ದಾವಣಗೆರೆ:ಸಿ.ಡಿ.ನಿಂಗಪ್ಪ ಸಹ ಶಿಕ್ಷಕರು, ಪ್ರಾಥಮಿಕ ಹೂವಿನ ಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆಯ ಇವರು ಹೂವಿನ ಹಡಗಲಿ ತಾಲ್ಲೂಕಿನ ಹ್ಯಾರಡ(ಹಿರೇ ಬನ್ನಿಮಟ್ಟಿ) ಗ್ರಾಮದಲ್ಲಿ ಪರಿಶಿಷ್ಟ ಜನಾಂಗದ ಹನುಮಂತಪ್ಪ ದಂಪತಿಗಳ ಮಗನಾಗಿ ದಿನಾಂಕ 22. 06.1972 ರಂದು ತೀರ ಕಡುಬಡತನದ ಕುಟುಂಬದಲ್ಲಿ ಜನಿಸಿದರು, ತಂದೆ ಹನುಮಂತಪ್ಪ ಅನಕ್ಷರಸ್ಥರು, ಕೂಲಿನಾಲಿ ಮಾಡಿ ಕುಟುಂಬದ ನಿರ್ವಹಣೆ ಮಾಡುವಲ್ಲಿ ಬಳಲಿ ಬೆಂಡಾಗುತ್ತಿದ್ದರು, ಕೂಲಿಯಿಂದ ಬಂದ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದು ಬಹಳ ಕಷ್ಟವಾಗಿತ್ತು, ಅರೆಬರೆ ಉಂಡು ಜೀವನ ಸಾಗಿಸುವುದು ಅನಿವಾರ್ಯವಾಗಿತ್ತು, ಇಂತಹ ಕಷ್ಟದ ಜೀವನದಲ್ಲಿಯೂ ಮಗ ನಿಂಗಪ್ಪನನ್ನು ವಿದ್ಯಾವಂತನನ್ನಾಗಿ ಮಾಡಬೇಕು, ಶಿಕ್ಷಣ ಕೊಡಿಸಬೇಕು ಎಂಬ ಹಂಬಲದಿಂದ ಛಲತೊಟ್ಟು ಮಗ ಸಿ.ಡಿ.ನಿಂಗಪ್ಪ ಅವರಿಗೆ ಬಿಎ.ಟಿಸಿಹೆಚ್,ವರೆಗೂ ಶಿಕ್ಷಣ ಕೊಡಿಸಿ ಒಬ್ಬ ಶಿಕ್ಷಕನನ್ನಾಗಿ ರೂಪಿಸಿದರು ಮತ್ತು ಹಸಿವು, ಬಡತನ, ಅನಕ್ಷರಸ್ಥರ ಕಷ್ಟಗಳ ಬಗ್ಗೆ ತಿಳಿಸಿದ್ದಲ್ಲದೆ ಶಿಕ್ಷಣದ ಮಹತ್ವದ ಮಾರ್ಗದರ್ಶನ ಮಾಡಿದರು.
ಹಸಿವು, ಬಡತನದಲ್ಲಿ ನೊಂದು, ಬೆಂದು ಬೆಳೆದಿರುವ ಶಿಕ್ಷಕರಾದ ಸಿ.ಡಿ. ನಿಂಗಪ್ಪನವರಿಗೆ ಬಡತನ ನಿವಾರಣೆಗೆ ಶಿಕ್ಷಣ, ಜ್ಞಾನವೇ ಅಡಿಪಾಯ ಎಂಬುದನ್ನು ಚೆನ್ನಾಗಿ ಅರಿತಿದ್ದ ಸಿ.ಡಿ. ನಿಂಗಪ್ಪ ನವರು ದಿನಾಂಕ 22.08.1998 ರಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬನ್ನಿಮಟ್ಟಿ, ಹೂವಿನ ಹಡಗಲಿ ತಾಲ್ಲೂಕು ಇಲ್ಲಿಗೆ ಶಿಕ್ಷಕರಾಗಿ ಸಿ.ಡಿ.ನಿಂಗಪ್ಪನವರು ಅಕ್ಷರದ ಸೇವೆ, ಶಿಕ್ಷಣದ ಸೇವೆ ಸಲ್ಲಿಸಲು ಆರಂಭಿಸಿದರು.
ಆ ಶಾಲೆಯ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಅಲ್ಲಿನ ವಿದ್ಯಾರ್ಥಿಗಳು, ಪೋಷಕರ ಪ್ರೀತಿಗೆ ಪಾತ್ರರಾದರು ಮತ್ತು ಶಾಲೆಯಿಂದ ಹೊರಗೆ ಉಳಿದ ಮತ್ತು ಬಡತನದ ಕಾರಣಕ್ಕಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅವರು ವಾಸಿಸುವ ಸ್ಥಳಗಳಿಗೆ ಹೋಗಿ ಶಿಕ್ಷಣದ ಮಹತ್ವವನ್ನು ತಿಳಿಸಿ ಪೋಷಕ ಮನಃ ಪರಿವರ್ತನೆ ಮಾಡಿ, ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಶಾಲೆಗೆ ಕರೆತಂದು ಶಿಕ್ಷಣ ನೀಡುವ ಮಹತ್ವದ ಕಾರ್ಯದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು.
ತಂದೆ ಇಲ್ಲದ ಮಕ್ಕಳು, ತಾಯಿ ಇಲ್ಲದ ಮಕ್ಕಳು, ತಂದೆ ತಾಯಿ ಇಲ್ಲದ ಮಕ್ಕಳು, ಅನಾಥ ಮಕ್ಕಳು, ನಿರ್ಗತಿಕ ಮಕ್ಕಳನ್ನು ಬನ್ನಿಮಟ್ಟಿ, ದಾಸನಹಳ್ಳಿ, ಕೂನಬೇವೂರು, ಹ್ಯಾರಡ, ಗೋವಿನಕೊಪ್ಪ ಗ್ರಾಮಗಳಲ್ಲಿ ಗುರುತಿಸಿ ಅಂತಹ ಬಾಲಕಿಯರಿಗೆ ಉಚಿತವಾಗಿ ಶಿಕ್ಷಣ, ಊಟ, ವಸತಿ ದೊರೆಯಲಿ ಎಂಬ ಉದ್ದೇಶದಿಂದ ಆ ವಿದ್ಯಾರ್ಥಿಗಳಿಗೆ ಉಚಿತ ವಸತಿಯುತ ಶಾಲೆಯಾದ ಬಾಸೆಲ್ ಸ್ಕೂಲ್, ದಾರವಾಡ ಇಲ್ಲಿಗೆ ಸೇರಿಸಿ ಶಿಕ್ಷಣ ಕೊಡಿಸುವಲ್ಲಿ ಮಹತ್ವದ ಪಾತ್ರವಹಿಸಿ ಕಾರ್ಯನಿರ್ವಹಿಸುವ ಮೂಲಕ ವಿದ್ಯಾರ್ಥಿಗಳು, ಆಯಾ ಊರಿನ ಜನರ ಪ್ರೀತಿ, ವಿಶ್ವಾಸ, ಗೌರವಗಳಿಗೆ ಪಾತ್ರರಾಗಿದ್ದು, ವಿದ್ಯಾರ್ಥಿಗಳು ಮತ್ತು ಜನರ ಮೆಚ್ಚುಗೆಯ ಶಿಕ್ಷಕರಾಗಿದ್ದಾರೆ.
ಕತ್ತೆಬೆನ್ನೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಬಾರಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುವಾಗ ಬಡತನ ಮತ್ತು ಅಂಗವಿಕಲತೆಯ ಕಾರಣಕ್ಕಾಗಿ ಶಾಲೆಯ ಶಿಕ್ಷಣದಿಂದ ವಂಚಿತನಾಗಿದ್ದ 6ನೇಯ ತರಗತಿಯ ವಿದ್ಯಾರ್ಥಿ ಚೌಟಗಿ ಬಸವಂತಪ್ಪ ತಂದೆ ಹನುಮಂತಪ್ಪ, ಹರವಿ ಬಸಾಪುರ ಗ್ರಾಮವವನು, ಅವನ ಪೋಷಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ಮನವರಿಕೆ ಮಾಡಿ ಆ ವಿದ್ಯಾರ್ಥಿಯನ್ನು ದಾವಣಗೆರೆಯ ನಿಟುವಳ್ಳಿಯಲ್ಲಿರುವ ಉಚಿತವಾಗಿ ಶಿಕ್ಷಣ, ಊಟ, ವಸತಿ ನೀಡುವ ಅಂಗವಿಕಲರ ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಿದ್ದು ಆ ವಿದ್ಯಾರ್ಥಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದು, ಈಗ ಹಿರೇ ಕುರುವತ್ತಿ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ,
ಶಿಕ್ಷಣದಿಂದ ವಂಚಿತರಾಗಿರುವ ಅಲೆಮಾರಿ ಜನಾಂಗದವರ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಸಾಮಾಜದ ಮತ್ತು ಶಿಕ್ಷಣದ ಮುಖ್ಯವಾಹಿನಿಗೆ ತರಬೇಕು ಎಂಬುದನ್ನು ಮನಗಂಡ ಶಿಕ್ಷಕರಾದ ಸಿ.ಡಿ. ನಿಂಗಪ್ಪನವರು ಶಾಲೆಯ ಕರ್ತವ್ಯದ ನಂತರವೂ ಅಲೆಮಾರಿ ಜನಾಂಗದವರು ನೆಲೆಸಿರುವ ಸ್ಥಳಗಳಿಗೆ ತೆರಳಿ, ಅವರು ವಾಸಿಸುವ ಗುಡಿಸಲು, ಡೇರೆಗಳಿಗೆ ಭೇಟಿ ನೀಡಿ ಅಲೆಮಾರಿ ಜನಾಂಗದವರಿಗೆ ಶಿಕ್ಷಣದ ಅರಿವು ಮೂಡಿಸಿ, ಅವರ ಪೋಷಕರು ಮಕ್ಕಳನ್ನು ಶಿಕ್ಷಣದಿಂದ ವಂಚನೆ ಮಾಡದೆ ಶಿಕ್ಷಣ ಕೊಡಿಸುವಂತೆ ಮನಃ ಪರಿವರ್ತನೆ ಅಲ್ಲನ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವಲ್ಲಿ ಸಫಲರಾಗಿದ್ದಾರೆ ಮತ್ತು ಅಲೆಮಾರಿ ಜನಾಂಗದ ಪೋಷಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಲು ಬಡತನ ನೀವಾರಿಸುವಲ್ಲಿ ಶಿಕ್ಷಣದ ಮಹತ್ವದ ಪಾತ್ರ ಕುರಿತಾದ ಕಾರ್ಯಾಗಾರಗಳನ್ನು ಮಾಡಿದ್ದಾರೆ. ಶಿಕ್ಷಕರಾದ ಸಿ.ಡಿ.ನಿಂಗಪ್ಪನವರು ಇದುವರೆಗೂ ಸೇವೆ ಸಲ್ಲಿಸಿರುವ ಎಲ್ಲಾ ಶಾಲೆಗಳಲ್ಲೂ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರತಿಭಾವಂತರನ್ನಾಗಿ ರೂಪಿಸುವಲ್ಲಿ ಶ್ರಮಿಸುತ್ತಿದ್ದಾರೆ ಮತ್ತು ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದು ಮಕ್ಕಳಿಗೆ ಪರಿಸರದ ಪ್ರಜ್ಞೆ ಮೂಡಿಸಲು ಶಾಲೆಗಳ ಆವರಣಗಳಲ್ಲಿ ಗಿಡ, ಮರಗಳನ್ನು ನೆಟ್ಟು ಮಕ್ಕಳಿಗೆ ಪೋಷಣೆ ಮತ್ತು ರಕ್ಷಣೆಯ ಜವಾಬ್ದಾರಿ ನೀಡಿ ಜವಾಬ್ದಾರಿಯ ಮಹತ್ವವನ್ನು ಅರಿವು ಮೂಡಿಸುವ ಮೂಲಕ ಅವರನ್ನು ಪರಿಸರ ರಕ್ಷಕರಾಗಿ, ಪರಿಸರ ಪ್ರೇಮಿಗಳಾಗಿ ರೂಪಿಸಿದ್ದಾರೆ. ಶಿಕ್ಷಕರಾದ ಸಿ.ಡಿ.ನಿಂಗಪ್ಪ ಅವರ ಶಿಕ್ಷಣದ ಮಾರ್ಗ, ಶೈಕ್ಷಣಿಕ ಕಳಕಳಿ, ಸಾಮಾಜಿಕ ಕಳಕಳಿ, ವಿದ್ಯಾರ್ಥಿಗಳಿಗೆ, ಸರ್ಕಾರಿ ಶಾಲೆಗಳ ಶಿಕ್ಷಕರಿಗೆ, ಪ್ರೇರಣೆಯಾಗಿದೆ ಮತ್ತು ಶಿಸ್ತಿನ ಸಿಪಾಯಿ, ಶಿಕ್ಷಣ ಪ್ರೇಮಿಯಾಗಿ, ಶಿಸ್ತು ಬದ್ದತೆ, ಕರ್ತವ್ಯ ಬದ್ದತೆಗೆ ನಿಷ್ಠಾವಂತರಾಗಿರುವ ಶಿಕ್ಷಕರಾಗಿರುವ ಸಿ.ಡಿ.ನಿಂಗಪ್ಪನವರ ಸೇವೆಯನ್ನು ಮೇಲಾಧಿಕಾರಿಗಳು ಮತ್ತು ಸರ್ಕಾರ ಗುರುತಿಸಿ ಗೌರವಿಸಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರಾದ ಸಿ.ಡಿ.ನಿಂಗಪ್ಪ ನವರನ್ನು ಬಳ್ಳಾರಿ ಜಿಲ್ಲೆಯ ಜಿಲ್ಲಾ ಮಟ್ಟದ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಯನ್ನು ನೀಡಿ ಗೌರವಿಸಲಿ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಉಸ್ತುವಾರಿ ಸಮಿತಿಗಳ ಒಕ್ಕೂಟದ ಅದ್ಯಕ್ಷರಾದ ನಿಂಗರಾಜ್ ಹಾವನೂರು, ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ ದಾಸರ್, ಕಾನೂನು ಸಲಹೆಗಾರರು ವಕೀಲರಾದ ಆನಂದಪ್ಪ ಎಸ್, ಸಂಚಾಲಕ ಶಿವಕ್ಳ ಆಂಜನೇಯ, ಕೋಡಬಾಳು ಚನ್ನಬಸಪ್ಪ ಅವರು ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಎಂದು ಸಂಘದ ಪತ್ರಿಕಾ ಕಾರ್ಯದರ್ಶಿ
ರಮೇಶ್ ಸಿ ದಾಸರ್, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.