ದಾವಣಗೆರೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀ ಇ.ಎಂ.ಮಂಜುನಾಥ್ ಮತ್ತು ವರದಿಗಾರರಕೂಟದ ಅಧ್ಯಕ್ಷ ಶ್ರೀ ಕೆ.ಏಕಾಂತಪ್ಪನವರ ಮುಖಂಡತ್ವದಲ್ಲಿ ಪತ್ರಕರ್ತರು ದಾವಣಗೆರೆ ಲೋಕಸಭೆ ಸದಸ್ಯರಾದ ಶ್ರೀ ಜಿ.ಎಂ.ಸಿದ್ದೇಶ್ವರ ರವರನ್ನು ಜಿ.ಎಂ.ಐ.ಟಿ.ಅತಿಥಿಗೃಹದಲ್ಲಿ ಭೇಟಿಮಾಡಲಾಯಿತು.
ದಾವಣಗೆರೆಯಲ್ಲಿ ಜನೆವರಿ 2024ರಲ್ಲಿ ನಡೆಯಲಿರುವ 38,ನೇ ಪತ್ರಕರ್ತರ ರಾಜ್ಯಸಮ್ಮೇಳನದ ಪೋಷಕರಾಗಿ ತಾವು ಇರಬೇಕು ಮತ್ತು ಸಮ್ಮೇಳನದ ಯಶಸ್ವಿಗೆ ತಾವು ಸಹಾಯ,ಸಹಕಾರ ನೀಡಬೇಕೆಂದು ಸಂಸದರಲ್ಲಿ ಮನವಿಮಾಡಿಕೊಳ್ಳಲಾಯಿತು.ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಂಸದರು ಸಮ್ಮೇಳನದ ಪೋಷಕರಾಗಿ ತಮ್ಮೊಂದಿಗೆ ಇದ್ದು ಸಮ್ಮೇಳನದ ಯಶಸ್ವಿಗೆ ಸಹಕಾರನೀಡುವುದಾಗಿ ಭರವಸೆ ನೀಡಿದರು.