ವಿಜಯಪುರ: ಶಿಕ್ಷಣವು ಜಗತ್ತನ್ನು ಬದಲಾಯಿಸುವ ಪ್ರಮುಖ ಅಸ್ತ್ರ, ಅದು ಎಲ್ಲರಿಗೂ ದೊರಕಬೇಕು ಎಂಬುದು ಡಾ. ಬಿ. ಅರ್. ಅಂಬೇಡ್ಕರ್ ಅವರ ಆಶಯ, ಅದರೆ ಸರಕಾರ ಮತ್ತು ವಿಶ್ವ ವಿದ್ಯಾಲಯಗಳು ವಿದ್ಯಾರ್ಥಿಗಳ ಹಿತವನ್ನು ಕಾಪಾಡುವಲ್ಲಿ ವಿಫಲವಾಗಿದೆ.
ಎಬಿವಿಪಿಯ ಪ್ರಾಂತ ಕಾರ್ಯ ಸಮಿತಿ ಸದಸ್ಯ ಸಚಿನ ಕುಳಗೇರಿ ಮಾತನಾಡಿ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಸರಕಾರ ಅನುದಾನ ಬಿಡುಗಡೆ ಮಾಡದೆ ಇರುವ ಕಾರಣ ಅದರ ಹೊರೆಯನ್ನು ವಿದ್ಯಾರ್ಥಿಗಳ ಮೇಲೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಸರಕಾರ ಕೂಡಲೇ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ.
ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷೆಗಳ ಪಲಿತಾಂಶವನ್ನು ಸರಿಯಾದ ಸಮಯಕ್ಕೆ ನೀಡುವಲ್ಲಿ ವಿಫಲವಾಗಿದೆ, ಮತ್ತು ಪಲಿತಾಶವನ್ನು ನೀಡಿದ ಮೇಲೆ ಅಂಕಪಟ್ಟಿಗಳು ವಿದ್ಯಾರ್ಥಿಗಳಿಗೆ ತಲುಪಲು ವಿಳಂಬವಾಗುತ್ತಿದೆ ಇದರಿಂದ ಪರೀಕ್ಷೆ ಬರೆದ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣಕ್ಕೆ ಮತ್ತು ಇನ್ನಿತರ ಕೆಲಸಗಳಿಗೆ ತೊಂದರೆ ಅನುಭವಿಸುತ್ತಿದ್ದಾರೆ ಸರಕಾರ ಕೂಡಲೇ ಎಲ್ಲ ವಿಶ್ವ ವಿದ್ಯಾಲಯಗಳಿಗೆ ಪಲಿತಾಂಶ ಮತ್ತು ಅಂಕಪಟ್ಟಿಯನ್ನು ಸರಿಯಾದ ಸಮಯಕ್ಕೆ ನೀಡುವಂತೆ ಸೂಚನೆ ನೀಡಬೇಕಾಗಿ ಎಬಿವಿಪಿ ಆಗ್ರಹಿಸುತ್ತದೆ.
ಪ್ರಮುಖ ಬೇಡಿಕೆಗಳು
1) ರಾಜ್ಯದ ವಿಶ್ವ ವಿದ್ಯಾಲಯಗಳ ಅನುದಾನವನ್ನು ಬಿಡುಗಡೆ ಮಾಡಿ.
2) ಪರಿಕ್ಷೆಗಳು ಮುಗಿದ ಮೇಲೆ ನಿಗದಿತ ವೇಳೆಯಲ್ಲಿ ಪಲಿತಾಂಶವನ್ನು ನೀಡುವಂತೆ ಸರಕಾರ ವಿವಿ ಗಳಿಗೆ ನಿರ್ದೇಶನ ನೀಡಬೇಕು.
3)ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿದ್ದು ಅದನ್ನು ಕಡಿಮೆ ಮಾಡಬೇಕು
4) ಅಂಕಪಟ್ಟಿ ಮತ್ತು ಘಟಕೊತ್ಸವ ಪ್ರಮಾಣ ಪತ್ರವನ್ನು ನೀಡಲು ಇರುವ ತಾಂತ್ರಿಕ ದೋಷವನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ತಲುಪಿಸಬೇಕು.
5)ವಿವಿಗಳಲ್ಲಿ ಖಾಯಂ ಅಧ್ಯಾಪಕರ ಕೊರತೆ ಇದ್ದು, ಅವುಗಳನ್ನು ತುಂಬಬೇಕು.
6) ವಿವಿಗಳ ಮೂಲಸೌಕರ್ಯ, ಬೋಧಕೇತರ ಸಿಬ್ಬಂದಿ, ಹಾಸ್ಟೆಲ್ ಗಳ ವ್ಯವಸ್ಥೆ ಕಲ್ಪಿಸಲು ಸರಕಾರ ಗಮನ ಹರಿಸಬೇಕು.
ಎಬಿವಿಪಿಯ ಮುಖಂಡರಾದ ಗಂಗಾಧರ ಹಂಜಗಿ, ಮಹಾಂತೇಶ ಕಂಬಾರ, ಸಿದ್ದು ಪತ್ತಾರ, ಅಕ್ಷಯ ಯಾದವಾಡ, ರೇಖಾ ಮಾಲಿ, ಪೂಜಾ ವಿರಶೇತ್ತಿ, ಮಲ್ಲಿಕಾರ್ಜುನ ಮಾಲಿ ಇದ್ದರು.