ಬೆಂಗಳೂರು ನಗರ ಜಿಲ್ಲೆ ಜುಲೈ 1: ಸರ್ಕಾರ ನಿಗದಿ ಪಡಿಸಿದ್ದ ದರಕ್ಕಿಂತ ಹೆಚ್ಚುವರಿ ಹಣವನ್ನು ಪಡೆದ ನಗರದ ಎಂ.ಎಸ್. ರಾಮಯ್ಯ ಖಾಸಗಿ ಆಸ್ಪತ್ರೆಯಿಂದ ಸರ್ಕಾರಿ ನೌಕರರಾದ ಡಿ ಗ್ರೂಪ್ ದರ್ಜೆಯ ಶ್ರೀಮತಿ ಸರಸ್ವತಮ್ಮ ಕೆ ಅವರಿಗೆ ಪರಿಶೀಲನಾ ಪ್ರಾಧಿಕಾರದ ವಿಭಾಗೀಯ ಸಹ ನಿರ್ದೇಶಕರ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೆಚ್ಚುವಾರಿ ಮೊತ್ತವನ್ನು ನೌಕರರಿಗೆ ಹಿಂದಿರುಗಿಸಿದೆ. ಖಾಸಗೀ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದಿದ್ದಲ್ಲಿ ಅಂತಹ ಪ್ರಕರಣಗಳ ಬಗ್ಗೆ ವಿಭಾಗೀಯ ಸಹ ನಿರ್ದೇಶಕರು, ಬೆಂಗಳೂರು ಇವರ ವಿಭಾಗ ಇ-ಮೇಲ್ djdblrdn.hfws@gmail.com ಮೂಲಕ ದೂರು ದಾಖಲಿಸಬಹುದಾಗಿದೆ ಎಂದು ಇಲಾಖೆಯ ಬೆಂಗಳೂರು ವಿಭಾಗೀಯ ಸಹ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.