Saturday, December 21, 2024
Homeಆಯ್ಕೆ/ನೇಮಕಬಡ ರೈತ ಮಗನ ಅಸಮಾನ್ಯ ಸಾಧನೆ ಲಕ್ಕುಂಡಿ ಯಿಂದ ದೆಹಲಿವರೆಗೆ

ಬಡ ರೈತ ಮಗನ ಅಸಮಾನ್ಯ ಸಾಧನೆ ಲಕ್ಕುಂಡಿ ಯಿಂದ ದೆಹಲಿವರೆಗೆ

ಗದಗ ಜಿಲ್ಲೆ ಲಕ್ಕುಂಡಿಯ ಗ್ರಾಮ ನೂರಾರು ಪ್ರಾಚೀನ ದೇವಸ್ಥಾನಗಳ ತವರು ಎಂಬ ಪ್ರತೀತಿ ಇದೆ…
ಇಲ್ಲಿನ‌ ನೂರು ಮೆಟ್ಟಿಲುಗಳ ಬಾವಿ ಇಲ್ಲಿನ ದೈವ ಶಾಸನಕ್ಕೆ ಮುನ್ನುಡಿಯಾಗಿದೆ…
ಹಿಂದೆ “ಲೋಕಿ ಗುಂಡಿ” ಎಂದು ಕರೆಯಲ್ಪಡುತ್ತಿದ್ದ ಈ ಭಕ್ತಿ ಪೂರಕವಾಗಿದ್ದ ಈ ಸ್ಥಳ ಕ್ರಮೇಣ ಆಧುನಿಕ ಭರಾಟೆಯಲ್ಲಿ ” ಲಕ್ಕುಂಡಿ”ಯಾಗಿದೆ…

ಗದಗ ಜಿಲ್ಲೆಗೆ ಹತ್ತಿರವಾಗಿದ್ದರೂ ಇಂದಿಗೂ ಈ ಊರ ಜನರ ಬಹುಮುಖ್ಯವಾದ ಕಾಯಕ “ಕೃಷಿ”
ಬಹುತೇಕ ಕುಟಂಬಗಳಿಗೆ ಕೃಷಿಯೇ ಜೀವಾಳ….
ಇಂತಹ ರೈತರ ತವರು ಊರಲ್ಲಿ ಜನಿಸಿದ ಸತ್ಯಪ್ಪ ಪರಸಪ್ಪ ಗುರಿಕಾರ್ ನಮ್ಮ ಬಯಲು ಸೀಮೆಯ ಬಹುತೇಕ ರೈತ ಕುಟುಂಬಗಳಲ್ಲಿರುವ ಅಘೋಷಿತ ನಿತ್ಯ ನಿರಂತರ ಬಡತನದಲ್ಲಿ ಬೆಳೆದ ಕೂಸು..

ಇತರ ರೈತ ಮಕ್ಕಳಂತೆ ಇವರು ಸಹ ಬಹುತೇಕ ಶಿಕ್ಷಣವನ್ನು ಸರ್ಕಾರಿ ಶಾಲೆ ಕಾಲೇಜಿನಲ್ಲೇ ಮುಗಿಸಿದರು..
ಜೊತೆಜೊತೆಗೆ ತಂದೆ ತಾಯಿಯ ರೈತ ಕಾಯಕಕ್ಕೆ ತಾವು ಸಹ ಸಹಾಯ ಮಾಡುತ್ತ ಬೆಳೆದರು ಪಿಯುಸಿ ಬರುವ ಹೊತ್ತಿಗೆ ಊರಲ್ಲಿ ತಂದೆ ಮಾಡುತ್ತಿದ್ದ ಉಪ ಕಸುಬು “ಕಂಬಳಿ ನೇಯುವ ಕಾಯಕ” ವನ್ನು ತಾವೂ ಕಲಿತು ಕೆಲ ಕಾಲ ಊರಲ್ಲಿ ಹೊಲದ ಕೆಲಸದ ಜೊತೆಯಲ್ಲಿ ಕಂಬಳಿಯನ್ನು ನೇಯುತ್ತಾ ಮುಂದಿನ ಬದುಕಿನ ದಾರಿಯ ಸಮುದಾಯ ಕಟ್ಟುವ ಸೇವೆಯ ಕನಸು ಇತ್ತಾದರೂ ಮನೆಯಲ್ಲಿನ ಬಡತನದ ಕಾರಣದಿಂದ ದೂರದ ಹೊಳೆಯುವ ನಕ್ಷತ್ರ ನೋಡಿ ಖುಷಿ ಪಡುವುದೇ ರೈತ ಮಕ್ಕಳ ಏಕೈಕ ನಿಂತ ನೀರ ನಿರೀಕ್ಷೆಯಂತೆ ಎಂಬಂತೆ ಕೂಡಲಿಲ್ಲ ಶ್ರೀಯುತ ಸತ್ಯಪ್ಪ ಗುರಿಕಾರ್ ರವರು ಕಂಬಳಿ ನೇಕಾರರು ಸಂಘಟಿತರಾಗದೇ ಇದ್ದರು ಇದನ್ನು ಅರಿತ ಸತ್ಯಪ್ಪನವರು ತಾವೇ ಸ್ವ ಇಚ್ಚಾವಹಿಸಿ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಜಿಲ್ಲೆಯ ಮೊದಲ ಕಂಬಳಿ ನೇಕಾರರ ಸಂಘ ಸ್ಥಾಪಿಸಿದರು ಆಗ ಇವರ ವಯಸ್ಸು ಕೇವಲ ಇಪ್ಪತ್ತು…

ಆದರೆ ಆಧನಿಕ ಅಬ್ಬರದ ಬ್ಲಾಂಕೇಟ್ ಗಳ ಕಾರುಬಾರಿನಲ್ಲಿ ನಮ್ಮ ನೆಲದ ಸಂಸ್ಕೃತಿ ಸಂಸ್ಕಾರದ ದೈವ ಸಂಕಲ್ಪದಂತ ಕಂಬಳಿಗೆ ಮಾರುಕಟ್ಟೆ ಕಡಿಮೆ ಆಗುತ್ತಾ ಹೋಯಿತು ಕ್ರಮೇಣ ಅದು ಕೇವಲ ಪೂಜೆ ಪುನಸ್ಕಾರಕ್ಕೆ ಕಂಬಳಿ ಬಳಸುವ ಪದ್ದತಿ ರೂಡಿಸಿಕೊಂಡ ಜನರ ಮಧ್ಯೆ ಬಹುತೇಕ ಕಂಬಳಿ ಉದ್ಯಮ ಮುಳುಗಿ ಹೋಯಿತು…
ಇಂತಹ ವಿಷಮ ಗಳಿಗೆಯಲ್ಲಿ ಸತ್ಯಪ್ಪನವರ ಕುಟುಂಬಕ್ಕೆ ತುಸು ಆರ್ಥಿಕ ಚೈತನ್ಯವಾಗಿದ್ದ ಕಂಬಳಿ ಕಸುಬು ದೊಡ್ಡ ಹೊಡೆತ ಕೋಡುತ್ತಾ ಹೋಯಿತು…

ಇದನ್ನರಿತ ಸತ್ಯಪ್ಪ ವಿಧಿ ಇಲ್ಲದೇ ರೈತ ಕುಟುಂಬದ ಬಡತನದ ಹೊರೆ ಕಡಿಮೆ ಮಾಡಲು ವಿಜಯ ಸಂಕೇಶ್ವರರ ವಿ.ಆರ್.ಎಲ್ ಬಸ್ಸಿನ ಚಾಲಕರಾಗಿ ಕೆಲ ವರ್ಷಗಳ ಕಾಲ ಕೆಲಸ ಮಾಡಿದರು ಇಂತಹ ಸಂಕಷ್ಟದ ಕಾಲದಲ್ಲೂ ಸತ್ಯಪ್ಪ ತಮ್ಮ ಛಲ ಬಿಡಲಿಲ್ಲ ಸೋಲದೇ ಬದುಕಿನ ದಾರಿಯಲಿ ನಡೆದೇ ನೆಡೆಯುತ್ತೇನೆ ಎಂಬ ಹಠಕ್ಕೆ ಅವರ ಶ್ರೀಮತಿಯವರು ಅವರ ಪೋಷಕರ ಸಹಕಾರದಿಂದ ಮುಂದೆ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕ ಕಂ ನಿರ್ವಾಹಕ ವೃತ್ತಿಗೆ ಆಯ್ಕೆಯಾಗಿ ಸರಿಸೂಮಾರು ಹದಿನೆಂಟು ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿಯ ಬೆಂಗಳೂರು ಕೇಂದ್ರೀಯ ವಿಭಾಗದಲ್ಲಿ ಘಟಕ -೦೨ ರಲ್ಲಿ ಚಾಲಕ ಕಂ ನಿರ್ವಾಹಕ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ

ಇದರ ಜೊತೆ ಜೊತೆಗೆ ತಮ್ಮ ಬಿಡುವಿನ ಸಮಯದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ತಮ್ಮ ಸಮುದಾಯವನ್ನು ಕಟ್ಟುವ ಒಗ್ಗೂಡಿಸುವ ಕಾಯಕ ಮಾಡುತ್ತಾ ಬಂದಿದ್ದಾರೆ ಕರ್ನಾಟಕದ ಉತ್ತರದಿಂದ ದಕ್ಷಿಣದ ವರೆಗೂ ಊರ್ವದಿಂದ ಪಶ್ಚಿಮದವರೆಗೂ ಸಂಚರಿಸಿ ನೂರಾರು ಯುವಕರನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರೀಯುತ ಸತ್ಯಪ್ಪ ಗುರಿಕಾರ್ ಎಲೆಮರೆಯಕಾಯಿಯಂತೆ ಶ್ರಮಿಸಿದ್ದಾರೆ ಆದರೆ ಎಂದಿಗೂ ತಮ್ಮ ಸೇವೆಯನ್ನು ಹೇಳಿಕೊಳ್ಳದೇ ಭಗವಂತ ಆಶೀರ್ವಾದ ನಂದೇನಿದೆ ಎಂದು ತಮ್ಮ ಸಹಕಾರದ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ…

ನಾಡಿನ ಸಮಸ್ತ ಸಮುದಾಯದ ಸಂಚಾರದ ಸಮಾಗಮ ಕೊಂಡಿಯಾಗಿರುವ ಶ್ರೀಯುತ ಸತ್ಯಪ್ಪ ಗುರಿಕಾರ್ ರವರು ಮುಂದೆ ದೇಶಾದ್ಯಂತ ಸಂಚರಿಸಿ ಅಲ್ಲಿಯೂ ತಮ್ಮ ಸಮುದಾಯ ಕಟ್ಟುವ ಕಾಯಕ ಮುಂದುವರಿಸಿಕೊಂಡು ಬರುತ್ತಿದ್ದಾರೆ ಇದಕ್ಕೆ ಇಂದಿಗೂ ಅವರು ಯಾರಿಂದಲೂ ನಯಪೈಸೆ ಸ್ವೀಕರಿಸಿಲ್ಲ ಎಂಬುದು ಅಷ್ಟೇ ಸತ್ಯ…
ಸಮುದಾಯದ ಒಂದು ಪುಟ್ಟ ಕೆಲಸ ಮಾಡಿದರೂ ಅದರಲ್ಲಿ ತಮ್ಮ ಲಾಭ ಹುಡುಕುವ ಜನರ ಮಧ್ಯೆ ಸತ್ಯಪ್ಪ ಗುರಿಕಾರ್ ಸೇವೆ ನಿಜಕ್ಕೂ ಬಿಳಿ ಹಾಳೆಯಂತೆ ಶ್ರೇಷ್ಠ…

ಇವರ ವೃತ್ತಿ ಜೊತೆಜೊತೆಗೆ ದೇಶಾದ್ಯಂತ ಸಂಚರಿಸಿ ಸಮಾನ ವಯಸ್ಕ ತಂಡ ಕಟ್ಟಿಕೊಂಡು ಸಮುದಾಯದ ಆರ್ಥಿಕ ಶೈಕ್ಷಣಿಕ ಭಕ್ತಿ ಪೂರ್ವಕ ಸೇವೆಯನ್ನು ಗುರುತಿಸಿ ಇವರನ್ನು ಒ.ಬಿ.ಸಿಯ ರಾಷ್ಟ್ರೀಯ ಸಂಚಾಲಕ ಮತ್ತು ದಕ್ಷಿಣ ಭಾರತದ ಒಬಿಸಿ‌ ಮುಖ್ಯಸ್ಥರನ್ನಾಗಿ ನೇಮಿಸಿದೆ ರಾಷ್ಟ್ರೀಯ ಒ.ಬಿ.ಸಿ.ತಂಡ..

ಬಿಡುವಿನ ಬಹುಪಾಲನ್ನು ತಮಗೆ ಇರುವ ಬಹುತೇಕ ರಜೆಯ ದಿನಗಳನ್ನು ಸಮುದಾಯದ ಕಾಯಕಕ್ಕೆ ಮೀಸಲಿಟ್ಟು ತಳ ಸಮುದಾಯದ ಏಳ್ಗಗೆ ಶ್ರಮಿಸುತ್ತಿರುವ ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಗುರುತಿಸಿ ರಾಷ್ಟ್ರೀಯ ಸ್ಥಾನಮಾನದ ಕೊಟ್ಟು ಗೌರವಿಸಿದ ಒಬಿಸಿ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಯುತ ವಿಜಯ್ ಸಿಂಗ್ ಪಾಲ್ ರವರಿಗೂ ಸಮಸ್ತ ಒಬಿಸಿ ಒಕ್ಕೂಟಕ್ಕೂ ಕರ್ನಾಟಕದ ಸಮಸ್ತ ಒಬಿಸಿ ಸಮುದಾಯದ ಪರವಾಗಿ ಧನ್ಯವಾದಗಳು..
ಶ್ರೀಯುತ ಸತ್ಯಪ್ಪ ಗುರಿಕಾರ್ ಸರ್ ರವರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ..

  • ಕೆ.ನಾಗರಾಜ ಉಲವತ್ತಿ
RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments