ಮೂಡಲಗಿ: ನ,08-ತಾಲೂಕಿನ ಯಾದವಾಡ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ “ಯಾದವಾಡ ಸಾಂಸ್ಕೃತಿಕ ಉತ್ಸವ” ಕಾರ್ಯಕ್ರಮ ನಡೆಯಿತು.
ಕರ್ನಾಟಕ ಎನ್ನುವ ಪರಿಕಲ್ಪನೆ ಹುಟ್ಟಿದ್ದೇ ಉತ್ತರ ಕರ್ನಾಟಕದ ಜನರಿಂದ.ಕರ್ನಾಟ ಏಕೀಕರಣಕ್ಕಾಗಿ ಬ್ರಿಟಿಷರ್ ಕಾಲದಲ್ಲಿ ಹೋರಾಟಗಳು ಪ್ರಾರಂಭವಾಗಿದ್ದವು.ಉತ್ತರ ಕರ್ನಾಟಕದ ಆಲೂರು ವೆಂಕಟರಾಯರು ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ರಚನೆಗೆ ಬೆಂಬಲವಾಗಿ ನಿಂತರು. ಕರ್ನಾಟಕ ಏಕೀಕರಣ ಚಳುವಳಿ ಮಾಡುವ ಮೂಲಕ ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರರಾಗಿದ್ದಾರೆ.ಕರ್ನಾಟಕ ಎನ್ನುವ ಹೆಸರಿನಿಂದ ಸಂಸ್ಥೆಗಳು ಸ್ಥಾಪನೆಯಾಗಿದ್ದು ಉತ್ತರ ಕರ್ನಾಟಕದಲ್ಲಿ ಮೊದಲು.1890 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಯಿತು,ಕರ್ನಾಟಕ ಇತಿಹಾಸ ಮಂಡಲ,ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸಾಯಿಟಿ,ಘಟಪ್ರಭಾ ಕರ್ನಾಟಕ ಆರೋಗ್ಯ ಧಾಮ ಹೀಗೆ ಕರ್ನಾಟಕ ಒಗ್ಗೂಡಲು ಉತ್ತರ ಕರ್ನಾಟಕವೇ ಕಾರಣ.ಉತ್ತರ ಕರ್ನಾಟಕಕ್ಕೆ ಇಷ್ಟೆಲ್ಲಾ ಇತಿಹಾಸ ಇದ್ದರು ಸರ್ಕಾರ ಮಾತ್ರ ಮಲತಾಯಿ ಧೋರಣೆ ಮಾಡುತ್ತಿದೆ.ಕಾವೇರಿ ಹೋರಾಟಕ್ಕೆ ಇರುವಂತ ಕಿಚ್ಚು ಉತ್ತರ ಕರ್ನಾಟಕದ ನದಿಗಳ ಕುರಿತು ,ನೀರು ಹಂಚಿಕೆ ಕುರಿತು ಎಲ್ಲಿಯೂ ಇರೋದಿಲ್ಲ.ನಮ್ಮ ಬೆಳಗಾವಿ ಸುವರ್ಣ ಸೌದದಲ್ಲಿ 10 ದಿನಗಳ ಕಾಲ ಅಧಿವೇಶನ ನಡೆದರೂ ಕೂಡಾ ಉತ್ತರ ಕರ್ನಾಟಕದ ಅಭಿವೃದ್ಧಿ ಮಾತ್ರ ಇಲ್ಲ.ಡಾllಸರೋಜಿನಿ ಮಹಿಷಿ ವರದಿ ಪ್ರಕಾರ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡಬೇಕು,ಆದರೆ ಯಾವುದು ಆಗುತ್ತಿಲ್ಲ.ಯಾದವಾಡ ಗ್ರಾಮದಲ್ಲಿ ಸಿಮೆಂಟ್ ಕಾರ್ಖಾನೆಗಳು ಇದ್ದರೂ ಸಹ ಸ್ಥಳೀಯ ಯುವಕರಿಗೆ ಉದ್ಯೋಗ ಇಲ್ಲ.ಹಾಗಾಗಿ ಪ್ರತಿಯೊಬ್ಬ ಯುವಕನಿಗೂ ಕೂಡಾ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸಿಗುವಂತ ವ್ಯವಸ್ಥೆಯ ಸಲುವಾಗಿ ಯಾದವಾಡ ಯುವಕರು ಉದ್ಯೋಗ ಚಳವಳಿ ಪ್ರಾರಂಭವಾಗಬೇಕು ಎಂದು ಯುವಕರಿಗೆ ಕರೆ ನೀಡಿದರು ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಶಿ.
ಕಳೆದ 15 ವರ್ಷದಿಂದ ನಮ್ಮ ಕರವೇ ಸಂಘಟನೆಯಿಂದ ಗ್ರಾಮದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಾ ಬಂದಿದೆ.ಕನ್ನಡಿಗರ ಶ್ರಮದಿಂದ ಕನ್ನಡ ಭಾಷೆ ಉಳಿಯುತ್ತದೆ. ಈ ವರ್ಷ ಕೂಡಾ ಮೈಸೂರು ರಾಜ್ಯಕ್ಕೆ, ‘ಕರ್ನಾಟಕ’ ಎಂದು ಮರು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆ ವಿವಿಧ ಕಿರು ತೆರೆಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನಮ್ಮ ಕರವೇ ಸಂಘಟನೆಯ ಜಿಲ್ಲಾ ಸಂಚಾಲಕ ಕಲ್ಮೇಶ ಗಾಣಿಗ ಹೇಳಿದರು. ಕಾರ್ಯಕ್ರಮದ ಸಾನಿದ್ಯ ವಹಿಸಿದ ಯಾದವಾಡದ ಚೌಕಿಮಠದ ಶಿವಯೋಗಿ ದೇವರು ಹಾಗೂ ಪತ್ರಮಠದ ಶಿವಾನಂದ ಮಹಾರಾಜರು ಮಾತನಾಡಿದರು.
ನಿವೃತ್ತ ಸೈನಿಕ ಶಶಿಕಾಂತ ಪೂಜೇರಿ, ಕ್ರೀಡಾ ಪಟು ಯಲ್ಲಾಲಿಂಗ ಯಾವಗಲ್ ಹಾಗೂ ಜಿ ಎನ್ ಎಸ್ ಶಾಲೆಯ ಶಿಕ್ಷಕ ಎಸ್. ಎಸ್.ಬಳೂರಗಿ,ವಿದ್ಯಾರ್ಥಿಗಳಾದ ಬಸವರಾಜ ಕೌಜಲಗಿ, ಪವನ ಕೊಲ್ಲಾಪುರ, ಪುಷ್ಪಾ ವೆಂಕಟಾಪೂರ,ಮಹೇಶ್ವರಿ ಮತ್ತು ಪೌರಕಾರ್ಮಿಕರನ್ನು ಸತ್ಕರಿಸಲಾಯಿತು.
ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡ,ಹಣಮಂತ ಮಳ್ಳಿ,ಡಾllಶಿವನಗೌಡ ಪಾಟೀಲ,ವಿನೋದ ಅಗರವಾಲ,ಮುತ್ತಪ್ಪ ಕುರಿ,ಮಂಜು ಮಸಗುಪ್ಪಿ,ವೀರಣ್ಣ ಕಲ್ಯಾಣಿ,ಆನಂದ ಕಂಕನೋಡಿ,ಮರೆಪ್ಪ ಮುಧೋಳ,ಶಿವಾನಂದ ತುವಳಿ,ಹಣಮಂತ ಚಿಕ್ಕನಗೌಡರ,ಇಲಾಹಿ ಅತ್ತಾರ,ಹಸನ ಮುಧೋಳ,ನಮ್ಮ ಕರವೇ ಅಧ್ಯಕ್ಷ ಮೌನೇಶ ಪತ್ತಾರ, ಕರವೇ ಸಂಘಟನೆಯ ಪದಾಧಿಕಾರಿಗಳು ಹಾಗೂ ಇನ್ನು ಅನೇಕ ಗಣ್ಯರು ಉಪಸ್ಥಿತರಿದ್ದರು.