ದಿನಾಂಕ:09.03.2024 ಮತ್ತು10.03.2024 ಕೆ.ಆರ್.ಎಸ್. ಜಲಾಶಯದಿಂದ 4000 ಕ್ಯೂಸೆಕ್ಸ್ ಗೂ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದಾಗಿ ಬಿತ್ತರಗೊಂಡಿರುವ/ಪ್ರಕಟಗೊಂಡಿರುವ ಸುದ್ದಿಗಳ ಸ್ಪಷ್ಟಿಕರಣ ಕುರಿತು
ಬೆಂಗಳೂರು ನಗರಕ್ಕೆ ಕುಡಿಯಲು ನೀರನ್ನು ಸರಬರಾಜು ಮಾಡುವ ಉದ್ದೇಶಕ್ಕಾಗಿ ಮಳವಳ್ಳಿ ತಾಲ್ಲೂಕಿನ ಶಿವಾ ಆಣೆಕಟ್ಟನ್ನು ಉಪಯೋಗಿಸಲಾಗುತ್ತಿದೆ. ಕಾವೇರಿ ನದಿಯಿಂದ ಬೆಂಗಳೂರು. ಮೈಸೂರು ಮತ್ತು ಇತರೆ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೈಗಾರಿಕೆಗೆ ನೀರು ಸರಬರಾಜು ಮಾಡಲು ಪ್ರತೀ ದಿನ ಒಟ್ಟಾರೆ 1000 ಕ್ಯೂಸೆಕ್ಸ್ ನಷ್ಟು ನೀರಿನ ಅವಶ್ಯಕತೆಯಿರುತ್ತದೆ.
ಬೆಂಗಳೂರು ಜಲ ಮಂಡಳಿ (ಬಿ.ಡಬ್ಲ್ಯೂ.ಎಸ್.ಎಸ್.ಬಿ.) ರವರು ನೀಡಿರುವ ಮಾಹಿತಿಯಂತೆ ಮಳವಳ್ಳಿ ತಾಲ್ಲೂಕಿನ ಶಿವಾ ಅಣೆಕಟ್ಟೆಯ ಬಳಿಯಿಂದ ನೀರನ್ನು ತೊರೆಕಾಡನಹಳ್ಳಿವರೆಗೆ ಹರಿಸಿ, ಸುಮಾರು 1470 ಎಂ.ಎಲ್.ಡಿ. (600 ಕ್ಯೂಸೆಕ್ಸ್ ನಷ್ಟು) ನೀರನ್ನು ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿರುತ್ತದೆ.
ದಿನಾಂಕ: 06.03.2024 ರಿಂದ 08.03.20240 ಶಿವಾ ಆಣೆಕಟ್ಟುಯಲ್ಲಿನ ನೀರಿನಮಟ್ಟವು ದಿನದಿಂದ ದಿನಕ್ಕೆ ಗಣನೀಯವಾಗಿ ಕಡಿಮೆಯಾಗಿ ಆಣೆಕಟ್ಟೆಯ ಮೇಲ್ಬಾಗದಿಂದ 36 ಇಂಚಿನಷ್ಟು ಕೆಳಮಟ್ಟ ತಲುಪಿರುತ್ತದೆ. ಇದರಿಂದ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪ್ರಮಾಣವನ್ನು ಸರಬರಾಜು ಮಾಡಲು ವೃತ್ಯಯವಾಗಿರುತ್ತದೆ.
ದಿನಾಂಕ:09.03.2024 ರಂದು ಬೆಂಗಳೂರು ಜಲ ಮಂಡಳಿಯ ಅಧಿಕಾರಿಗಳು ಕೆ.ಆರ್, ಎಸ್. ಜಲಾಶಯಕ್ಕೆ ಭೇಟಿ ನೀಡಿ ನೀರಿನ ಹರಿವಿನ ಪ್ರಮಾಣವನ್ನು ಹೆಚ್ಚು ಮಾಡಲು ಕೋರಿರುತ್ತಾರೆ. :ಅದರಂತೆ ದಿನಾಂಕ 09.03.2024 ರಂದು ಬೆಗಳಿಗ್ಗ 7.00 ಗಂಟೆಯಿಂದ ಕೆ.ಆರ್.ಎಸ್. ಜಲಾಶಯದಿಂದ ನೀರನ್ನು ಹಂತ ಹಂತವಾಗಿ ಹೆಚ್ಚು ಮಾಡಿ, ಸುಮಾರು 4780 ಕ್ಯೂಸೆಕ್ಸ್ ಗಳಷ್ಟು ನೀರನ್ನು ಹರಿಬಿಡಲಾಗುತ್ತಿದೆ.
ನಂತರ, ಕೆ.ಆರ್.ಎಸ್. ಜಲಾಶಯದಿಂದ ಕಾವೇರಿ ಪಾತ್ರದುದ್ದಕ್ಕೂ ಬೆಂಗಳೂರು ಜಲ ಮಂಡಳಿ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಲಾಗಿರುತ್ತದೆ.
ಸಿ.ಡಿ.ಎಸ್. ಅಣೆಕಟ್ಟು, ರಾಮಸ್ವಾಮಿ ಅಣೆಕಟ್ಟು, ಮಾಧವಮಂತ್ರಿ ಆಣೆಕಟ್ಟು, ಮೇದಿನಿ ಅಣೆಕಟ್ಟು, ಸತ್ತೇಗಾಲ ಬಳಿಯಿರುವ ಅಣೆಕಟ್ಟು ಹಾಗೂ ಶಿವಾ ಅಣೆಕಟ್ಟುಗಳನ್ನು ಪರಿವೀಕ್ಷಣೆ ಮಾಡಲಾಗಿರುತ್ತದೆ. ಅದರಂತೆ, ಸತ್ತೇಗಾಲ ಅಣೆಕಟ್ಟು ಹಾಗೂ ಶಿವಾ ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ತಳಮಟ್ಟ ತಲುಪಿದ್ದು, ನೀರಿನ ತೀವ್ರ ಕೊರತೆ ಉಂಟಾಗಿರುತ್ತದೆ.
ದಿನಾಂಕ: 09.03.2024 ರಂದು ಕೆ.ಆರ್.ಎಸ್. ನಿಂದ 4780 ಹಾಗೂ ಕಬಿನಿ ಜಲಾಶಯದಿಂದ 2000 ಕ್ಯೂಸೆಕ್ಸ್ ನೀರನ್ನು ಹರಿಸಿದ್ದರ ಪರಿಣಾಮ ದಿನಾಂಕ: 10.03.2024 ರಂದು ಬೆಳಿಗ್ಗೆ ಶಿವಾ ಆಣೆಕಟ್ಟೆಯಲ್ಲಿ ನೀರಿನ ಮಟ್ಟವು ಅಣೆಕಟ್ಟೆಯ ಮೇಲ್ಬಾಗದಿಂದ 38 ಇಂಚು ಕೆಳ ಮಟ್ಟದಿಂದ 24 ಇಂಚಿಗೆ ತಲುಪುವುದು(16ಇಂಚು ಏರಿಕೆ) ನಿಧಾನವಾಗಿ ಏರಿಕೆ ಯಾಗಿರುತ್ತದೆ.
ದಿನಾಂಕ: 10.03.20248 ಬೆಳಿಗ್ಗೆ 10.00 ಪ್ರಮಾಣವನ್ನು 4780 ಕ್ಯೂಸೆಕ್ಸ್ ನಿಂದ 2769 ಕ್ಯೂಸೆಕ್ಸ್ಗೆ ಇಳಿಕೆ ಮಾಡಲಾಗಿರುತ್ತದೆ.
ಸಿವಾ ಆಣೆಕಟ್ಟೆಯ ನೀರಿನ ಮಟ್ಟವು ಮಧ್ಯಾಹ್ನ 12.00 ಗಂಟೆಗೆ 2 ಇಂಚು ಏರಿಕೆಯಾದ್ದರಿಂದ ಕೆ.ಆರ್.ಎಸ್.ನ ನೀರಿನ ಹರಿವಿನ ಪ್ರಮಾಣವನ್ನು 2769 ಕ್ಯೂಸೆಕ್ಸ್ ನಿಂದ 1008 ಕ್ಯೂಸೆಕ್ಸ್ ಗೆ ಇಳಿಕೆ ಮಾಡಲಾಗಿರುತ್ತದೆ.
ದಿನಾಂಕ: 10.03.2024ರಂದು ಸಂಜೆ 6.00 ಗಂಟೆಗೆ ಶಿವಾ ಅಣೆಕಟ್ಟೆಯ ನೀರಿನ ಮಟ್ಟವು ಅಣೆಕಟ್ಟೆಯ ಮೇಲ್ಭಾಗದಿಂದ 18 ಇಂಚು ಕೆಳಗಡೆ ಇದ್ದು ದಿನಾಂಕ: 09.03.20245 7.00 ಗಂಟೆಗೆ 36 ಇಂಚು ಕೆಳಮಟಕ್ಕೆ ಹೋಲಿಸಿದಾಗ ಒಟ್ಟಾರೆ 18 ಇಂಚು ನೀರಿನ ಮಟ್ಟದಲ್ಲಿ ಏರಿಕೆಯಾಗಿರುತ್ತದೆ.
ಪ್ರಸ್ತುತ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪ್ರಮಾಣವನ್ನು ಸುಸ್ಥಿರಗೊಳಿಸಿರಲಾಗುತ್ತಿದೆ. ಆದ್ದರಿಂದ, ದಿನಾಂಕ:09.03.2024 ಮತ್ತು 10.03.2024 ರಂದು ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಂಡಿರುವ/ಪ್ರಕಟಗೊಂಡಿರುವ ಕೆ.ಆರ್.ಎಸ್. ಜಲಾಶಯದಿಂದ 4000 ಕ್ಯೂಸೆಕ್ಸ್ ಗೂ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಿರುವುದಿಲ್ಲವೆಂದು, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆಗಾಗಿ ನೀರನ್ನು ಹರಿಸಿರಲಾಗಿರುತ್ತದೆ ಎಂದು ಈ ಮೂಲಕ ಸ್ಪಷ್ಟಿಕರಣ ನೀಡುತ್ತಾ, ಸುದ್ದಿ ಮಾಧ್ಯಮಗಳಲ್ಲಿ ಈ ಸುದ್ದಿಯನ್ನು ಪ್ರಕಟಿಸಲು ಕೋರಲಾಗಿದೆ. ಎಂದು ಕೃಷ್ಣರಾಜಸಾಗರ ಆಧುನೀರಕಣ ಮತ್ತು ಮಧ್ಯಮ ನೀರಾವರಿ ಯೋಜನಾ ವೃತ್ತ, ಮಂಡ್ಯದ ಅಧೀಕ್ಷಕ ಅಭಿಯಂತರರು ಮತ್ತು ನೀರಾವರಿ (ದ) ವಲಯ, ಮೈಸೂರು ಮುಖ್ಯ ಇಂಜಿನೀಯರ್ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.