Saturday, December 21, 2024
Homeಸಾಧನೆಎಐಟಿಯುಸಿ ಕಾರ್ಮಿಕ ಸಂಘಟನೆಗೆ ಹೋರಾಟ, ತ್ಯಾಗ, ಬಲಿದಾನದ ಹಿನ್ನಲೆಯಿದೆ…--ಕೆ.ರಾಘವೇಂದ್ರ ನಾಯರಿ

ಎಐಟಿಯುಸಿ ಕಾರ್ಮಿಕ ಸಂಘಟನೆಗೆ ಹೋರಾಟ, ತ್ಯಾಗ, ಬಲಿದಾನದ ಹಿನ್ನಲೆಯಿದೆ…–ಕೆ.ರಾಘವೇಂದ್ರ ನಾಯರಿ

ದಾವಣಗೆರೆ:ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯದ ನಂತರದಲ್ಲಿ ಕಾರ್ಮಿಕ ವರ್ಗದ ಶೋಷಣೆಯ ವಿರುದ್ಧ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ನಡೆಸಿದ ನಿರಂತರ ಹೋರಾಟಗಳಿಂದ ಕಾರ್ಮಿಕರಿಗೆ ಹಲವು ಸೌಲಭ್ಯಗಳು ಹಾಗೂ ಕಾರ್ಮಿಕ ವರ್ಗದ ರಕ್ಷಣೆಗಾಗಿ ಹಲವಾರು ಕಾನೂನುಗಳು ಜಾರಿಗೆ ಬಂದಿವೆ. ಸಂಘಟನೆಗೆ ಹೋರಾಟ, ತ್ಯಾಗ ಮತ್ತು ಬಲಿದಾನದ ಹಿನ್ನಲೆಯಿದೆ ಎಂದು ಎಐಟಿಯುಸಿ ದಾವಣಗೆರೆ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಹೇಳಿದರು. ಅವರು ಪಂಪಾಪತಿ ಭವನದಲ್ಲಿ ಆಯೋಜಿಸಿದ್ದ ಎಐಟಿಯುಸಿ ಸಂಘಟನೆಯ 104 ನೇ ಸ್ಥಾಪನಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತಾಡುತ್ತಿದ್ದರು. ಅಕ್ಟೋಬರ್ 31, 1920 ರಲ್ಲಿ ಸ್ಥಾಪನೆಗೊಂಡ ಎಐಟಿಯುಸಿ ಸಂಘಟನೆಯು ತನ್ನ 103 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಹೋರಾಟದ ಪರಂಪರೆಯನ್ನು ಕಾರ್ಮಿಕ ವರ್ಗಕ್ಕೆ ನೀಡಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕಾರ್ಮಿಕ ವರ್ಗವನ್ನು ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿತು. ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದಾಟಿ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲೂ ಕಾರ್ಮಿಕ ವರ್ಗದ ಶೋಷಣೆ ನಿಂತಿಲ್ಲ. ಅವರ ಪರವಾಗಿ ಎಐಟಿಯುಸಿ ಕಾರ್ಮಿಕ ಸಂಘಟನೆ ನಿರಂತರವಾಗಿ ಹೋರಾಟ ಮಾಡುತ್ತಿದೆ ಎಂದು ಕೆ.ರಾಘವೇಂದ್ರ ನಾಯರಿ ಹೇಳಿದರು.

ಹಿರಿಯ ಕಾರ್ಮಿಕ ನಾಯಕ ಆನಂದರಾಜ್ ಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಮಾಡಿ ಮಾತಾಡಿ ಎಐಟಿಯುಸಿ ಸಂಘಟನೆ ಸ್ವಾತಂತ್ರ್ಯ ಪೂರ್ವದಲ್ಲೇ ಕಾರ್ಮಿಕರ ಹಿತ ರಕ್ಷಣೆಯ ಉದ್ದೇಶದಿಂದ ಸ್ಥಾಪನೆಗೊಂಡ ಕಾರ್ಮಿಕ ಸಂಘಟನೆಯಾಗಿದೆ. ಕಾಂ.ಲಾಲಾಲಜಪತ ರಾಯ್, ಕಾಂ.ಪಂಡಿತ್ ಜವಾಹರಲಾಲ್ ನೆಹರು, ಕಾಂ‌.ಸುಭಾಷ್ ಚಂದ್ರ ಬೋಸ್, ಕಾಂ.ಎಸ್.ಎ.ಡಾಂಗೆ, ಕಾಂ.ಇಂದ್ರಜಿತ್ ಗುಪ್ತಾ, ಕಾಂ.ಎ.ಬಿ.ಬರ್ದನ್, ಕಾಂ.ವಿ.ವಿ.ಗಿರಿ. ಕಾಂ.ಗುರುದಾಸ ಗುಪ್ತಾ ಮುಂತಾದವರ ನಾಯಕತ್ವದಲ್ಲಿ ಈ ಸಂಘಟನೆ ಕಾರ್ಮಿಕರ ಪರವಾಗಿ ನಿರಂತರವಾಗಿ ಹೋರಾಡಿ ಕಾರ್ಮಿಕ ವರ್ಗಕ್ಕೆ ಶಕ್ತಿಯಾಗಿದೆ ಎಂದರು.

ಎಐಟಿಯುಸಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಹೆಚ್‌.ಜಿ.ಉಮೇಶ್ ಅವರಗೆರೆ ಮಾತನಾಡಿ ಸರಕಾರವು ಪೊಳ್ಳು ಘೋಷಣೆ, ಭಾಷಣಗಳಿಂದ ದುಡಿಯುವ ವರ್ಗ ಮತ್ತು ಯುವ ಜನತೆಯ ದಿಕ್ಕು ತಪ್ಪಿಸುತ್ತಿದೆ. ದೇಶದ ಸಂವಿಧಾನವನ್ನೇ ಬುಡುಮೇಲು ಮಾಡಿ ದೇಶವನ್ನು ಫ್ಯಾಸಿಸಮ್ ಕಡೆಗೆ ಒಯ್ಯುತ್ತಿದೆ. ಇದರ ವಿರುದ್ಧವೂ ಎಐಟಿಯುಸಿ ಸಂಘಟನೆ ಹೋರಾಡುತ್ತಿದೆ ಎಂದರು.

ಕಾರ್ಮಿಕ ಮುಖಂಡರಾದ ಅವರಗೆರೆ ಚಂದ್ರು, ಹೆಚ್.ಕೆ.ಕೊಟ್ರಪ್ಪ, ಮೊಹಮದ್ ಭಾಷಾ, ಅವರಗೆರೆ ವಾಸು, ಎಂ.ಬಿ.ಶಾರದಮ್ಮ, ಪಿ.ಷಣ್ಮುಖ ಸ್ವಾಮಿ, ಐರಣಿ ಚಂದ್ರು, ನರೇಗಾ ರಂಗನಾಥ್, ವಿ.ಲಕ್ಷ್ಮಣ ಮುಂತಾದವರು ಎಐಟಿಯುಸಿ ಸ್ಥಾಪನಾ ದಿನಾಚರಣೆಗೆ ಶುಭ ಕೋರಿದರು.

ಸಮಾರಂಭದಲ್ಲಿ ಕಾಂ.ಶಿವಕುಮಾರ್ ಶೆಟ್ಟರ್, ಕಾಂ.ಸುರೇಶ್, ಕಾಂ. ಜ್ಯೋತಿಲಕ್ಷ್ಮಿ, ಕಾಂ‌.ನೇತ್ರಾವತಿ, ಕಾಂ.ಚನ್ನಮ್ಮ, ಕಾಂ.ಪದ್ಮ, ಅವರಗೆರೆ ಎ.ತಿಪ್ಪೇಶಿ, ಸುರೇಶ್ ಮುದಹದಡಿ, ಮುರುಗೇಶ್ ಭಾರತ್ ಕಾಲೋನಿ, ಉಮಾಪತಿ ಮುಂತಾದವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments