ದಾವಣಗೆರೆ, ನ. 2 : ಗೋವಾದಲ್ಲಿ ನವಂಬರ್ 4 ರಿಂದ 8 ರವರೆಗೆ ನಡೆಯಲಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಜಿಲ್ಲೆಯ ಕ್ರೀಡಾ ವಸತಿ ನಿಲಯದ ಖೋ-ಖೋ ಕ್ರೀಡಾಪಟುಗಳು ಮತ್ತು ತರಬೇತುದಾರರು ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ರಾಜ್ಯ ಪುರಷರ ಖೋ-ಖೋ ತಂಡಕ್ಕೆ ಜಿಲ್ಲಾ ಕ್ರೀಡಾ ವಸತಿ ನಿಲಯದ ಕ್ರೀಡಾ ಪಟುಗಳಾದ ಅರ್ಜುನ್, ಮಹಮ್ಮದ್ ತಾಸೀನ್ ಹಾಗೂ ಶರತ್ ಜೆ.ಜಿ ಇವರು ಆಯ್ಕೆಯಾಗಿದ್ದು, ಇಲಾಖೆಯ ತರಬೇತುದಾರರಾದ ರಾಮಲಿಂಗಪ್ಪ. ಜೆ ಮತ್ತು ಸುನಿತ ಎಂ.ಸಿ.ಇವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ರಾಜ್ಯ ಮಹಿಳೆಯರ ಖೋ-ಖೋ ತಂಡಕ್ಕೆ ತರಬೇತುದಾರರಾಗಿ ರಾಮಲಿಂಗಪ.್ಪ ಜೆ ಆಯ್ಕೆಯಾಗಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಆರ್.ಜಯಲಕ್ಷ್ಮೀಬಾಯಿ ತಿಳಿಸಿದ್ದಾರೆ.