ಮೂಡಲಗಿ: ಸ,25-ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಪೌರಕಾರ್ಮಿಕರ ದಿನಾಚರಣೆಯ ನಿಮಿತ್ತವಾಗಿ ಪೌರಕಾರ್ಮಿಕರ ಸತ್ಕರಿಸಲಾಯಿತು.
ಜನರ ಆರೋಗ್ಯ ಕಾಯುವಲ್ಲಿ ಪೌರಕಾರ್ಮಿಕರ ಸೇವೆ ಅಮೂಲ್ಯವಾಗಿದೆ.ಸಮಾಜವು ಪೌರಕಾರ್ಮಿಕರನ್ನು ಗೌರವದಿಂದ ಕಾಣಬೇಕು.ಅವರ ದಿನ ನಿತ್ಯದ ಶ್ರಮ ಬಹಳ ದೊಡ್ಡದ .
ಇಲ್ಲಿಯ ಪುರಸಭೆಯಲ್ಲಿ ಪೌರಕಾರ್ಮಿಕರ ದಿನಾಚರಣೆ ಮತ್ತು ಹಿರಿಯ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪೌರಕಾರ್ಮಿಕರನ್ನು ನಿರ್ಲಕ್ಷ ಮಾಡಬಾರದು ಎಂದು ಪುರಸಭೆ ಸದಸ್ಯರಾದ ಈರಣ್ಣ ಕೊಣ್ಣೂರ ಹೇಳಿದರು.
ಕೋವಿಡ ಸಂದರ್ಭದಲ್ಲಿ ಪೌರಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಜನರ ಸೇವೆ ಮಾಡುವ ಮೂಲಕ ಜನರ ಆರೋಗ್ಯ ರಕ್ಷಣೆ ಮಾಡಿದ್ದಾರೆ.ಪೌರಕಾರ್ಮಿಕರು ಮಾಡುವ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಅತಿಥಿಯಾಗಿ ಆಗಮಿಸಿದ ಸಾಹಿತ್ಯಿ,ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ಪೌರಕಾರ್ಮಿಕರನ್ನು ಕಸದವರು ಎಂದು ತುಚ್ಛವಾಗಿ ಕಾಣಬಾರದು.ಅವರು ಊರನ್ನು ಸ್ವಚ್ಛ ಮಾಡಿ,ಎಲ್ಲರ ಆರೋಗ್ಯ ಕಾಪಾಡುವ ಮೂಲಕ ಪ್ರಾಥಮಿಕ ವೈಧ್ಯರ ಕಾರ್ಯ ಮಾಡುತ್ತಾರೆಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಹೇಳಿದರು.
ಹಿರಿಯ ಪೌರಕಾರ್ಮಿಕರಾದ ನಂದಾ ಗಸ್ತಿ,ಯಲ್ಲವ್ವ ಗಸ್ತಿ,ಲಕ್ಕವ್ವ ಗಸ್ತಿ,ರಾಮಚಂದ್ರ ಸಣ್ಣಕ್ಕಿ, ಕಾಶವ್ವ ನಾಗನೂರ,ರೇಣುಕಾ ತಳವಾರ,ಶಕುಂತಲಾ ಗಸ್ತಿ,ಮಹಾನಂದ ತಿಗಡಿ,ನಾಗವ್ವ ಗಸ್ತಿ,ದೇವಪ್ಪ ಗಸ್ತಿ,ಇವರನ್ನು ಸತ್ಕರಿಸಿದರು.
ಪ್ರಭಾರಿ ಮುಖ್ಯಾಧಿಕಾರಿ ಚಂದ್ರು ಪಾಟೀಲ, ಪುರಸಭೆ ಸದಸ್ಯರಗಳಾದ ಶಿವು ಚಂಡಕಿ,ಚನ್ನಪ್ಪ ಅಥಣಿ, ಸುಭಾಸ ಸಾಯನ್ನವರ,ರಮೇಶ ಆಲಗೂರ,ಮಲ್ಲಿಕಾರ್ಜುನ ಯರನಾಳ,ಲಲಿತಾ ಜಾಧವ ಇನ್ನು ಅನೇಕರು ಪಾಲ್ಗೊಂಡಿದ್ದರು.