ಮೂಡಲಗಿ: ಆ,09- ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಗಿಡ ಮರಗಳನ್ನು ನೆಟ್ಟು ಕಾಡು ಬೆಳೆಸಿ ನಾಡು ಉಳಿಸಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ ಎಂದು ಪ್ರಾಚಾರ್ಯರಾದ ಸಿ ಸಿ ಶೆಟ್ಟರ ಹೇಳಿದರು. ಅವರು ಗ್ರಾಮದ ಸಿದ್ದಾರೂಡ ದೇವಸ್ಥಾನದಲ್ಲಿ ಮೂಡಲಗಿ ಕಲಾ,ವಾಣಿಜ್ಯ ವಿಜ್ಞಾನ ಮತ್ತು ಸಮಾಜ ಕಾರ್ಯ ಮಹಾವಿದ್ಯಾಲಯದಿಂದ ಹಮ್ಮಿಕ್ಕೊಂಡ ಏನ್ ಎಸ್ ಎಸ್ ಶಿಭೀರದ ಕಾರ್ಯಕ್ರಮದಲ್ಲಿ ಅದ್ಯಕ್ಷರಾಗಿ ಮಾತನಾಡಿ ಗಿಡ ಮರಗಳನ್ನು ನಾಶಮಾಡುವುದು ಮನು ಕುಲಕ್ಕೆ ಹಾನಿಯುಂಟು ಮಾಡುತ್ತದೆ ಎಂದು ಹೇಳಿದರು. ಉಪನ್ಯಾಸಕಿ ಶಿವಲೀಲಾ ಉದ್ದನ್ನವರ ಮಾತನಾಡಿ ಪರಿಸರ ಸಂರಕ್ಷಣೆಯಲ್ಲಿ ಸಮುದಾಯದವರೆಲ್ಲರದು ಪ್ರಮುಖ ಪಾತ್ರವಾಗಿದೆ. ಗಿಡ ಮರಗಳನ್ನು ನೆಡಲು ಸರಕಾರದಿಂದ ಅನೇಕ ಸವಲತ್ತುಗಳಿವೆ. ವಾಯುಮಾಲಿನ್ಯದಿಂದ ಮಾನವನ ಉಸಿರಾಟಕ್ಕೆ ತೊಂದರೆ ಹಾಗೂ ಜೀವಕ್ಕೆ ಅಪಾಯವಿದೆ ಎಂದು ಹೇಳಿದರು. ಮುಖಂಡರಾದ ಶ್ರೀಶೈಲ ಬಾಗೊಡಿ .ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಅವರು ಪರಿಸರ ಸಂರಕ್ಷಣೆಯಲ್ಲಿ ಸಮುದಾಯದ ಪಾತ್ರ ಬಹಳ ಪ್ರಮುಖವಾಗಿದೆ ಎಂದು ಹೇಳಿದರು. ಏನ್ ಎಸ್ ಎಸ್ ಶಿಭಿರಾರ್ಥಿ ದಾನೇಶ್ವರಿ ಯಾದವಾಡ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. ಪ್ರಾಚಾರ್ಯರಾದ ಯೆಸ್ ಬಿ ಗೋಟುರ. ಮಾಜಿ ತಾ ಪ ಸದಸ್ಯೆ ಸವಿತಾ ಡಬ್ಬಣ್ಣವರ. ಮಾ, ಗ್ರಾ, ಪ ಅಧ್ಯಕ್ಷ ಬಸಪ್ಪ ಹಡಪದ.ಉಪನ್ಯಾಸಕರಾದ ಸಂಗು ಶಿರನಾಳ. ಶಂಕರ ಪಾಟೀಲ. ಮಲ್ಲಪ್ಪ ಬಿ ಪಾಟೀಲ. ಬಿ ಬಿ ಪೂರವಂತ. ಎಸ್ ಆರ್ ಮಂಟೂರ. ಎಮ ಎಸ್ ಒಡೆಯರ. ಪಿ ಬಿ ಚೌಡಕಿ. ವಿ ಏನ್ ಕಂಡುಗೋಳ. ಕಾವ್ಯಾ ಕಲಾಲ. ಅರಿಹಂತ ಸಪ್ತಸಾಗರ.ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಹಾಗೂ ಶಿಭೀರಾರ್ಥಿಗಳು ಗ್ರಾಮದ ಪ್ರಮುಖರಿದ್ದರು.ಕಾರ್ಯಕ್ರಮವನ್ನು ದಯಾನಂದ ಮುಗಳಖೋಡ ಸ್ವಾಗತಿಸಿ.ಅರ್ಪಿತಾ ಕುಂಬಾರ. ನಿರೂಪಿಸಿ. ಹಾಲಪ್ಪ ಹಳ್ಳೂರ ವಂದಿಸಿದರು.