ದಾವಣಗೆರೆ :ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ದಾವಣಗೆರೆ. ಇವರ ಸಂಯುಕ್ತ ಆಶ್ರಯದಲ್ಲಿ. ಸಾಕ್ಷರತಾ ಕಾರ್ಯಕ್ರಮದ ಮಹತ್ವ, ಕಲಿಕಾ ವಾತಾವರಣ ನಿರ್ಮಾಣದ ಬಗ್ಗೆ ಜಗಳೂರು ತಾಲ್ಲೂಕಿನ ದಿದ್ಧಿಗೆ ಗ್ರಾಮದಲ್ಲಿ “ಹರಿಹರದ ರಂಗಶ್ರೀ ಕಲಾ ತಂಡದಿಂದ” ಬೀದಿ ನಾಟಕ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಹಾಡುಗಳ ಮೂಲಕ ಅಕ್ಷರದ ಅರಿವು ಮೂಡಿಸಲಾಯಿತು.
ಕಲಾ ತಂಡದ ನಾಯಕ ಜಿಗಳಿ ರಂಗನಾಥ್, ದ್ವಾರಕೀಶ್, ರಂಗಸ್ವಾಮಿ, ಮಂಜುಳ, ಶಿವಮ್ಮ. ಗ್ರಾಮ ಪಂಚಾಯಿತಿಯ ಬಸವರಾಜ, ಓಂಕಾರಪ್ಪ, ಭಾಗವಹಿಸಿದ್ದರು.