ದಾವಣಗೆರೆ : ನಿಮ್ಮ ಸುಂದರ ಜೀವನ ರೂಪಿಸಿಕೊಳ್ಳುವುದಕ್ಕಾಗಿ ನಿಮ್ಮ ತಂದೆ ತಾಯಿಗಳ ಆಸೆಗಳನ್ನು ಈಡೇರಿಸಿಕೊಳ್ಳಲು ಸಮಾಜದಲ್ಲಿ ಗೌರವತವಾಗಿ ಬಾಳಲು ನೀಮ್ಮ ಭವಿಷ್ಯಕ್ಕಾಗಿ ನೀವು ಕಷ್ಟಪಟ್ಟಾದರೂ ಸರಿ ಇಷ್ಟಪಟ್ಟದರು ಸರಿ ನೀವೂ ಓದಲೇಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ವೆಂಕಟೇಶ್ ಬಾಬು ರವರು ಹೇಳಿದರು.
ಅವರು ಇಂದು ನಗರದ ಭದ್ರಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಓರಿಯೆಂಟೇಷನ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಬಂಗಾರದಂತಹ ಜೀವನ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯೊಂದಿಗೆ ಸತತ ಪ್ರಯತ್ನ ಪಟ್ಟು ಓದಿದರೆ ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಅಂಬೇಡ್ಕರ್ ವಿಶ್ವೇಶ್ವರಯ್ಯ ವಿವೇಕಾನಂದರು ಅಬ್ದುಲ್ ಕಲಾಂ ಅವರು ಓದಿ ನಿಂದ ಜ್ಞಾನ ಪಡೆದು ಇಂದಿಗೂ ನಮ್ಮೊಂದಿಗೆ ಜೀವಂತವಾಗಿರುವುದನ್ನು ನಾವು ನೋಡುತ್ತೇವೆ ಹಾಗೆ ಪ್ರತಿಯೊಬ್ಬರು ಓದುವ ಮೂಲಕ ಜ್ಞಾನಗಳಿಸಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಬಾಳಬೇಕು ಎಂದು ಹೇಳಿದರು.
ಜಗತ್ತು ಪ್ರತಿದಿನ ಬದಲಾಗುತ್ತಾ ಹೋಗುತ್ತದೆ ಬದಲಾಗುವ ಜಗತ್ತಿನಲ್ಲಿ ನಾವು ಕೂಡ ಬದಲಾಗಬೇಕು ತಾಂತ್ರಿಕವಾಗಿ ಕೌಶಲ್ಯ ಭರಿತರಾಗಿ ವಿದ್ಯಾರ್ಥಿಗಳು ಪದವಿಯೊಂದಿಗೆ ಬದಲಾದಾಗ ಉದ್ಯೋಗ ಮಾರುಕಟ್ಟೆಯಲ್ಲಿ ಆಕರ್ಷಿತರಾಗಿ ಉತ್ತಮ ಉದ್ಯೋಗ ದೊರಕುತ್ತದೆ ಇದರಿಂದ ಉತ್ತಮರಾಗಿ ಬಾಳಲು ಸಾಧ್ಯ ನಿಮ್ಮ ಉದ್ಯೋಗ ನಿಮ್ಮ ಯಶಸ್ಸು ನಿಮ್ಮ ಕೈಯಲ್ಲಿದೆ ಎಂದು ವಿದ್ಯಾರ್ಥಿಗಳನ್ನು ಕುರಿತು ಕಿವಿ ಮಾತನ್ನು ಹೇಳಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ದೇವೇಂದ್ರಪ್ಪ ಹಾಗೂ ಪೂರ್ಣಿಮಾ ಹಾಗೂ ಇತರ ಎಲ್ಲಾ ಉಪನ್ಯಾಸಕ ವರ್ಗದವರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಮುರುಗೇಶ್ ರವರು ವಹಿಸಿದ್ದರು