ಮೂಡಲಗಿ:ಡಿ,05-ಪಟ್ಟಣದ ಹರ್ಷ ಕಾಂಪ್ಲೆಕ್ಸ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ಘಟಕ ಹಾಗೂ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಉಪನ್ಯಾಸ ಕಾರ್ಯಕ್ರಮ ಜರುಗಿತು.
“ಶರಣರ ಬದುಕಿನ ಸತ್ಯಗಳು” ವಿಷಯದ ಕುರಿತು.ಬಸವಣ್ಣವರು 12 ಶತಮಾನದಲ್ಲಿ ಬದುಕಿರುವ ಎಲ್ಲ ಶರಣರು, ವಚನಕಾರು ವಿಭಿನ್ನ ಹಾಗೂ ಶ್ರೇಷ್ಟವಾಗಿ ಗುರುತಿಸಿಕೊಳ್ಳುತ್ತಾರೆ.ಅನುಭವ ಮಂಟಪದ ಮೂಲಕ ಜೀವನದ ಅನುಭವ ತಿಳಿಸಿಕೊಟ್ಟ ಮಹಾನ ವ್ಯಕ್ತಿ ಬಸವಣ್ಣ.ಹಡಪದ ಅಪ್ಪಣ್ಣನನ್ನು ತನ್ನ ಆಪ್ತ ಕಾರ್ಯದರ್ಶಿ ಮಾಡುವ ಮೂಲಕ ಜಾತೀಯತೆಯನ್ನು ತೊಡೆದುಹಾಕಿದರು.ಶರಣರ ಬದುಕಿನ ದಾರಿಯಲ್ಲಿ ಸತ್ಯದ ನಡೆ ಇದೆ ಎಂದರು. ಶರಣರ ಬದುಕು,ಶರಣು ಶರಣಾರ್ಥಿಗಳನು ಬಾರವೆಂದು ಬದುಕಿದವರು ಅಂದಿನ ಶರಣರು ಎಂಬುದರೊಂದಿಗೆ ಅಂದಿನ ಕಾಲದ ವಚನಕಾರರನ್ನು ನೆನಪಿಸಿ ಅನುಭವ ಮಂಟಪವನ್ನು ಕಣ್ಮುಂದೆ ತಂದಿಟ್ಟರು ಎಂದು ಉಪನ್ಯಾಸಕರಾಗಿ ಸಂಶೋಧಕ,ಸಾಹಿತ್ಯಿ ಡಾllಮಹಾದೇವ ಪೋತರಾಜ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಸಾಪ ಅಧ್ಯಕ್ಷ ಡಾllಸಂಜಯ ಶಿಂಧಿಹಟ್ಟಿ,ಬಸವೇಶ್ವರ ಸೊಸಾಯಿಟಿಯ ಅಧ್ಯಕ್ಷ ಬಸವರಾಜ ತೇಲಿ,ಹಿರಿಯ ಮಕ್ಕಳ ಸಾಹಿತ್ಯ ಪ್ರೊ,ಸಂಗಮೇಶ ಗುಜಗೋಂಡ,ಹಿರಿಯ ಸಾಹಿತ್ಯ ಡಾllಮಹಾದೇವ ಜಿಡ್ಡಿಮನಿ,ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ,ಚುಸಾಪ ಅಧ್ಯಕ್ಷ ಚಿದಾನಂದ ಹೂಗಾರ,ಹಿರಿಯರು ಬಿ.ವಾಯ್.ಶಿವಾಪೂರ, ಎ
ಎಚ್.ಒಂಟಗೂಡಿ, ಸಾಹಿತ್ಯ ಪ್ರೇಮಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರರವರಿಗೆ ಸತ್ಕರಿಸಲಾಯಿತು.
ಲತಾ ತಳವಾರ ಪ್ರಾರ್ಥಿಸಿದರು,ಯಲ್ಲಪ್ಪ ಮಳಲಿ ನಿರೂಪಿಸಿದರು- ವಂದಿಸಿದರು.