Saturday, December 21, 2024
Homeರಾಜ್ಯಸೂರ್ಯ-ಚಂದ್ರ ಇರುವವರೆಗೂ ಕನ್ನಡ ಭಾಷೆ ಶಾಶ್ವತ, ನಾರಾಯಣ ಶರಣರು

ಸೂರ್ಯ-ಚಂದ್ರ ಇರುವವರೆಗೂ ಕನ್ನಡ ಭಾಷೆ ಶಾಶ್ವತ, ನಾರಾಯಣ ಶರಣರು

ಮೂಡಲಗಿ:ನ,07-ಪಟ್ಟಣದ ಚೈತನ್ಯ ಕೋ- ಆಪ್ ಕ್ರೆಡಿಟ್ ಸೊಸಾಯಿಟಿಯು ಸಭಾ ಭವನದಲ್ಲಿ,ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ತಾಲೂಕಾ ಘಟಕದವರಿಂದ ಕನ್ನಡ ರಾಜ್ಯೋತ್ಸವದ ನಿಮಿತ್ತವಾಗಿ ಆಯೋಜಿಸಿದ “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ”ವಿಷಯದ ಕುರಿತು ಕಾರ್ಯಕ್ರಮ ಜರುಗಿತು. ಉಪನ್ಯಾಸಕರಾಗಿ ಆಗಮಿಸಿ ಕನ್ನಡನಾಡು ಈ ವರೆಗೆ ಎಂಟು ಜ್ಞಾನ ಫೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಹೆಮ್ಮೆಯ ನಾಡು ನಮ್ಮದು. ಕನ್ನಡದ ಹಲವಾರು ಕಟ್ಟಾಳುಗಳು ಮತ್ತು ಮಹನೀಯರ ಹೋರಾಟದ ಫಲವಾಗಿ ಇಂದು ಕರ್ನಾಟಕದ ಕಂಪು ವಿಶ್ವವ್ಯಾಪಿಯಾಗಿ ಹರಡಿದೆ ಎಂದು ನಾಗನೂರ ಅರಣ್ಯ ಸಿದ್ದೇಶ್ವರ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಶಿಕ್ಷಕ ಅನಿಲ ಭಂಡಾರಿ ಹೇಳಿದರು.
ಎರಡು ಸಾವಿರ ವರ್ಷ ಪೂರ್ವ ಇತಿಹಾಸ ಇರುವ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ.ಕನ್ನಡ ಭಾಷೆಗೆ ಎಂದಿಗೂ ಅಳಿವು ಇಲ್ಲ.ಸೂರ್ಯ-ಚಂದ್ರ ಇರುವಷ್ಟು ಅದು ಶಾಶ್ವತ.
ಹಳೆಗನ್ನಡದಿಂದ ಹೊಸಗನ್ನಡದತ್ತ ಸಾಗಿದ ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡ ಭಾಷೆಯು ತನ್ನ ಹಿರಿಮೆ ಗರಿಮೆಯನ್ನಯ ಮೆರೆದಿದೆ ಕನ್ನಡ ನಾಡಿನ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಪ್ರೀತಿಸುವುದರ ಮೂಲಕ ಹೆಸರಾದ ಕರ್ನಾಟಕವನ್ನು ಉಸಿರಾಗಿಸಿಕೊಳ್ಳಬೇಕೆಂದು ಕಾರ್ಯಕ್ರಮದ ಸಾನಿದ್ಯ ವಹಿಸಿ ವಡೇರಹಟ್ಟಿ ಗ್ರಾಮದ ಅಂಬಾಪೀಠದ ನಾರಾಯಣ ಶರಣರು ಹೇಳಿದರು .
ಮಕ್ಕಳ ಸಾಹಿತ್ಯಿ ಪ್ರೊ,ಸಂಗಮೇಶ ಗುಜಗೋಂಡ,ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ನಿವೃತ್ತ ಶಿಕ್ಷಕ ಬಸವರಾಜ ತರಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಪೂರ್ಣಿಮಾ ಯಲಿಗಾರ,ಶೈಲಜಾ ಬಡಿಗೇರ, ಅನಿಲ ಮಡಿವಾಳರ,ಚಿದಾನಂದ ಹೂಗಾರ(ಸ್ವರಚಿತ ಕವಿತೆಗಳು ವಾಚಿಸಿದರು),ಮೂಡಲಗಿ ತಾಲೂಕ ಕಸಾಪ ಅಧ್ಯಕ್ಷರು ಡಾllಸಂಜಯ ಶಿಂಧಿಹಟ್ಟಿ,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದವರು ಬಾಲಶೇಖರ ಬಂದಿ, ಸಾಹಿತ್ಯಗಳು ಡಾllಮಹಾದೇವ ಜಿಡ್ಡಿಮನಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಉಪಸ್ಥಿತರಿದ್ದರು. ಗೀತಾ ಹಿರೇಮಠ ನರೂಪಿಸುದರು ಹಾಗೂ ಸಿ.ಎಸ್.ಮೋಹಿತೆ ವಂದಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments