Saturday, December 21, 2024
Homeಶಿಕ್ಷಣದಾವಣಗೆರೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಿ ಹೆಚ್ಚಳ ಪ್ರವೇಶ ಶುಲ್ಕ ಹಿಂತೆಗೆದುಕೊಳ್ಳುವವರೆಗೂ ಧರಣಿ ಸತ್ಯಾಗ್ರಹದ ಎಚ್ಚರಿಕೆ

ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಿ ಹೆಚ್ಚಳ ಪ್ರವೇಶ ಶುಲ್ಕ ಹಿಂತೆಗೆದುಕೊಳ್ಳುವವರೆಗೂ ಧರಣಿ ಸತ್ಯಾಗ್ರಹದ ಎಚ್ಚರಿಕೆ

ದಾವಣಗೆರೆ ವಿವಿ ಕುಲಪತಿ ಕುಲಸಚಿವರ ಪದವಿ ವಿದ್ಯಾರ್ಥಿಗಳಿಗೇ ಅವೈಜ್ಞಾನಿಕ ಪ್ರವೇಶ ಶುಲ್ಕ – ಮುತ್ತಿಗೆ ಹಾಕಿ ಪ್ರತಿಭಟಿಸಲು ಪ್ರಗತಿಪರ ಸಂಘಟನೆ ಎಚ್ಚರಿಕೆ ನೀಡಿದೆ ದಾವಣಗೆರೆ ವಿವಿ ಯಲ್ಲಿನ ಪ್ರಥಮ ಪದವಿ ಪ್ರವೇಶ ಶುಲ್ಕ ಅವೈಜ್ಞಾನಿಕ ವಾಗಿ ಮೂರು ನಾಲ್ಕು ಪಟ್ಟು ಹೆಚ್ಚಳ ಮಾಡಿ ಬಿಡು ದಲಿತ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದೆಸರಿವಂತೆ ಹುನ್ನಾರ ನಡೆಯುತ್ತಿದೆ, ಕೂಡಲೇ ರಾಜ್ಯಪಾಲರು ಉನ್ನತ ಶಿಕ್ಷಣ ಸಚಿವರು, ಮುಖ್ಯಮಂತ್ರಿ ಗಳು ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಪ್ರಗತಿಪರ ಸಂಘಟನೆಗಳು ವಿದ್ಯಾರ್ಥಿಗಳು ಸೇರಿ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಿ ಹೆಚ್ಚಳ ಪ್ರವೇಶ ಶುಲ್ಕ ಹಿಂತೆಗೆದುಕೊಳ್ಳುವವರೆಗೂ ಧರಣಿ ಸತ್ಯಾಗ್ರಹ ನಡೆಸುವುದಾಗಿ ಪೀಪಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರದಾನ ಕಾರ್ಯದರ್ಶಿ ಪ್ರಗತಿಪರ ಚಿಂತಕ ಡಾಕ್ಟರ್ ಕೆ ಎ ಓಬಳೇಶ್ ಎಚ್ಚರಿಕೆ ನೀಡಿದರು. ದಾವಣಗೆರೆ ವರದಿಗಾರ ಕೂಟದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗೋಷ್ಠಿ ಯಲ್ಲಿ ಮಾತನಾಡಿದ ಅವರು 4/7/20 ಸರ್ಕಾರ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮುಕ್ತ ಅವಕಾಶ ಅವಕಾಶ ನೀಡಿ ಆದೇಶ ಹೊರಡಿಸಿದೆ,ಆದರೆ ದಾವಣಗೆರೆ ವಿವಿ ಕುಲಪತಿ ಕುಲಸಚಿವರು ಸಿಂಡಿಕೇಟ್ ಸದಸ್ಯರ ಗಮನಕ್ಕೂ ಬಾರದೆ ದಿಡೀರ್ ಪ್ರವೇಶ ಶುಲ್ಕ ಸರ್ಕಾರದ ಆದೇಶವನ್ನು ಲೆಕ್ಕಿಸದೆ ಯಾವುದೇ ರೀತಿಯ ಆದೇಶ ಇಲ್ಲದೆ ಶುಲ್ಕ ಏರಿಕೆ ಮಾಡಿದೆ, ರಾಜ್ಯದ ಎಲ್ಲಾ ವಿವಿಗಳಲ್ಲಿ ಏರಿಕೆ ಯಾಗದ ಪ್ರವೇಶ ಶುಲ್ಕ ಕೇವಲ ದಾವಣಗೆರೆ ವಿವಿ ಯಲ್ಲಿ ಹೆಚ್ಚಳಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅವರು ಹೀಗಾದರೆ ಬಡವರ ಮಕ್ಕಳು ಶಿಕ್ಷಣ ಕಲಿಯದೇ ಹಿಂದೆ ಸರಿವ ಪರಿಸ್ಥಿತಿ ನಿರ್ಮಾಣವಾಗಿದೆ. ಅತಿಥಿ ಉಪನ್ಯಾಸಕರ ಕೊರತೆ ಇದ್ದರೂ ನೇಮಕ ಮಾಡಿ ಕೊಳ್ಳಧೇ ಇರುವ ಉಪನ್ಯಾಸಕರನ್ನು ಪರೀಕ್ಷೆ ಮೌಲ್ಯಮಾಪನ ಕಾರ್ಯ ಕ್ಕೆ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಸಮಸ್ಯೆ ಬಗ್ಗೆ ಚಿಂತನೆ ಮಾಡದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಕುಲಪತಿ ಕುಲಸಚಿವರ ಈ ನೆಡೆ ಅಕ್ಷಮ್ಯ ಅವೈಜ್ಞಾನಿಕ ರೀತಿಯಲ್ಲಿ ಪ್ರವೇಶ ಶುಲ್ಕ ಏರಿಕೆ ಬಗ್ಗೆ ಸೂಕ್ತ ತನಿಖೆ ನಡೆಸಿ ಬೇಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು ಇಲ್ಲದಿದ್ದರೆ ದಾವಣಗೆರೆ ಜಿಲ್ಲೆ ಹಾಗೂ ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿಗಳು ಪ್ರಗತಿಪರ ಸಂಘಟನೆಗಳು ಮುತ್ತಿಗೆ ಹಾಕಿ ಪ್ರತಿಭಟಿಸಲು ಹಿಂಜರಿಕೆ ಇಲ್ಲ, ಧರಣಿ ಸತ್ಯಾಗ್ರಹ ನಡೆಸುವ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಗೋಷ್ಠಿ ಯಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಮಲ್ಲೇಶ್, ದಂಸಸ ವೆಂಕಟೇಶ್ ಮಹಾಂತೇಶ್ ಅಂಗಡಿ, ಇಪ್ಟಾ ಪುರಂದರ್ ಲೋಕಿಕೆರೆ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments