Saturday, December 21, 2024
Homeರಾಜ್ಯಆಗಸ್ಟ್ 30 ರಂದು ಜಿಲ್ಲೆಯಾದ್ಯಂತ ಗೃಹಲಕ್ಷ್ಮಿ ಯೋಜನೆಗೆ ಚಾಲನೆ:ವಾಸಂತಿ ಉಪ್ಪಾರ್

ಆಗಸ್ಟ್ 30 ರಂದು ಜಿಲ್ಲೆಯಾದ್ಯಂತ ಗೃಹಲಕ್ಷ್ಮಿ ಯೋಜನೆಗೆ ಚಾಲನೆ:ವಾಸಂತಿ ಉಪ್ಪಾರ್

ದಾವಣಗೆರೆ; ಆ. 28 : ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದಲ್ಲಿ ಚಾಲನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಏಕಕಾಲಕ್ಕೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ನಗರದ 11 ಕಡೆ ವಿವಿಧ ಸ್ಥಳಗಳಲ್ಲಿ ಹಾಗೂ ಜಗಳೂರು. ಹರಿಹರ, ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳ ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ನಗರ ಪ್ರದೇಶಗಳ ವಾರ್ಡ್‍ಗಳಲ್ಲಿ  ಕಾರ್ಯಕ್ರಮ ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 3,27,870 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಒಟ್ಟು  ಶೇ, 87.93 ರಷ್ಟು ನೋಂದಣಿ ಪೂರ್ಣಗೊಂಡಿರುತ್ತದೆ.  ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿ ಮಾಡಿಸಿದ ಕುಟುಂಬದ ಯಜಮಾನಿ ಮಹಿಳೆಗೆ ರೂ. 2,000 ಗಳನ್ನು ನೇರವಾಗಿ ಡಿಬಿಟಿ ಮೂಲಕ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ನಗರದಲ್ಲಿ ಜರುಗುವ ಕಾರ್ಯಕ್ರಮ ಸ್ಥಳಗಳು: ಮಹಾನಗರ ಪಾಲಿಕೆ ಕಛೇರಿ, ಪಿ.ಬಿ ರಸ್ತೆ ವಾರ್ಡ್ ನಂ.25, 17, ಮಹಾನಗರ ಪಾಲಿಕೆ ಕಛೇರಿ 3 ವಿಭಾಗ ವಾರ್ಡ್ ನಂ.25, ನೂರಾನಿ ಶಾದಿ ಮಹಲ್, ಇಮಾಂ ನಗರ, ವಾರ್ಡ್ ನಂ.11, ಆಯಿμÁ ಶಾದಿಮಹಲ್, ಅಕ್ಸ ಮಸೀದಿ ಪಕ್ಕ, ವಾರ್ಡ್ ನಂ.12, ಚನ್ನಗಿರಿ ವಿರುಪಾಕ್ಷಪ್ಪ ಕಲ್ಯಾಣ ಮಂದಿರ, ಗಡಿಯಾರ ಕಂಬದ ಹತ್ತಿರ ವಾರ್ಡ್ ನಂ. 18, ಮಲ್ಲಿಕಾರ್ಜುನ ಸಮುದಾಯ ಭವನ, ಆರ್.ಎಂ.ಸಿ. ರಸ್ತೆ, ಬಂಬೂ ಬಜಾರ್ ವಾರ್ಡ್ ನಂ.20, 21, ಗೋಲ್ಡನ್ ಪ್ಯಾಲೇಸ್ ಬೂದಾಳ್ ರೋಡ್, ರಿಂಗ್ ರಸ್ತೆ, ವಾರ್ಡ್ ನಂ. 5, ಯಲ್ಲಮ್ಮ ದೇವಿ ಸಮುದಾಯ ಭವನ, ಜಾಲಿನಗರ ವಾರ್ಡ್ ನÀಂ.7, ಚಿದಂಬರ ದೇವಸ್ಥಾನ ಸಮುದಾಯ ಭವನ , ನಿಟ್ಟುವಳ್ಳಿ ವಾರ್ಡ್ ನÀಂ.29, ಅಂಬೇಡ್ಕರ್ ಸಮುದಾಯ ಭವನ, ಗಾಂಧಿ ನಗರ ವಾರ್ಡ್ ನಂ.1 ಇಲ್ಲಿ ಕಾರ್ಯಕ್ರಮ ನಡೆಯಲಿದೆ.  ಜಿಲ್ಲೆಯ ಎಲ್ಲಾ ಫಲಾನುಭವಿಗಳು ಸಮೀಪದ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments