ದಾವಣಗೆರೆ,ಹರಿಹರ ಅದು.14:ಪಡುವಣದ ನೇತಾರ ತನ್ನ ದೈನಂದಿನ ಕಾಯಕ ತೀರಿಸಿ ವಿಶ್ರಾಂತಿ ಪಡೆದಂತೆ ಹೊಲ ಗದ್ದೆಗಳಲ್ಲಿ ದುಡಿಯುವ,ಎಲೆ ಬಳ್ಳಿ ತೋಟದ ಕೆಲಸ ಮಾಡಿ ಮನೆ ಕಡೆ ದಾಪುಗಾಲು ಹಾಕುತ್ತಾ ದಿನ ಕರುಗಳ ಕುರಿ ಮೇಕೆ ಗಳ ದೊಡ್ಡಿಗೆ ಸೇರಲು ಅಲ್ಲಿ ನೆಲದ ಕೆಂದೂಳು ಮುಗಿಲೆತ್ತರಕ್ಕೆ ಹಾರಿ ಚಿತ್ತಾರ ಮೂಡಿಸಿದಂತೆ ಬೆಳ್ಳೂಡಿಯ ಊರಾದ ಆಂಜನೇಯ ಗುಡಿ ಆವರಣದಲ್ಲಿ ರಂಗು ರಂಗಿನ ಲೋಕದ ಬಣ್ಣ ಬಣ್ಣದ ಬೆಳಕಿನ ಹಬ್ಬ ದೇವ ಲೋಕವನ್ನು ನಾಚಿಸಿದಂತೆ ಜಗ್ಗನೆ ರಂಗಿನ ಚೆಲ್ಲಾಟ.
ವೇದಿಕೆಯಲ್ಲಿ ಲೋಕ ಕಲಾ ನೃತ್ಯ ಪ್ರದರ್ಶನ ಭಾರತ್ ಭಾರತಿ ಸಾಂಸ್ಕೃತಿಕ ಜಾನಪದ ನೃತ್ಯಗಳ ಉತ್ಸವಕ್ಕೆ ಹರಿಹರ ಶಾಸಕ ಬಿ ಪಿ ಹರೀಶ್, ನಂದಿಗಾವಿ ಶ್ರೀ ನಿವಾಸ್, ಲೋಕ ಕಲಾ ಯಾತ್ರೆ ಉಸ್ತುವಾರಿ ಕರ್ನಾಟಕ ವಿಭಾಗದ ಸಾಂಸ್ಕೃತಿಕ ನಿರ್ದೇಶಕ ಗೋಪಾಲ್ ಬೇತಾವರ್ ,ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಉಪಾಧ್ಯಕ್ಷರ ಗ್ರಾಮದ ಮುಖಂಡರೊಡಗೂಡಿ ವೇದಿಕೆಯ ಸಾಂಸ್ಕೃತಿಕ ಉತ್ಸವ ಕಲೆಗಳ ಕಲರವ ಕ್ಕೆ ಚಾಲನೆ ನೀಡಿ ಶುಭ ಹಾರೈಸುತ್ತಿದ್ದಂತೆ
ಛತ್ತೀಸಗಢದ ಜಾನಪದ ಸೊಗಡಿನ ತಂಡ ಆಯ ರಾಜ್ಯದ
ಸಂಸ್ಕೃತಿ ಬಿಂಬಿಸುವ ಕಲಾಪ್ರೌಡಿಮೆ ಅವಿಸ್ಮರಣೀಯ ಅನುಭವ ನೀಡಿ ಹಳ್ಳಿ ಜನರನ್ನು ಮೋಡಿ ಮಾಡಿತು.
ನಡು ನಡುವೆ ಸ್ಥಳೀಯ ಕಲಾವಿದರ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಕೊಟ್ಟಿದ್ದು ಈ ಲೋಕ ಕಲಾ ಯಾತ್ರೆ ಯ ಹೈಲೈಟ್ಸ್.
. ಮಧ್ಯಪ್ರದೇಶ , ಆಂಧ್ರಪ್ರದೇಶದ ತೆಲಂಗಾಣ ಪ್ರಾಂತ್ಯದ ಬುಡಕಟ್ಟು ಜನಾಂಗದ ನೃತ್ಯ ಕಲೆ ಸಂಸ್ಕೃತಿ
ಮೆರುಗು, ಮಹಾರಾಷ್ಟ್ರ,, ಕರಾವಳಿ ಭಾಗದ ಕೊರಗಜ್ಜನ ಮೂಲ ಧೈವ ಆರಾಧನೆಯ ಪ್ರತಿಬಿಂಬಿಸಿದ ನೃತ್ಯ ರೂಪಕ ರಾಜ್ಯ ಪ್ರಶಸ್ತಿ ವಿಜೇತ ಬೆಳ್ಳೂಡಿ ಬೀರಲಿಂಗೇಶ್ವರ ಡೊಳ್ಳಿನ ಸಂಘದ ಅಧ್ಬುತ ಕುಣಿತ
ಬೆಳ್ಳೂಡಿಯಷ್ಟೆ ಅಲ್ಲ ಸುತ್ತಲ ಬಾನುವಳ್ಳಿ ಹನಗವಾಡಿ,ಸಾಲಕಟ್ಟೆ ಷಂಶಿಪುರ,ಶಿವನ ಹಳ್ಳಿ,ನಂದಿತಾವರೆ, ಇತರೆ ಹಳ್ಳಿಗಳ ಸಾವಿರಾರು ಜನರು
ಕಿಕ್ಕಿರಿದು ತುಂಬಿತ್ತು, ಮಹಿಳೆಯರು,ದಸರೆ ರಜೆಯಲ್ಲಿ ದ್ದ ಮಕ್ಕಳು, ನೂರಾರು ಯುವ ಉತ್ಸಾಹಿ ತರುಣ ದಿಂಡು ತಮ್ಮ ಕಣ್ಮನಗಳ ತುಂಬಿಕೊಂಡಿದ್ದು ಅಷ್ಟೇ ಅಲ್ಲ ಮೊಬೈಲ್ ಗಳಲ್ಲಿ ಸೇರೆ ಹಿಡಿದು ತಮ್ಮ ಗೆಳೆಯರಿಗೆ ಬಂಧುಗಳಿಗೆ ನಮ್ಮೂರ ಕಲಾ ವೈಭವ ಸಾಂಸ್ಕೃತಿಕ ಮೇಳ ವೆಂದು ವಿಡಿಯೋ ತುಣುಕುಗಳ ಪೋಟೋ ಗಳ ಹರಿದಾಡಿ ಬಿಟ್ಟು ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಬೆಳ್ಳೂಡಿಯ
ಜಾನಪದ ಕಲರವ ಆಯೋಜಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಯುವ ಉತ್ಸಾಹಿ ದಾವಣಗೆರೆ ಜಿಲ್ಲೆಯ ನಮ್ಮ ಜನಪದ ಕಲೆಗಳನ್ನು ಇಡೀ ರಾಷ್ಟ್ರಮಟ್ಟದಲಿ ಹರಡಿದ ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ಅನುಭವಿ ಸಂಘಟಕ,ಮಾಗಾನಹಳ್ಳಿ ಮಂಜುನಾಥ್, ತಿಪ್ಪೇಶ್ ಕರೂರು,ರೇವಣಸಿದ್ದೇಶ್ ಬೆಳ್ಳೂಡಿ ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರು ಹಿರಿಯರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಇಂಥ ಸೌಹಾರ್ದತೆಯ ಸಂಭ್ರಮ ಸಡಗರ ಮಾದರಿ ಎನಿಸಿತು.
ಜನಪದ ಕಲರವ ನಡುವೆ ಗ್ರಾಮೀಣ ಪ್ರತಿಭೆ ಬಾನುವಳ್ಳಿ ಯ ಅಂತಾರಾಷ್ಟ್ರೀಯ ಖ್ಯಾತಿಯ ಬಾಲಯೋಗ ಪಟು ಸೃಷ್ಟಿ ಕೆ ವೈ ಇಪ್ಟಾ ಕಲಾ ತಂಡದ ಶಾಂಭವಿ ಏಕೈಕ ಪುತ್ರಿ ಶಿವ ತಾಂಡವ ನೃತ್ಯ ವನ್ನು ಯೋಗಕ್ಕೆ ಅಳವಡಿಸಿ ಪ್ರದರ್ಶನ ನೀಡಿ ಎಲ್ಲರ ಗಮನ ನಿಬ್ಬೆರಗಾಗಿ ಗಮನ ಸೆಳೆದರೇ ಅದೇ ಗ್ರಾಮದ ಸೋನುಶ್ರೀ ಭರತ ನಾಟ್ಯ ಮಾಡಿ ಹಳ್ಳಿಗಳಲ್ಲೂ ಶಾಸ್ತ್ರೀಯ ನೃತ್ಯ ಪಟು ಗಳಿರುವುದನ್ನು ಈ ವೇದಿಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯ.
ದಾವಣಗೆರೆ ತಾ.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಸುಮತಿ ಜಯಪ್ಪ, ಸುಶ್ರಾವ್ಯ ಕಂಠದಿಂದ ಕನ್ನಡ ನುಡಿಮುತ್ತುಗಳ ನಿರೂಪಣೆ, ಬೆಳ್ಳೂಡಿ ಭಜನೆ ಹಾಡುಗಳು, ದೊಡ್ಡಾಟ ಕಲೆಗೂ ವೇದಿಕೆ ಕಲ್ಪಿಸಿದ್ದು ಸ್ವಾಗತಾರ್ಹ ಬೆಳವಣಿಗೆ ಇಂಥ ಉತ್ತೇಜಿಸುವ ಜನಪದರ ಕಲೆಗಳ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಭಾರತೀಯ ಸಾಂಸ್ಕೃತಿಕ ಪರಿಷತ್ತು ನಾಗಪುರ ಲೋಕ ಕಲಾ ಯಾತ್ರೆ ನಿರಂತರ ಜನ ಮನ ತಟ್ಟಲೇಬುದು ನಮ್ಮೆಲ್ಲರ ಆಶಯ
– ಪುರಂದರ್ ಲೋಕಿಕೆರೆ