ಹುಣಸಗಿ: ಬಲಶೆಟ್ಟಿಹಾಳ ಗ್ರಾಮದ ಕರವೇ ಕಾರ್ಯಾಲಯದಲ್ಲಿ ಹುಣಸಗಿ ತಾಲೂಕು ಯುವ ಘಟಕದ ಅಧ್ಯಕ್ಷರಾದ ರಾಜು ಅವರಾದಿ ಅಧ್ಯಕ್ಷತೆಯಲ್ಲಿ ನಾಡಪ್ರಭು ಕೆಂಪೇಗೌಡರ 514 ನೇ ಜಯಂತಿಯನ್ನು ಆಚರಿಸಲಾಯಿತು.
ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಕೆಂಪೇಗೌಡರು ಬೆಂಗಳೂರು ಮಹಾನಗರವನ್ನು ಕಟ್ಟಿದ, ಸರ್ವಧರ್ಮವನ್ನು ಸಮನಾಗಿ ಕಂಡ ಹೆಮ್ಮೆಯ ಕನ್ನಡಿಗ, ಅನ್ನದಾತರಿಗೆ ನೆರವಾಗಲು ಸಾವಿರಾರು ಕೆರೆಗಳ ನಿರ್ಮಾಣ ಮಾಡಿದ ಕೆಚ್ಚೆದೆಯ ಕರುನಾಡ ಕರುಣಾಮಯಿಯಾಗಿದ್ದರು.
ಅಲ್ಲದೇ ನಾಡಪ್ರಭು ಕೆಂಪೇಗೌಡರು ದಕ್ಷ, ದೂರದೃಷ್ಟಿಯ, ಜನಾನುರಾಗಿ ನೀಡಿದ ಆಡಳಿತ ನಮ್ಮೆಲ್ಲರಿಗೂ ಮಾದರಿಯಾಗಿದ್ದು ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರು ನಾಡಿನ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆಡಳಿತಾತ್ಮಕ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿಕೊಂಡು ಹೋಗಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರವೇ ಘಟಕದ ಪದಾಧಿಕಾರಿಗಳು ಇದ್ದರು.
ಚಿತ್ರ: ಎಚ್.ಯು.ಎನ್ :೦೧) ಶ್ರೀ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಆಚರಣೆ ಮಾಡಲಾಯಿತು.
(ವರದಿ: ಬಾಪುಗೌಡ ಮೇಟಿ ಯಾದಗಿರಿ)