Saturday, December 21, 2024
Homeಶಿಕ್ಷಣಮಡಿವಾಳ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.ಸಾಮಾಜಿಕ ನ್ಯಾಯ ಜೊತೆಗೆ ಉನ್ನತ ಶಿಕ್ಷಣ ಪಡೆದು ಮುಂದೆ ಬನ್ನಿ,-...

ಮಡಿವಾಳ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.ಸಾಮಾಜಿಕ ನ್ಯಾಯ ಜೊತೆಗೆ ಉನ್ನತ ಶಿಕ್ಷಣ ಪಡೆದು ಮುಂದೆ ಬನ್ನಿ,- ಇನ್ಸೇಟ್ಸ್ ವಿನಯ್ ಕುಮಾರ್.


ದಾವಣಗೆರೆ ಸೆ.11:ಶಿಕ್ಷಣ ಎಲ್ಲಾರಿಗೂ ಸಿಗುತ್ತಿದೆ, ಸಾಮಾಜಿಕ ನ್ಯಾಯ, ಆರ್ಥಿಕ ಸ್ಥಿತಿ ಉತ್ತಮ ಆಗುತ್ತಿದೆ ನಿಜ ಆದರೆ ಜೊತೆಗೆ ಇಡೀ ದೇಶದ ಅರ್ಥ ವ್ಯವಸ್ಥೆ ಸಾಮಾಜಿಕ ಆಡಳಿತ ಸುಧಾರಣೆ ಮಾಡುವ ಉನ್ನತ ಶಿಕ್ಷಣ ಎಲ್ಲಾರಿಗೂ ಸಿಗುತ್ತಿಲ್ಲ ಹಿಂದುಳಿದ ವರ್ಗಗಳ ಸಮಾಜದ ವಿದ್ಯಾರ್ಥಿಗಳು ನಮ್ಮ ಕೈಯಲ್ಲಿ ಆಗೋಲ್ಲ ಎಂದು ಸುಮ್ಮನಿರದೇ ಐಎಎಸ್ ಐಪಿಎಸ್ ಕೆಎಎಸ್ ನಂತಹ ಪರೀಕ್ಷೆ ಎದುರಿಸಿ ಮುಂದೆ ಬರುವಂತೆ ಇನ್ಸೇಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ನಿರ್ದೇಶಕ ಹಾಗೂ ದಾವಣಗೆರೆ ಲೋಕಸಭಾ ಟಿಕೆಟ್ ಆಕಾಂಕ್ಷಿ ವಿನಯ್ ಕುಮಾರ್ ಕಿವಿಮಾತು ಹೇಳಿದರು.
ಮಡಿವಾಳ ಮಾಚಿದೇವ ಸಂಘ ಮಹಿಳಾ ಸಂಘ,ಮಡಿಕಟ್ಟೆ ಸಂಘದ ಸಹಯೋಗದಲ್ಲಿ ನಡೆದ ಮಡಿವಾಳ ಮಾಚಿದೇವ ಶ್ರಾವಣ ಮಾಸ ಸ್ಮರಣೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ
ಭವಿಷ್ಯದ ಉನ್ನತ ಶಿಕ್ಷಣ – ಈ ಬಗ್ಗೆ ಉಪನ್ಯಾಸ ನೀಡಿದ ಅವರು ನೀವು ಸಮಾಜದ ಪ್ರತಿ ಯೊಬ್ಬರ ಕೊಳೆಯನ್ನು ತೊಳೆಯುವ ಕಾಯಕ ಮಾಡಿ ನಿಷ್ಕಲ್ಮಶ ಮನಸ್ಸಿನ ಕಷ್ಟದ ಜೀವನ ನೆಡೆಸುವ ಮಕ್ಕಳ ಶಿಕ್ಷಣದ ಬಗ್ಗೆ ಗಮನಹರಿಸಿ ಅವರ ಕೈಗಳಿಗೆ ಮೊಬೈಲ್ ಗಿಂತ ಪುಸ್ತಕ ಕೊಡಿ ಎಂದು ವಿನಯ್ ಮನವಿ ಮಾಡಿದರು.
ಈ ಸಮಜದ ಪರಿಶಿಷ್ಟ ಜಾತಿ ಮೀಸಲಾತಿ ಕುರಿತು ತಾವು ಕೂಡ ತಮ್ಮ ಧ್ವನಿ ಗೂಡಿಸಿ ಮುಂದೆ ಈ ಕ್ಷೇತ್ರದ ಸಂಸದನಾಗುವ ಸೌಭಾಗ್ಯ ದೊರಕಿದರೇ ಸಮರ್ಪಕವಾಗಿ ಕೆಲಸ ನಿರ್ವಹಿಸಬಲ್ಲೆ ಎಂದು ಭರವಸೆ ನೀಡಿದರು.

ಜಡೇಸಿಧ್ಧ ಯೋಗೀಶ್ವರ ಮಠ
ಶ್ರೀ ಶಿವಾನಂದ ಸ್ವಾಮೀಜಿ ಹಾಗೂ ರಾಣೆಬೆನ್ನೂರು ಮಠದ ಬಸವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಆರ್ ಜಿ ಕಾಲೇಜಿನ ಉಪನ್ಯಾಸಕೀ ಶ್ರೀಮತಿ ಶ್ವೇತಾ ರವರು ಮಾತನಾಡಿದರು.
ಅತಿಥಿಗಳಾಗಿ ಸಂಸದ ಜಿ ಎಂ ಸಿದ್ದೇಶ್ವರ, ಮಡಿವಾಳ ಸಮಾಜದ ಮಾಜಿ ಅಧ್ಯಕ್ಷ ಜಿ ಹೆಚ್ ನಾಗರಾಜ್,ಬಸವನಾಳ್ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನೇತ್ರಾವತಿ, ಡೈಮಂಡ್ ಮಂಜುನಾಥ, ನಾಗಮ್ಮ,ಯೋಗ ಶಿಕ್ಷಕ ಎಂ, ಪರಶುರಾಮ ನೌಕರರ ಸಂಘದ ಅಧ್ಯಕ್ಷ ಬಸವರಾಜ, ಶ್ರೀಮತಿ ವನಜಾಕ್ಷಿ ಪಾಂಡುರಂಗಪ್ಪ, ಮತ್ತಿತರರು ಉಪಸ್ಥಿತರಿದ್ದರು
ಅಧ್ಯಕ್ಷತೆಯನ್ನು ಜಿಲ್ಲಾ ಮಡಿವಾಳ ಮಾಚಿದೇವ ಸಂಘ ಅಧ್ಯಕ್ಷ ಎಂ ನಾಗೇಂದ್ರಪ್ಪ ವಹಿಸಿದ್ದರು.
ಆರಂಭದಲ್ಲಿ ಪರಶುರಾಮ ಶಿಷ್ಯರು ಯೋಗನೃತ್ಯ ಮಾಡಿ ಎಲ್ಲರ ಗಮನ ಸೆಳೆದರು.
ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ ಅಧ್ಯಕ್ಷ ಕಾಮ್ರೇಡ್ ಅವರಗೆರೆ ಉಮೇಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments