ನವದೇಹಲಿ:ಚಂಡಿಗಡದಲ್ಲಿ 14 ಮತ್ತು 15ರಂದು ನಡೆಯಲಿರುವ ಕಾನ್ ಪಡರೇಶನ್ ಸಭೆಯಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದಿಂದ ಹತ್ತು ಜನ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ .ಅದರಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಬಿವಿ.ಮಲ್ಲಿಕಾರ್ಜುನಯ್ಯ ರವರು ಸೇರಿದಂತೆ ಕರ್ನಾಟಕದಿಂದ 3 ರಿಂದ 4 ಜನ ಭಾಗವಹಿಸಲು ಅವಕಾಶವನ್ನು ನೀಡಿದ್ದಾರೆ. ಬೇರೆ ರಾಜ್ಯದವರಿಗೆ ಹೆಚ್ಚು ಅವಕಾಶವನ್ನು ಕಲ್ಪಿಸಿಲ್ಲ.ಈ ಮಹಾ ಒಕ್ಕೂಟದ ಸಭೆಯಲ್ಲಿ ಪಿ ಟಿ ಐ ,ಯು ಏನ್ ಐ ಹಾಗೂ ಇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಆದರೆ ಕರ್ನಾಟಕದಿಂದ
ಭಾಗವಹಿಸಲು ಇಚ್ಛಿಸುವ ರಾಷ್ಟ್ರೀಯ ಮಂಡಳಿ ಸದಸ್ಯರು ನಾಳೆ ಸಂಜೆ ಒಳಗೆ ರಾಷ್ಟ್ರೀಯ ಅಧ್ಯಕ್ಷರಿಗೆ ತಿಳಿಸಿದರೆ ಅಲ್ಲಿಯ ವ್ಯವಸ್ಥಾಪಕರಿಗೆ ಮಾಹಿತಿ ಕೊಡಲು ಅನುಕೂಲವಾಗುತ್ತದೆ.ಆದ್ದರಿಂದ
ಕೂಡಲೇ ಹೋಗಿ ಬರುವ ವಿಮಾನದ ಟಿಕೆಟ್ ಗಳನ್ನು ನೀವೇ ಬುಕ್ ಮಾಡಿಸಿಕೊಳ್ಳಬೇಕು. ಅಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಲು ದೂರವಾಣಿ ಮೂಲಕ ಅವರಿಗೆ ಮಾಹಿತಿ ಕೊಡಲು ಅನುಕೂಲವಾಗುತ್ತದೆ .
ಭಾಗವಹಿಸಲು ಇಚ್ಚಿಸುವವರು ಕೂಡಲೇ ರಾಷ್ಟ್ರೀಯ ಅಧ್ಯಕ್ಷರನ್ನು ಸಂಪರ್ಕಿಸಲು ಈಮೂಲಕ ತಿಳಿಸಲಾಗಿದೆ .ಎಲ್ಲರಿಗೂ ಪ್ರತ್ಯೇಕವಾಗಿ ಸಂದೇಶವನ್ನು ಕಳುಹಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಮಾಹಿತಿಯನ್ನು ಪರಸ್ಪರರು ಹಂಚಿಕೊಂಡು ತಲುಪಿಸಲು ತಿಳಿಸಿರಿ ಎಂದು ರಾಷ್ಟ್ರೀಯ ಅಧ್ಯಕ್ಷರು ಮಾಹಿತಿ ಹಂಚಿದ್ದಾರ ಎಂದು ರಾಷ್ಟ್ರೀಯ ಮಂಡಳಿಯ ಸದಸ್ಯರಾದ ಎಸ್.ಕೆ.ಒಡೆಯರ್ ಈ ಮೂಲಕ ತಿಳಿಸಿದ್ದಾರೆ.

