆ ಉಚಿತವಾಗಿ ನೀಡುತ್ತದೆ.ಡಾಕ್ಟರ್ ಮಂಜುನಾಥ್ ಇದರ ನಿರ್ದೇಶಕರಾಗಿದ್ದಾರೆ.