Wednesday, May 6, 2026
Homeಸಂಸ್ಕೃತಿಮುಹಪೆ ದಾಡಿ ಔರ್ ಮುಂಚ ಆಯಾ ಹೈ ನಮಾಜ ಪಡ್ತಾ ನಹಿ ಕುಚ್ಚ ನಹಿ ,...

ಮುಹಪೆ ದಾಡಿ ಔರ್ ಮುಂಚ ಆಯಾ ಹೈ ನಮಾಜ ಪಡ್ತಾ ನಹಿ ಕುಚ್ಚ ನಹಿ , ಖಾಲಿ ಪಿರ್ತೆ ಖೆಲ್ತೆ ಜಾತೆ ಮಗರ ಅಲ್ಲಾಕಾ ದುವಾ ಮಂಗನೆ ಆತಾನಹಿ.

ಬರಹದ ಮುಂದುವರಿದ ಭಾಗ-2
  ಯಾವ ಗಲ್ಲಿ ಹುಡುಗ ನೀನು ನಿಮ್ಮ  ತಾಯಿ ತಂದಿ ಯವರು  ರೊಜಿ,,  ನಮಾಜಿ , ರೀತಿ ರಿವಾಜ ಎನು ಕಲಸಿಲ್ಲೆನು ನಿನ್ನ ಹೆಸರು ಎನು ಮುಂತಾಗಿ ಕೆಳಲು ಸುರು ಮಾಡಿದಾ.
ನನಗೊ ತುಂಬಾ ಸಂಕೊಚ ಉಂಟಾಯತು
ಯಾಕಾದರು ಈ ಇದಗಾಕ್ಕ ಬಂದನೆಪ. ಗೆಳೆಯ   ಜಮಿಲ್ ಮನೆಯಲ್ಲಿಯೇ ಇರು ಅಂದಾ. ಅದರೆ ನಾನೆ  ಎದೆ ಉಬ್ಬಿಸಿಕೊಂಡು ಬಂದೆ. ಇದು ನನಗ ಬೇಕಿತ್ತಾ . ಎಂದು ಮನದಲ್ಲಿಯೆ ತೊಳಲಾಟವಿಟ್ಟುಕೊಂಡೆ
ಹೆಗೊ ಎನೊ ವಜು ಮುಗಿಸಕೊಂಡು  ಆವೃದ್ದನಿಗೆ  ಮಡಿಕೆ ಕೊಡಲು ಮುಂದಾದೆ ಆ ವೃದ್ದ ವ್ಯೆಂಗಬರಿತ ನೊಟದಿಂದ ನನ್ನ ಕೈಯಿಂದ ಮಡಿಕೆ ತೆಗೆದು ಕೊಳ್ಳತ್ತಾ
 "ಏನು ನಿನ್ನಹೆಸರು" ಅಂದ
ನಾನು ಮತ್ತಷ್ಟು ವಿಚಲಿತಗೊಂಡೆ,  ಎಲ್ಲಿ ನನ್ನ ಹೆಸರು ಹೆಳಿದರೇ ಮತ್ತಷ್ಟು ಎನಾದರು ಅನಾಹುತ  ಆಗಬಹುದೆನೊ,  ಒಬ್ಬ ಹಿಂದು ಹುಡುಗನಾಗಿ ಇಲ್ಲಿಗೆ ಎಕೆ ಬಂದಾ ಎಂಬ ಭಯ ಸುರುವಾಯಿತು
"ಎನು ನಿನ್ನ ಹೆಸರು " ಎಂದು ಆ ವೃದ್ದ ಮತ್ತೆ ನನ್ನ ಹೆಸರು ಕೆಳಿದ
ಹೆಳಲೊ ಬೇಡವೊ... ಎನ್ನುತ್ತಾ 
 "ನನ್ನ ಹೆಸರು ಅಣ್ಣಾರಾಯ" ಎಂದು ಕೀರಲು ದನಿಯಲ್ಲಿ ಹೆಳಿದೆ
ಆ ವೃದ್ದ ನಿಗೆ ಸರಿಯಾಗಿ ಅರ್ಥ ವಾಗಲಿಲ್ಲ ವೆನಿಸಿತು
  " ಎನು ? ಎನು ನಿನ್ನ ಹೆಸರು "  ಅಂದಾ
 ನಾನು ಮತ್ತೆ ಹೆಳಿದೆ " ಅಣ್ಣಾರಾಯ "  ಅಂತಾ
ಆಧರೆ ಆ ವೃದ್ದ ನಿಗೆ  ನನ್ನ ಹೆಸರಿನ ಗೊಂದಲ ಕ್ಕೆ ಬಿದ್ದವನಂತೆ ಮತ್ತೆ ಮತ್ತೆ ಕೆಳಿದ, ಅಣ್ಣಾಸಾಬ, ಅಣ್ಣಾರಾಇ ಹಿಗೆ ಅವರಲ್ಲಿಯೂ ಕರೆಯೊದು ಉಂಟು
ಆ ವೃದ್ದಾ ತನ್ನ ಗೊಂದಲ ನಿವಾರಿಸಿಕೊಳ್ಳಲು
"ನಿನ್ನ ತಂದೆಯ ಹೆಸರೆನು ? ಎಂದು ನನಗೆ ನಿಜವಾಗಲು ಹೆದರಿಕೆ ಸರುವಿಟ್ಟಿತು
ನಾನು ಹೆದರಿಕೆಯಿಂದಲೆ " ಈರಪ್ಪ " ಎಂದೆ 
"ನನ್ನ ತಪ್ಪ ಎನು ಇಲ್ಲಾ . ಎಲ್ಲಾ ಅ ಜಮಿಲ್ ನದೆ ತಪ್ಪು 
ನನ ಗ ವಜು ವಾಗಲಿ ನಮಾಜ ಆಗಲಿ ಬರುದಿಲ್ಲ  ಅಂದ್ರು ನನಗ ಆ ಜಮಿಲನೇ ವತ್ತಾಯ ಮಾಡಿದಾ" ಎಂದೆ ಆಗ ಅಲ್ಲಿ ಇದ್ದವರೆಲ್ಲರಿಗೂ ಇನ್ನಷ್ಟು ಕುತುಹಲ 
ದಿಂದ ನಮ್ಮೆಡೆಗೆ ನೊಡಲು ಸುರು ಮಾಡಿದರು . ಆಗ ನನ್ನ ಸಹಾಯಕ್ಕೆ ಬಂದ. ಜಮೀಲ್
" ಅವನು ನನ್ನ ಖಾಸ್ ದೋಸ್ತ ಅದಾನ ನಾನೆ ಕರೆದುಕೊಂಡು ಬಂದಿದ್ದೆನೆ ಅವನು ಹಿಂದು ಇದ್ದಾನೆ
ಎನಾಯಿತು ಇಗ " ಎಂದು ಉರ್ದು ಭಾಷೆಯಲ್ಲಿ ಹೇಳಿದ .
 ಹೌದಾ.... ಹೌದಾ ...ಎಂದು ಉದ್ಘಾರ ತೆಗೆಯುತ್ತಾ ತಾವು ತಾವೆ ಮಾತನಾಡಹತ್ತಿದರು
ಆ ವೃದ್ದನೋ ಅವನ ಕೊಪವೆಲ್ಲಾ ಇಳಿದಿದೆ ವಜು ಮಾಡಿಕೊಳ್ಳುವದು ಬಿಟ್ಟು ನನ್ನೆಡೆಗೆ ಧಾವಿಸಿ ಬಂದು
ನನ್ನ ಎರಡು ಕೈಗಳನ್ನು ತನ್ನ ಎರಡು ಕೈಗಳಲ್ಲಿ  ಹಿಡಿದುಕೊಂಡಿದ್ದಾನೆ 
" ಅರೆ ಬೆಟಾ  ಮುಝೆ ಮಾಫ್ ಕರೊ ಬೆಟಾ
ನನಗ ಕ್ಷಮಾ ಮಾಡು ಮಗು ನನಗ ತಿಳೀಯದೆ ನಿನಗೆ ಗದರಿಸಿದೆ, ಏ ಅಲ್ಲಾಕಾ ಧರ್ಭಾರ ಹೈ  ಇದು ದೇವರ ಆಸ್ಥಾನ ವಿದು .  ಯಾರ ಬೆಕಾದರು ಬರಬಹು" 
ಎಂದು ಒಂದೆ ಸವನೆ ಗೋಗರಿಯ ಹತ್ತಿದ
ನಾನೊ ತೀವ್ರವಾಗಿ ಬಯಗೊಂಡಿದ್ದ ನನಗೆ ನಿರಾಳವಾಯಿತು.  ಆ ವೃದ್ದ ನನಗೆ  ಬಯ್ದಿದ್ರರ ಪಾಪ ಪ್ರಜ್ಞೆ ಅವನ ಮುಖದಲ್ಳಿ ಕಾಣತೊಡಗಿತು
ಅಳ್ಲಿ  ಇದ್ದವರೆಲ್ಲರೂ  ಅದರಿಸತೊಡಗಿದರು 
ವಬ್ಬನಂತು  . ತಾನು ತಂದಿದ್ದ ದುಪ್ಪಟಿಯನ್ನು ಹಾಸಿ ನನಗು ತನ್ನ ಪಕ್ಕದಲ್ಲಿ ಸ್ಥಳ ಕೊಟ್ಟು ನಮಾಜಿಗೆ ಸಹಕರಿಸಿದನು .
ನೂರಾರು ಸಾಲುಗಳು , ಸಾವಿರಾರು ಜನ ,  ಶಿಸ್ತಿನಿಂದ ನಮಾಜು ಮಾಡುತ್ತಿದ್ದಾರೆ  . ಎದರುಗಡೆ ಒಬ್ಬರು ಮೌಲಾನಾ ನಮಾಜಿ ನ ಮಂತ್ರ ಪಠಣ ಮಾಡಿತ್ತಿದ್ದಾನೆ. ಅವನು ಹೇಳಿದಂತೆ ಎಲ್ಲರು , ಮಾಡುವ ರು . ಹಾಗೆ ನೂರಾರು ಸಾಲುಗಳಲ್ಲಿರುವವರೆಲ್ಲರೂ ಎಕ ಕಾಲಕ್ಕೆ ಮೌಲಾನಾ ಹೆಳಿದಂತೆ ನಮಾಜು ಮಾಡುತ್ತಿದ್ದಾರೆ. ನಾನು ಕೂಡಾ ನನ್ನ ಮುಂದಿನವರು  ಮಾಡಿದಂತೆ ಮಾಡಿ ನಮಾಜ ಮಾಡಿದೆನು .
ನಮಾಜು  ಮಾಡವದು ಮುಗಿಯಿತು . ಪ್ರತಿಯೊಬ್ಬರು  ಪರಸ್ಪರ  ಆಲಂಗಿಸುವದು . ಇದ ಮುಬಾರಕ  ಭಾಯಿಜಾನ , ಇದ ಮುಬಾರಕ ಚಾಚಾ ,  ಹಿಗೆ ಪರಸ್ಪರರಿಗೆ . ಶುಭಾಷಯಗಳನ್ನ ಹೆಳುತ್ತಿದ್ದದು ಸಾಮಾನ್ಯವಾದ ದೃಶ್ಯ ಅಲ್ಲಿ ಕಂಡುಬರುತಿತ್ತು
ಕೈಗಳು ಜೊಡಿಸಿ ಹಿಡಿದು ಸಲಾಂ, ವಾಲೆಕ್ಕೊಂ. ವಾಲೆಕಂ  ಸಲಾಂ , ಅಂತಾ ಹೇಳಿ ಕೈಗಳು ತುಟಿಯ ಹತ್ತಿರ ಒಯ್ದು ಚುಂಬಿಸುವದು, ಅಲಾ ಬಲಾ ತೆಗೆದುಕೊಳ್ಳುವದು ನಡೆಯಿತು . 
ನಂತರ ಅಲ್ಲಿಂದ ಹೋರಟು  ಹಲವರು ತಮ್ಮ ಮನೆಗಳಿಗೆ ಕರದುಕೊಂಡು ಹೋಗಿ ಸುರಕುಂಬಾ ಕುಡಿಸಿದರು  ( ಸುರಕುಂಬಾ ಎಂದರೆ ಗಟ್ಟಿ ಹಾಲಿನಲ್ಲಿ ಯಾಲಕ್ಕಿ ಗೊಡಂಬಿ, ಬದಾಮಿ, ಮನುಕ, ಶಾವಿಗೆ ಸಕ್ಕರೆ ಹಾಕಿ ಮಾಡಿದ ರುಚಿಕರವಾದ ಪೇಯ) ಸುರಕುಂಬಾ ಎಂದರೆ ನನಗೆ ತುಂಬಾ ಇಷ್ಟ  ಇಗಲೂ ಅವರ ಹಬ್ಬಗಳಂದು  ನಮ್ಮ ಮನೆಯ. ನೆರೆಹೊರೆಯವರೆಲ್ಲ ಒಂದೊಂದು ಲೊಟಾ ಸುರಕುಂಬಾ ತಂದು ಕೊಡುತ್ತಾರೆ.  ಅದನ್ನ ಮೆಲಿಂದ ಮೆಲೆ ಕಾಯಿಸುತ್ತಾ ಎರಡೆರಡು ದಿವಸಗಳ ವರೆಗೆ ಕುಡಿಯುತ್ತಿರುತ್ತೆವೆ . ಆ ಸಮಯದಲ್ಲಿ  ಮನೆಗೆ ಬಂದವರಿಗೆಲ್ಲರಿಗೂ ಚಹಾದ ಬದಲ್ಲಿ  ಕುಡಿಯಲು ಸುರಕುಂಬಾ ನೆ ಕೊಡುತ್ತೆವೆ ಅವರು ಕೂಡಾ ಬಾಯಿ ಚಪ್ಪರಿಸುತ್ತಾ ಸುರಕುಂಬಾ  ಕುಡದಿದ್ದು ಇದೆ.
           ಅಂದು ಧಾರವಡದಲ್ಲಿ ನಡೆದ ಆ ಘಟನೆ ಇನ್ನು  ನನ್ನ ಮನದಲ್ಲಿನ ಹಸಿರಾಗಿಯೆ ಇದೆ .
ಇಲ್ಲಿ ಇನ್ನೊಂದು ವಿಷಯ ನನಗೆ ನೆನಪಿಗೆ ಬರುತ್ತದೆ
        " ನಮ್ಮ ದೇಶದ ಮೆಲೆ ನಡೆದ ಇಸ್ಲಾಂ ಮಿಯರ ದಾಳಿ ಇಲ್ಲಿನ ಅಸ್ಪೃಶ್ಯ ರಿಗೆ ವಿಮೊಚನೆಯಾಗಿ ಬಂತು "  ಎಂದು ಸ್ವಾಮಿ ವಿವೇಕಾನಂದರು ಒಂದುಕಡೆ ಹೆಳುತ್ತಾರೆ . 
ನನಗೆ ಮುಸ್ಲಿಮರ  ಮಸೀದಿ ಪ್ರವೇಶ ಆಗಿರಬಹುದು ಪ್ರಾರ್ಥನೆ ಮಾಡುವ ಸಮಯವೆ ಆಗಲಿ  ಊಟ ಮಾಡುವ ಸಮಯವೆ ಆಗಲಿ ಯಾವದೆ ತರದ ಬೇದಬಾವ ಮಾಡುವದಿಲ್ಲ
 ಇದು ನಮ್ಮ  ಹಿಂದು ಮೆಲ್ಜಾತಿಯವರಲ್ಲಿ . ಹಿಂದು ದೆವಾಲಯ ಗಳಲ್ಲಿ . ಕಾಣಲು ಸಾದ್ಯವೆ  ? ಎಷ್ಟೊಂದು ಬೇಧಭಾವ, ಎಷ್ಟೊಂದು ತಾರಾತಮ್ಯಗಳು  ನಾವು ದಿನನಿತ್ಯವೂ ನೊಡುತ್ತಿದ್ದೆವೆ.
ಇಂದಿನ ಅಧುನಿಕ ಯುಗದಲ್ಲಿಯೂ ಈ ಅಸ್ಪೃಶ್ಯತೆಯ ನ್ನು ಕಾಣುತ್ತಿದ್ದೆವೆ ಜಾತಿಯ ತಾರತಮ್ಯಯನ್ನು ಕಾಣುತ್ತಿದ್ದೆವೆ.   ಇನ್ನು ಸಾವಿರಾರು ವರುಷಗಳ ಹಿಂದಕ್ಕೆ ತಿರುಗಿ ಇತಿಹಾಸದ ಪುಟಗಳು ತಿರುಗಿಸಿ ನೊಡಿದರೆ ಅಬ್ಬಾ ಮೈ ಜುಂ ಎನ್ನುತ್ತೆ .
ಗುಡಿಗಳಲ್ಲಿ ದಲಿತರಿಗೆ ಪ್ರವೇಶ  ವಿಲ್ಲ . ಉರೊಳಗೆ ಪ್ರವೇಶ ವಿಲ್ಲ  ದಲಿತರ ನೆರಳು ಸೊಂಕಬಾರದು . ಆವರ ಮೆಲಿನ ಗಾಳಿ ಸೊಂಕಬಾರದು ,  ವೇದ ಉಪನಿಷತ್ತು ಓದಿದರೆ ಕಣ್ಣು ನಾಲಿಗೆ ಕೀಳುವ ಶಿಕ್ಷೆ,  ಒಂದು ವೇಳೆ  ಕೇಳಿದರ  ಕಿವಿಗಳಿಗೆ  ಕಾದ ಶೀಶು ಹಾಕುವದು   ಮುಂತಾದ ಘೋರ ಶಿಕ್ಷೆ ಗಳು . ಉರ ಹೊರಗೆ ವಾಸ,  ಸತ್ತ ದನಗಳನ್ನ ತಿನ್ನುತ್ತಾ  , ಮೆಲ್ಜಾತಿಯವರ ದಾಳಿ ದೌರ್ಜನ್ಯ ಗಳಿಗೆ ಬಲಿಯಾಗಿದಗದಾರೆ .  ಎಷ್ಟೊಂದು  ಸಾವು ಸಂಕಟಗಳನ್ನ ಅನಭವಿಸಿರಬಹುದು. .
ಅದಕ್ಕೆನೆ ಇಲ್ಲಿನ ದಲಿತರು ಮುಸ್ಲಿಂ ರ ಸರಳ ಜೀವನ ಶೈಲಿ ಗೆ ಆಕರ್ಷಿತರಾಗಿ  ಇಸ್ಲಾಂ ಧರ್ಮ ಸ್ವಿಕರಿಸಿದ್ದರಲ್ಲಿ ಯಾವದೆ  ಆಶ್ಚರ್ಯ ಪಡುವಂತಹದ್ದೆನಿಲ್ಲ
ಅಸ್ಪೃಶ್ಯತೆಯ  ದೌರ್ಜನ್ಯ ಗಳಿಂದ ಬೆಸತ್ತಿದ್ದ  ದಲಿತರು ಸಹಜವಾಗಿಯೆ ಮುಸ್ಲಿಂ ಆಳರಸರ ಸೈನ್ಯ ಕ್ಕೆ ಸೇರಿ ಅವರ ಸಾಮ್ರಾಜ್ಜ ವಿಸ್ತರಿಸಲು ಬಲ ತುಂಬಿದರು 
ಎಂಬುದು ಅಷ್ಟೆ ಸತ್ಯ. 
  ಇಂದು ನಾಗಪುರದ ಕೇಶವ ಕೃಪಾ  ಕೇದ್ರಿತವು  ಸಂಘ ಪರಿವಾರವನ್ನು ಮುಂದಿಟ್ಟುಕೊಂಡು ಕಾರ್ಪೊರೇಟ್ ಕಂಪನಿಗಳ ಜೊತೆ ಕೈ ಜೊಡಿಸಿ ,ತನ್ನ ಹಿಂದಿನ ಸನಾತನ ವ್ಯವಸ್ಥೆ ಯನ್ನು ಜಾರಿಗೆ ತರುವ ಪ್ರಯತ್ನದಲ್ಲಿ ಇದೆ.
ಇದು ಸಾದ್ಯವೆ  ?  ಎಂದಿಗೂ ಸಾದ್ಯವಿಲ್ಲ
ಕಾಲ ಚಕ್ರ ಉರುಳಿದೆ  . ಉರುಳುತ್ತಿ ದೆ ...ಅದನ್ನು ತಡೆದು ನಿಲ್ಳಿಸಿ . ಹಿಮದಕ್ಕೆ ತಿರುಗಿಸುತ್ತೆನೆ ಎಂದರೆ ಅದೊಂದು ಮೂರ್ಖತನವೆ ಸರಿ . ಈಗ ಜ್ಞಾನ .ವಿಜ್ಞಾನನ  ತಂತ್ರಜ್ಞಾನ  ಬಹಳ ಜನ ಎಲ್ಲ ಜನವಿಭಾಗ ಅಬ್ಯಾಸ ಮಾಡಿದ್ದಾರೆ, ಇಗ ವೇದ ಶಾಸ್ತ್ರ ಪುರಾಣ ಯಾರು ನಂಬದಂತಹ ವಾತಾವರಣ ನಿರ್ಮಾಣವಾಗಿದೆ .ಉರುಳುವ ಚಕ್ರ ತಡೆಯಲು ಹೊದರೆ  ಅದಕ್ಕೆ ಅವರೆ  ಚಕ್ರದ  ಹಲ್ಲುಗಳಿಗೆ ಸಿಕ್ಕು ಕತ್ತರಿಸಿ ಹೊಗುತ್ತಾರೆ ಅಷ್ಟೇ.
RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments