Saturday, December 21, 2024
Homeಸಾರ್ವಜನಿಕ ಧ್ವನಿಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವತಿಯಿಂದ ಅದ್ದೂರಿ ಹಾಗೂ ಅರ್ಥಪೂರ್ಣ ಪತ್ರಿಕಾ ದಿನಾಚರಣೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವತಿಯಿಂದ ಅದ್ದೂರಿ ಹಾಗೂ ಅರ್ಥಪೂರ್ಣ ಪತ್ರಿಕಾ ದಿನಾಚರಣೆ

ಬೆಂಗಳೂರು: ೦1/7/2023 ರಂದು ಬೆಳಿಗ್ಗೆ 10.30 ಕ್ಕೆ ಬೆಂಗಳೂರು ನಗರದ ಮಲ್ಲೇಶ್ವರಂ ನ ಹನ್ನೊಂದನೆ ಕ್ರಾಸ್ ನಲ್ಲಿರುವ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀ ರಾಮಾನುಜ ಸಂಸ್ಕ್ರತಿ ಸಭಾ ಭವನದಲ್ಲಿ ಪೂಜಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದಲ್ಲಿ,ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾ.ಅಧ್ಯಕ್ಷರಾದ ಶ್ರೀ ಸಿದ್ದರಾಜು ರವರೊಂದಿಗೆ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿಎಸ್ಆರ್ ಪ್ರಶಸ್ತಿ ವಿಜೇತ ಹಾಗೂ ಪ್ರಜಾವಾಣಿ ಪತ್ರಿಕೆಯ ನಿ.ಮುಖ್ಯ ಉಪ ಸಂಪಾದಕರಾದಂತ ಶ್ರೀ ಗಂಗಾಧರ್ ಮೊದಲಿಯಾರ್ ರವರು ವಹಿಸಿದಂತ ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಮಾತನಾಡುತ್ತಾ ,ದೇಶಕ್ಕೆ ಸ್ವಾತಂತ್ರ್ಯ ದೊರೆತು 76 ವರ್ಷ ಕಳೆಯುತ್ತಾ ಬಂದಿದ್ದರೂ ಕರ್ನಾಟಕದಲ್ಲಿ ವರದಿಗಾರರಿಗೆ ಇನ್ನೂ ಸ್ವಾತಂತ್ರ್ಯ ಸಿಗದಿರುವುದು ನೋವಿನ ಸಂಗತಿ ಜೊತೆಗೆ ದೀಪದ ಬುಡದಲ್ಲಿ ಕತ್ತಲು ಎನ್ನುವಂತೆ ತಮ್ಮ ಪ್ರಾಣದ ಹಂಗನ್ನು ತೊರೆದು ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯ ಸಂಪರ್ಕ ಸೇತುವೆಯಾಗಿ ಬಡ ಹಾಗೂ ನೊಂದಂತ ಜನರ ಕಷ್ಟ ಕಾರ್ಪಣ್ಯಗಳಿಗೆ ಬರವಣಿಗೆಯ ಮುಖಾಂತರ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದರೂ ಸರ್ಕಾರ ಮಾತ್ರ ಕಣ್ಣಿದ್ದು ಕುರುಡುತನದಿಂದ ಪತ್ರಕರ್ತರಿಗೆ ಮೂಲಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ. ಮಂಗಳಮುಖಿಯವರ ಮೇಲೆ ಇರುವ ಕಾಳಜಿ ಪತ್ರಕರ್ತರು ಇಷ್ಟು ವರ್ಷಗಳ ಕಾಲ ಉಚಿತ ಬಸ್ ಪಾಸ್ ಗಾಗಿ ಹೋರಾಟ ನಡೆಸುತ್ತಿದ್ದರೂ ಬೇಡಿಕೆ ಈಡೇರಿಸದಿಲ್ಲದಿರುವುದು ದುರ್ಧೈವ. ಅನೇಕ ಕಡೆ ಪತ್ರಕರ್ತರ ಮೇಲೆ ಹಲ್ಲೆಗಳು,ಕೊಲೆಗಳು ನಡೆಯುತ್ತದ್ದರೂ ಪತ್ರಕರ್ತರ ರಕ್ಷಣಾ ಕಾಯ್ದೆಗೆ ಮುಂದಾಗುತ್ತಿಲ್ಲ ಎಂಬ ನೋವನ್ನು ಹಂಚಿಕೊಂಡರಲ್ಲದೇ ಈಗಿರುವ ಮಾಶಾಸನ ಯಾವುದಕ್ಕೂ ಸಾಲುತ್ತಿಲ್ಲ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಪತ್ರಿಕಾ ಭವನಗಳನ್ನು kuwj ಯ ಸುಪರ್ಧಿಯಿಂದ ವಿಮುಕ್ತಿ ಗೊಳಿಸಿ ಬೇರೆ ಪತ್ರಕರ್ತರ ಸಂಘಟನೆಯ ಕಾರ್ಯಕ್ರಮಗಳಿಗೆ ವಾರ್ತಾಧಿಕಾರಿಗಳ ಮೂಲಕ ನಿ ರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕಠಿಣ ನಿಯಮಗಳಿಂದಾಗಿ ಸಾವಿರಾರು ಪತ್ರಕರ್ತರು ರಾಜ್ಯದಲ್ಲಿ ಮಾಸಾಶನದಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಈಗಿರುವ ನಿಯಮಗಳನ್ನು ಸಡಿಲಿಸಲು ಈಗಾಗಲೇ ಕಾನಿಪ ಧ್ವನಿ ಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ,ಸಾರಿಗೆ ಸಚಿವರಿಗೆ,ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ,ವಿಧಾನ ಸಭಾಧ್ಯಕ್ಷರಿಗೆ ಹಾಗೂ ಕಾನೂನು ಮಂತ್ರಿ ಯವರಿಗೆ  ಮನವಿಯನ್ನು ಸಲ್ಲುಸಿದ್ದು,ಆಗಸ್ಟ್ 13 ರೊಳಗಡೆ ಸರ್ಕಾರ ಸ್ಪಂಧಿಸದಿದ್ದರೆ ಕೇಂದ್ರ ವಾರ್ತಾ ಇಲಾಖೆ ಮುಂಭಾಗದಲ್ಲಿ ಧರಣಿ ನಡೆದುವುದರ ಜೊತೆಗೆ ಹೈಕೋರ್ಟ ನಲ್ಲಿ ಈ ಕುರಿತು ರಿಟ್ ಫೈಲ್ ಮಾಡಲಾಗುವುದೆಂದು ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಪ್ರಾಸ್ತಾವಿಕ ನುಡಿಯಲ್ಲಿ ತಮ್ಮ ಕ್ರಾಂತಿಕಾರಿಕ ಮುಂದಿನ ನಡೆಯನ್ನು ಸಭೆಯಲ್ಲಿ ಹಂಚಿಕೊಂಡರು. ದಿವ್ಯ ಸಾನಿಧ್ಯ ವಹಿಸಿದಂತ ಸ್ವಾಮೀಜಿಗಳು ಈ ಹಿಂದೆ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದು ಪತ್ರಕರ್ತರ ನೋವು ನಲಿವುಗಳ ಬಗ್ಗೆ ಹತ್ತಿರದಿಂದ ನೋಡಿರುವ ಹಿನ್ನೆಲೆಯಲ್ಲಿ ನಿಜವಾಗಿ ಪತ್ರಕರ್ತರು ರಾಜ್ಯದಲ್ಲಿ ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ ಈ ಕುರಿತು ಸರ್ಕಾರ ಕ್ರಮಕ್ಕೆ ಮುಂದಾಗಬೇಕೆಂದರು ಹಾಗೂ ಮಾಧ್ಯಮದಲ್ಲಿ ಖಾದ್ರಿ ಶಾಮಣ್ಣನವರಿಂದ ಹಿಡಿದು ಜಯಶೀಲರಾವ್ ರವರೆಗೆ ಅನೇಕ ದಿಗ್ಗಜ ಪತ್ರಕರ್ತರುಗಳ ಒಡನಾಟ ಹೊಂದಿದ್ದನ್ನು ಈ ಸಂಧರ್ಭದಲ್ಲಿ ಮೆಲಕು ಹಾಕಿದರು. ಈ ಅರ್ಥಪೂರ್ಣ ಪತ್ರಿಕಾ ದಿನಾಚರಣೆ ಆಚರಣೆ ನಮ್ಮ ಮಠದಲ್ಲಿ ಆಚರಿಸಿದ್ದು ನಿಜಕ್ಕೂ ನನಗೆ ಮನಃ ಸಂತೋಷವಾಗಿದೆ, ದಿಗ್ಗಜ ನಾಡಿನ ಪತ್ರಕರ್ತರು ಹಾಗೂ ಸಾಧಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಪಡೆಯುತ್ತಿರುವುದು ಮಠಕ್ಕೆ ಮತ್ತಷ್ಟು ಮೆರಗನ್ನು ತಂದಿದೆ ಎಂದರು.  ಎಂ. ಮಹೇಶ್ ರವರು ,"ರಾಮನ ಅವತಾರ ರಘುಕುಲ ಸೋಮನ ಅವತಾರ" ಎಂಬ ಪ್ರಾರ್ಥನೆ ಗೀತೆಗೆ ಸ್ವಾಮೀಜಿ ಯಿಂದ ನೆರದಂತ ಗಣ್ಯಾತಿಗಣ್ಯರ ಪ್ರಶಂಶೆಗೆ ಒಳಪಟ್ಟಿದ್ದು ವಿಶೇಷ. ಮುಖ್ಯ ಅತಿಥಿಗಳಾಗಿ ರಾಷ್ಟ್ರ ಸಂತ ಸಮಿತಿಯ ಸಂಘಟನೆಯ ಕಾರ್ಯದರ್ಶಿಯಾದ ಡಾ.ಶ್ರೀಪರಮಾತ್ಮಾಜೀ ಮಹಾರಾಜ,ಲಹರಿ ಮ್ಯೂಜಿಕ್ ಕಂಪನಿಯ ಮಾಲಿಕರಾದ ಲಹರಿವೇಲು,ನಾಡಿನ ಹೆಸರಾಂತ ಗಾಯಕರಾದ ಗುರುರಾಜ ಹೊಸಕೋಟೆ,ಚಲನಚಿತ್ರ ಖ್ಯಾತ ನಟರಾದ ಅನಿರುದ್,ಹಂಸಲೇಖ ಪತ್ರಿಕೆಯ ಸಂಪಾದಕರಾದ ರಾಮಾಚಾರ್, ಡಾ.ಜಯಪ್ರಕಾಶ್,ಇಂಜನೀಯರ್ ಲೋಕೇಶ್,ಶಾಂತಮಲ್ಲಪ್ಪ,ಸಮಾಜ ಸೇವಕರಾದ ಮಲ್ಲಿಕಾರ್ಜುನ ಸಿ.ವಿ.,ಬೆಂಗಳೂರಿನ ಅಸಿಸ್ಟೆಂಟ್ ಪೋಲೀಸ್ ಕಮೀಷನರ್ ರಾದ ಕರಿಬಸವನಗೌಡ,ಅಶ್ವರಾಮಾನುಜ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕರಾದ ರಾಮಚಂದ್ರ ಆರ್. ಆನವೇರಿ,ಬೆಂಗಳೂರಿನ ಇಂಟೆಲಿಜನ್ಸ್ ವಿಭಾಗದ ಪೋಲೀಸ್ ಇನ್ಸ್ ಪೆಕ್ಟರ್ ದೊಡ್ಡಪ್ಪ .ಜೆ, ಸೌಹಾರ್ಧ ಕರ್ನಾಟಕದ ಸಂಚಾಲಕರಾದ ಎಸ್.ವೈ ಗುರುಶಾಂತ,ಈ ಸಂಜೆ ಪತ್ರಿಕೆಯ ಮಾಲಿಕರಾದ ರಾಜಾನುಕುಂಟೆ ವೆಂಕಟೇಶ್, ಯೋಗಿಕ್ ಹೀಲರ್ ರಾದ ಡಾ.ಜ್ಯೋತಿ ವಾಸುದೇವ್,ಹೈಕೋರ್ಟ್ ನ್ಯಾಯವಾದಿಗಳಾದ ಆರ್.ಎಲ್.ಎನ್.ಮೂರ್ತಿ, ಕಾನಿಪ ಧ್ವನಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಗೋಪಾಲ,ವೀರಸಾಗರ್ ಭಾನುಪ್ರಕಾಶ್ ಹಾಗೂ ಇನ್ನೀತರ ಗಣ್ಯಮಾನ್ಯರು ಉಪಸ್ಥಿತರಿದ್ದಂತ ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಜಗಳೂರು ಲಕ್ಷ್ಮಣರಾವ್, ಸಚಿವ ಶ್ರೀಧರ್, ಲಕ್ಷ್ಮೀಶ್ ಕಾಟುಕುಕ್ಕೆ, ಡಿ.ಎಲ್. ಹರೀಶ್, ಎಂ.ಶಂಕರ್ ಬೆನ್ನೂರು,ಈಶ್ವರ್ ಇವರುಗಳಿಗೆ ಕರ್ನಾಟಕ ಮಾಧ್ಯಮ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶಿಕ್ಷಣ ಸೇವಾರತ್ನವನ್ನು ಟಿ.ವಿ. ಶ್ರೀಕಂಠಯ್ಯ ರವರಿಗೆ ಸಮಾಜ ಸೇವಾ ರತ್ನವನ್ನು ನರಸಿಂಹಮೂರ್ತಿಗೆ,ಶ್ರೇಷ್ಟ ಗಾಯಕ,ಗಾಯಕಿ ಪ್ರಶಸ್ತಿಯನ್ನು ಸಾಗರ್,ಎಂ.ಮಹೇಶ್, ಡಾ.ರಮೇಶ್ ಶೆಟ್ಟಿ, ಪ್ರಭಾಕರ್,ಶಂಕರ್, ಸಂಪತ್,ಧಾತರ್, ಸುರೇಶ್,ಶ್ರೀಮತಿ ಸರ್ವಮಂಗಳ,ಶ್ರೀಮತಿ ಶಿಲ್ಪ, ಶ್ರೀಮತಿ ಶೋಭಾಮುರುಳಿಕೃಷ್ಣ ಇವರುಗಳಿಗೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಬೆಂಗಳೂರು ನಗರ ಜಿಲ್ಲಾ ಕಾರ್ಯಾಧ್ಯಕ್ಷರಾದ ಶ್ರೀಮತಿ ಸಂಪೂರ್ಣ ಚಂದ್ರಶೇಖರ್ ಗೌಡ, ಪ್ರ.ಕಾರ್ಯದರ್ಶಿಗಳಾದ ಶಾಂತ ಹನುಮಾನ,ಖಜಾಂಚಿಗಳಾದ ಉಮೇಶ್,ಉಪಾಧ್ಯಕ್ಷರುಗಳಾದ ಸಿದ್ದಪ್ಪಾಜೀ,ಗೋವಂದರಾಜ್, ರುದ್ರಮುನಿ, ಚಿಕ್ಕೇಗೌಡ್ರು,ರಮೇಶ್ ಬಾಬು, ಸಹಕಾರ್ಯದರ್ಶಿಗಳಾದ ಶ್ರೀನಿವಾಸ್ ಬಿ.ಎಲ್. ಹಾಗೂ ಕಿರಣ್ ರವರು ಶ್ರಮಿಸಿ ಯಶಸ್ವಿಗೊಳಿಸಿದರು. ಕೊನೆಯಲ್ಲಿ ಸಂಘದ ಉಪಾಧ್ಯಕ್ಷರಾದ ಗೋವಿಂದರಾಜ್ ರವರ ಹುಟ್ಟು ಹಬ್ಬದ ಅಚರಣೆಯನ್ನು ಮುಖ್ಯ ಅತಿಥಿಗಳ ಸಮಕ್ಷಮದಲ್ಲಿ ಕೇಕ್ ಕತ್ತರಿಸುವುರ ಮುಖಾಂತರ ಆಚರಿಸುವುದರ ಜೊತೆಗೆ ಗಾಯನ ಲಹರಿ ಹಾಗೂ ನೃತ್ಯಗಳೊಂದಿಗೆ ಕಾನಿಪ ಧ್ವನಿ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸಂಭ್ರಮಿಸುವುದರೊಂದಿಗೆ ಪತ್ರಿಕಾ ದಿನಾಚರಣೆಯ ಆಚರಿಸಲಾಯಿತು.
RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments