ದಾವಣಗೆರೆ, ನ.೧- ದಾವಣಗೆರೆ ಸ್ಮಾರ್ಟ್ ಸಿಟಿ ಕಛೇರಿಯಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣಗೊಳಿಸುವುದರ ಮೂಲಕ ೭0ನೇ ಕನ್ನಡ ರಾಜ್ಯೋತ್ಸವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ಮಾಡಿದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎನ್. ಮಹಾಂತೇಶ್ ಅವರು, ಕರ್ನಾಟಕ ಧ್ವಜದ ಪರಿಚಯ ಹಾಗೂ ಕರ್ನಾಟಕ ರಚನೆಗೊಂಡ ಇತಿಹಾಸ, ಕನ್ನಡಕ್ಕಾಗಿ ಹೋರಾಡಿದ ಮಹಾನ್ ಚೇತನರ ಕುರಿತು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ರಸಾದ್ ಹೆಚ್.ಎನ್., ಟೀಮ್ ಲೀಡರ್ ಉಮಾಪತಿ ಹೊಂಬಣ್ಣ, ಡಿಜಿಎಂ-ಐಟಿ ಮಮತಾ, ಪ್ರಧಾನ ವ್ಯವಸ್ಥಾಪಕ ಎಸ್.ಎ. ಶಿವರಾಜು ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

