ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಮಾಡುತ್ತಿದ್ದ ಕೆಕೆ ಎಕ್ಸ್ ಪ್ರೆಸ್ ರೈಲ್ವೆ ಎಂಜಿನ್ ಹೊತ್ತಿ ಉರಿದಿದ್ದು, ಕೂದಲೆಳೆ ಅಂತರದಲ್ಲಿ ಒಡಿಶಾ ಮಾದರಿಯ ದುರಂತ ತಪ್ಪಿದೆ. ನಿನ್ನೆ ಸಂಜೆ 7.30 ಕ್ಕೆ ಬೆಂಗಳೂರಿನಿಂದ ಹೊರಟಿತ್ತು. ತಾಂತ್ರಿಕ ಸಮಸ್ಯೆಯಿಂದ ಇಂದು ಬೆಳಗ್ಗೆ ಮಹಾರಾಷ್ಟ್ರ ಸೊಲ್ಲಾಪುರದ ಸಮೀಪದಲ್ಲಿ ಕೆಕೆ ಎಕ್ಸ್ ಪ್ರೆಸ್ ರೈಲು ಎಂಜಿನ್ ಗೆ ಬೆಂಕಿ ಹತ್ತಿಕೊಂಡಿದೆ. ರೈಲ್ವೆ ಚಾಲಕನ ಸಮಯ ಪ್ರಜ್ಞೆಯಿಂದ ಸಾವಿರಾರು ಪ್ರಯಾಣಿಕರ ಪ್ರಾಣ ಬಚಾವ್ ಆಗಿದೆ. ರೈಲ್ವೆ ಚಾಲಕನು ಬೆಂಕಿಯಲ್ಲಿ ಸುಟ್ಟು ಸಾವಿರಾರು ಪ್ರಯಾಣಿಕರ ಜೀವ ಉಳಿಸಿದ್ದಾರೆ. ಅತಿ ವೇಗದಲ್ಲಿ ಚಲಿಸುತ್ತಿದ್ದ ರೈಲ್ವೆ ಸ್ಥಗಿತಗೊಳಿಸಿ ಎಂಜಿನ್ ನಿಂದ ಚಾಲಕ ಜಿಗಿದಿದ್ದಾರೆ. ಅರ್ಧಂಬರ್ಧ ಸುಟ್ಟ ಚಾಲಕನನ್ನು ಸ್ಥಳಿಯ ಆಸ್ಪತ್ರೆಗೆ ರವಾನಿಸಿದ್ದು, ಸದ್ಯಕ್ಕೆ ಅಧಿಕಾರಿಗಳು ರೈಲಿಗೆ ಮತ್ತೊಂದು ಎಂಜಿನ್ ಜೋಡಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ