Wednesday, May 6, 2026
Homeದೇಶಸಾವರ್ಕರ್ ಮತ್ತು ಗಾಂಧಿ ಇಬ್ಬರೂ ಬೇರೆ ಬೇರೆ.ಇಬ್ಬರನ್ನೂ ಹೋಲಿಕೆ ಮಾಡುವುದು ಸರಿಯಲ್ಲವೇ ಅಲ್ಲ.

ಸಾವರ್ಕರ್ ಮತ್ತು ಗಾಂಧಿ ಇಬ್ಬರೂ ಬೇರೆ ಬೇರೆ.ಇಬ್ಬರನ್ನೂ ಹೋಲಿಕೆ ಮಾಡುವುದು ಸರಿಯಲ್ಲವೇ ಅಲ್ಲ.

ಸಾವರ್ಕರ್ ಭಾರತ ದೇಶದ ಸ್ವಾತಂತ್ರ ಹೋರಾಟದಲ್ಲಿ ಹಿಂಸೆಯ ಸಿದ್ದಾಂತದಲ್ಲಿ ಬ್ರಿಟಿಷರ ವಿರುದ್ದ ಹಿಂಸಾತ್ಮಕ ಸಶಸ್ತ್ರ ಹೋರಾಟದ ಮಾದರಿಯಲ್ಲಿ ನಂಬಿಕೆ ಇಟ್ಟು ಪ್ರಾರಂಭಿಸಿ ಅಂತಿಮವಾಗಿ ಅಂಡಮಾನ್ ನಿಕೋಬಾರ್ ಜೈಲಿನಲ್ಲಿ ಜೀವಭಯಕ್ಕೆ ಬ್ರಿಟಿಷರಿಗೆ ಆರು ಬಾರಿ ಬ್ರಿಟಿಷರ ಮನಃಕರಗುವಂತೆ ಕ್ಷಮಾಪಣೆ ಕೋರಿ ಪ್ರಾಣ ಬಿಕ್ಷೆ ಬೇಡಿ ಜೈಲಿನಿಂದ ಬಿಡುಗಡೆಗೊಂಡು ಬ್ರಿಟಿಷರು ವಾಸಕ್ಕೆ ಕೊಟ್ಟ ಮನೆ ಮತ್ತು ಜೀವನಕ್ಕೆ ಕೊಟ್ಟ ಪಿಂಚಣಿ ಪಡೆದು 1947ರವರೆಗೂ ಬ್ರಿಟಿಷರ ಪರವಾಗಿ ಕೆಲಸ ಮಾಡಿದ ವ್ಯಕ್ತಿ.

ಮಹಾತ್ಮಗಾಂಧಿ ಸತ್ಯ ಮತ್ತು ಅಹಿಂಸೆಯ ಸಿದ್ದಾಂತದಲ್ಲಿ ನಂಬಿಕೆ ಇಟ್ಟು ಭಾರತ ದೇಶದ ಸ್ವಾತಂತ್ರ ಹೋರಾಟದಲ್ಲಿ ಆರಂಭದಿಂದ 1947 ಆಗಸ್ಟ 15ನೇ ತಾರೀಖಿನವರೆಗೂ ಬ್ರಿಟಿಷರೊಡನೆ ಕ್ಷಮಾಪಣೆ ಜೀವಬಿಕ್ಷೆ ಬೇಡದೆ ರಾಜಿರಹಿತವಾಗಿ ಹೋರಾಟ ಮಾಡಿದ ಹೋರಾಟಗಾರ ಭಾರತ ಸ್ವಾತಂತ್ರ ಹೋರಾಟದ ನೇತಾರ.

ಸಾವರ್ಕರ್ ಬ್ರಿಟಿಷರ ಕ್ಷಮೆಯಲ್ಲಿ ಜೀವನ ಆರಂಭಿಸಿದ ಮೇಲೆ ಹಿಂದೂ ಧರ್ಮದ ಪ್ರಖರ ಪ್ರತಿಪಾದಕನಾಗಿ ಹಿಂದೂ ಮಹಾ ಸಭೆಯ ರಾಷ್ಟ್ರೀಯ ಅದ್ಯಕ್ಷನಾಗಿ ಹಿಂದೂ ಧರ್ಮೀಯರನ್ನು ಸಂಘಟಿಸುತ್ತಾ ಬ್ರಿಟಿಷರ ಭಾರತ ವಿಭಜನೆಯ ಉದ್ದೇಶಕ್ಕೆ ನೀರೆರೆಯುವಂತೆ ಹಿಂದುತ್ವದ ನಾಯಕನಾಗಿ ಸ್ವಾತಂತ್ರ ಹೋರಾಟವನ್ನು ಕೈಬಿಟ್ಟ ವ್ಯಕ್ತಿ.

ಅಂತಿಮವಾಗಿ ಗಾಂಧಿಹತ್ಯೆಯ ಮಾಸ್ಟರ್ ಮೈಂಡ್ ಗಾಂಧಿಹತ್ಯೆಯ ಯಶಸ್ವಿ ಕಾರ್ಯಾಚರಣೆವರೆಗೂ ನಾಥೂರಾಮ್ ಘೋಡ್ಸೆಗೆ ನಿರ್ದೇಶನ ನೀಡುತ್ತಿದ್ದ ಸಾವರ್ಕರ್ ಗಾಂಧಿಹತ್ಯೆ ಕೇಸ್ನಲ್ಲಿ ಸೂಕ್ತ ಸಾಕ್ಷಿ ಸಿಗದೆ ಬಿಡುಗಡೆಗೊಂಡ ವ್ಯಕ್ತಿ.

ವಿಧಾನಸಭಾ ಗ್ಯಾಲರಿಯಿಂದ ಮಹಾತ್ಮ ಗಾಂಧಿ ಫೋಟೋ ತೆಗೆಯಬೇಕು ಎನ್ನುವವರೂ ಕೊಲೆಗಡುಕ ಘೋಡ್ಸೆವಾದಿಗಳು..(ಪ್ರಕಾಶ್ ಕೋನಾಪುರ)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments