ರಾಜನಹಳ್ಳಿ:
ದಿನಾಂಕ 7 ನೇ ಸೆಪ್ಟೆಂಬರ್ 23 ರಂದು ರಾಜನಹಳ್ಳಿ ಯ ಸಮೂಹ ಸಂಪನ್ಮೂಲ ಮಟ್ಟದಲ್ಲಿ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ದೆಯ ಕಾರ್ಯಕ್ರಮದಲ್ಲಿ ಹರಿಹರ ತಾಲ್ಲೂಕ್ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಹನುಮಂತಪ್ಪ ನವರು ಮಾತನಾಡಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಬೆಳೆಸೋದು ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯ ಎಂದರು..
ಕಾರ್ಯಕ್ರಮ ಕ್ಕೆ ಚಾಲನೆ ನೀಡಿದ ವಿಶ್ವ ಭಾರತಿ ವಿದ್ಯಾ ಸಂಸ್ಥೆ ಯ ಅಧ್ಯಕ್ಷರಾದ ರಾಜನಹಳ್ಳಿ ಮಂಜುನಾಥ್ ಮಾತನಾಡಿ ಮಕ್ಕಳ ಪ್ರತಿಭೆಯನ್ನು ಅನಾವರಣ ಗೊಳಿಸಲು ತೀರ್ಪುಗಾರರು ಪಾರದರ್ಶಕ ವಾಗಿ ತೀರ್ಪನ್ನು ನೀಡಿ ಅವರನ್ನ ತಾಲ್ಲೂಕ್ ಮಾಟ್ಟದಿಂದ ರಾಜ್ಯ ಮಟ್ಟದಲ್ಲಿ ತಮ್ಮ ಪ್ರತಿಭೆ ಯನ್ನ ಗುರುತಿಸಿಕೊಳ್ಳಲಿಕ್ಕೆ ಮುಕ್ತವಾಗಿ ಅವಕಾಶ ನೀಡಬೇಕು ಎಂದರು .
ಕಾರ್ಯಕ್ರಮವನ್ನ ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಾದ ಶಕುಂತಲಮ್ಮ ಯಲ್ಲಪ್ಪ ಉದ್ಘಾಟಿಸಿದರು,ಸಭೆಯಲ್ಲಿ ಪಂಚಾಯ್ತಿ ಯ ಉಪಾಧ್ಯಕ್ಷರಾದ ನೆಸ್ವಿ ಪರಶುರಾಮಪ್ಪ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ECO ತೀರ್ಥಪ್ಪ , ECO ಹರೀಶ್ ನೋಟಗಾರ್, ECO ಮಂಜುನಾಥ್, BRP ವೀರಪ್ಪ, ನಂಜುಂಡಪ್ಪ,ಶ್ರೀಮತಿ ರೂಪ S.N, ಪ್ರೌಢ ಶಾಲಾ ಮುಖೋಪಾಧ್ಯಯರಾದ ಚಕ್ರಸಾಲಿ . ಕಾರ್ಯಕ್ರಮ ಯಶಸ್ಸಿಗೆ ಬೆನ್ನೆಲುಬಾಗಿ CRP ಚನ್ನಕೇಶವ ಕಟ್ಟಿಯವರು ಮಾರ್ಗ ದರ್ಶನ ನೀಡಿದರು. ಎಲ್ಲಾ ಶಾಲಾ ಮುಖ್ಯೋಪಾಧ್ಯಯರು,ಶಾಲಾ ಶಿಕ್ಷಕರು, ಭಾಗವಹಿಸಿದ್ದರು,
ಕಾರ್ಯಕ್ರಮ ದಲ್ಲಿ ಕ್ಲಸ್ಟರ್ ಹಂತದಲ್ಲಿ 15 ಶಾಲೆಗಳಿಂದ 600 ಕ್ಕೂ ಹೆಚ್ಚು ಸ್ಪರ್ದಾಳುಗಳು ಭಾಗವಹಿಸಿದ್ದರು,
ಕಾರ್ಯಕ್ರಮವನ್ನು ಬಸವರಾಜ್ ಹೇಡಿಯಾಲ ನಿರೂಪಿಸಿದರೆ.ದಿಳ್ಳೆಪ್ಪ ಕುಂಟಗೌಡರ್ ಸ್ವಾಗತಿಸಿದರೆ .ಕೊನೆಯಲ್ಲಿ ಪ್ರಕಾಶ್ D.R, ವಂದಿಸಿದರು
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ , ಶುಚಿ ರುಚಿ ಊಟದ ವ್ಯವಸ್ಥೆ ,ವಿಶ್ವ ಭಾರತಿ ಶಾಲಾ ಶಿಕ್ಷಕರು , ಅಡುಗೆ ಸಿಬ್ಬಂದಿ ಎಲ್ಲರೂ ಜವಾಬ್ದಾರಿ ಯುತ ನಿರ್ವಹಿಸಿದ್ಫು ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದರು