Saturday, December 21, 2024
Homeರಾಜಕೀಯಜನಾಭಿಪ್ರಾಯಕ್ಕೆ ಓಗೊಟ್ಟು18ರಂದು ಸ್ವಾಭಿಮಾನಿಗಳ ಭ್ರಹತ್ ಮೆರವಣಿಗೆಯ ಮೂಲಕ ಉಮೇದುವಾರಿಕೆ ಸಲ್ಲಿಕೆಗೆ ವಿನಯ್ ಕುಮಾರ್ ನಿರ್ಧಾರ.

ಜನಾಭಿಪ್ರಾಯಕ್ಕೆ ಓಗೊಟ್ಟು18ರಂದು ಸ್ವಾಭಿಮಾನಿಗಳ ಭ್ರಹತ್ ಮೆರವಣಿಗೆಯ ಮೂಲಕ ಉಮೇದುವಾರಿಕೆ ಸಲ್ಲಿಕೆಗೆ ವಿನಯ್ ಕುಮಾರ್ ನಿರ್ಧಾರ.

ದಾವಣಗೆರೆ:ಲೋಕ ಸಮರಕ್ಕೆ ಸಜ್ಜಾದ ದಾವಣಗೆರೆ ಕ್ಷೇತ್ರದಲ್ಲಿ ಕಳೆದ ಹತ್ತು ತಿಂಗಳುಗಳಿಂದ ಹಳ್ಳಿ ಹಳ್ಳಿಗಳನ್ನು ಸುತ್ತಿ ಮತದಾರರ ಮನೆ ಮನಗಳ ಗೆಲ್ಲುವತ್ತ ಧಾಪುಗಾಲುಹಾಕಿ ಹಗಲು ರಾತ್ರಿ ಯನ್ನದೆ ಕ್ಷೇತ್ರದಲ್ಲಿ ಆರುನೂರು ಕಿಲೋಮೀಟರಗಳಿಗಿಂತಲೂ ಹೆಚ್ಚಿಗೆ ಪಾದಯಾತ್ರೆ ಮುಖಾಂತರ ಮತ್ತು ಗ್ರಾಮವಾಸ್ತವ್ಯಗಳನ್ನು ಮಾಡುವುದರ ಮುಖೇನ ಜನರ ನೈಜಸಮಸ್ಯೆಗಳನ್ನು ಅರಿಯಲು ಮತ್ತು ಕ್ರೂಢೀಕರಿಸಲು ಪ್ರತ್ಯಕ್ಷ ಮತದಾರರ ಮನೆಬಾಗಿಲಿಗೆ ಬಂದ ನವನಾಯಕನೆಂದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಜಿ.ಬಿ.ವಿನಯ್ ಕುಮಾರ್ ರವರಿಗೆ ಜಾತಿ,ಮತ,ಪಕ್ಷಪಂಗಡಗಳ ಗೋಜಿಗೆಹೋಗದೆ ನವುತ್ಸಾಹಿ ಯುವನಾಯಕ ವಿನಯ್ ಕುಮಾರ್ ರವರನ್ನು ಜನ ಅಪ್ಪಿಕೊಂಡರು.ಅದರಂತೆ ಅವರ ಸಾಮಾಜಿಕ ಕಳಕಳಿ,ವಿದ್ಯಾರ್ಥಿಯುವಜನರ ಭವಿಷ್ಯದ ಗುರಿ,ರೈತಸಮುದಾಯದ ಜ್ವಲಂತ ಸಮಸ್ಯೆಗಳು ಹಾಗೂ ಗ್ರಾಮೀಣಭಾಗದ ಸಾಮಾನ್ಯಜನರ ದೈನಂದಿನ ಸಮಸ್ಯಗಳು ಹಾಗೂ ಜನಸಮೂದಾಯಕ್ಕೆ ಅಗತ್ಯವಾಗಿರಬೇಕಾದ ಮೂಲಸೌಕರ್ಯಗಳ ಅನಾನುಕೂಲತೆಗಳನ್ನು ನೇರವಾಗಿ ಜನಸಾಮಾನ್ಯರೊಂದಿಗೆ ಚರ್ಸಿ ಮಾರ್ಗೋಪಾಯಗಳಕುರಿತು ಚಿಂತನೆ ನಡೆಸಿದ ಜಿಲ್ಲೆಯ ಏಕೈಕ ನಾಯಕ ನೆಂದು ಜನಮಾನಸದಲ್ಲಿ ನಿಂತು ಮನೆಮಾತಾಗಿದ್ದ ವಿನಯ್ ಕುಮಾರ್ ಒಬ್ಬ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದೇ ಜನಜನಿತರಾಗಿದ್ದರು.ಹಾಗಾಗಿ ನಾಲ್ಕುಬಾರಿ ಸಂಸದರಾಗಿದ್ದವರಕುರಿತು ಸಹಜವಾಗಿಯೇ ಜನರಲ್ಲಿ ಅಮಾಧಾನದ ಹೊಗೆಯಾಡಲಾರಂಭಿಸಿತ್ತು ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಗೆ ನವ ಉತ್ಸಾಹಿಯುವಕ ವಿನಯ್ ಕುಮಾರ್ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಶಾಕಿರಣ ಮೂಡಿಸಿದ್ದರು.ಕಾಂಗ್ರೆಸ್ ಪಕ್ಷಕ್ಕೆ ಇಂಥ ಯುವನಾಯಕರ ಕೊರತೆ ಎದ್ದುಕಾಣುತ್ತಿರುವಾಗ ವಿನಯಕುಮಾರ್ ಕಾಂಗ್ರೆಸ್ ನ ಭವಿಷ್ಯದನಾಯಕನೆಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿಬಂದವು.

ಜಿಲ್ಲೆಯ ಅಹಿಂದವರ್ಗದ ಬಲಿಷ್ಟನಾಯಕನಾಗುವ ಗುಣಲಕ್ಷಣಗಳನ್ನು ಅಹಿಂದವರ್ಗ ಕಂಡುಕಂಡಿತು ಈ ಕುರಿತು ಬಹಿರಂಗವಾಗಿಯೇ ಕೇಳತೊಡಗಿತು.ಕ್ಷೇತ್ರದ ರೈತರು,ಯುವಕರು,ವಿದ್ಯಾರ್ಥಿಗಳು ಅನೇಕರ ಜನಮನಗೆಲ್ಲುವಲ್ಲಿ ವಿನಯ್ ಕುಮಾರ್ ಯಶಸ್ವಿಯಾದರು.ಅವರ ಶ್ರಮ,ಜನಪರಚಿಂತನೆಗಳು,ಪ್ರಗತಿಪರವಿಚಾರಧಾರೆಗಳನ್ನು ಕಂಡು ಕಾಂಗ್ರೆಸ್ ಪಕ್ಷದ ಅತೃಪ್ತಾತ್ಮಗಳು ಒಳಗೊಳಗೇ ಶಕುನಿಯ ತಂತ್ರ ಸುರುವಿಟ್ಟುಕೊಂಡರು.ಕೆಲವೇಕೆಲವು ಕುಟುಂಬಗಳ ಒಡೆತನದ ಉದ್ಯಮದಂತೆ ಮಾಡಿಕೊಂಡು ನಾನು ನೀನು ಭಾಯಿ ಭಾಯಿ ಎನ್ನುತ್ತ ಒಳಸಂಚಿನಿಂದ ಜನಸಮುದಾಯಕ್ಕೆ ಮಂಕುಬೂದಿ ವರಿಸುತ್ತಾ ತಮ್ಮದೇ ರಿಪಬ್ಲಿಕ್ ಸಾಮ್ರಾಜ್ಯಸ್ಥಾಪಿಸಿಕೊಂಡಂತಾ ಕುಟುಂಬಗಳಿಗೆ ವಿನಯ್ ಕುಮಾರ್ ರವರ ಜನಪರ ಚಿಂತನೆಗಳಿಂದ ತಮ್ಮ ಸಾಮ್ರಾಜ್ಯಕ್ಕೆ ಸಮಸ್ಯೆ ಯಾಗಬಹುದೆಂಬ ಆತಂಕದಿಂದ ಕಾಂಗ್ರೆಸ್ ನಲ್ಲೇ ಕೆಲವು ಕಾಣದಕೈಗಳು ವಿನಯ್ ಕುಮಾರ್ಗೆ ಕಾಂಗ್ರೆಸ್ ಟಿಕೇಟ್ ತಪ್ಪಿಸುವಲ್ಲಿ ಯಶಸ್ಸು ಕಾಂಡಿತು.ಆದರೂ ವಿನಯ್ ಕುಮಾರ್ ಛಲಬಿಡದೆ ಮತ್ತೆ ಜನರಬಳಿ ತೆರಳಿ ಅಭಿಪ್ರಾಯ ಸಂಗ್ರಹಿಸಲು ಜನರಬಳಿ ತೆರಳಿದಾಗ ಮೊದಲೇ ರಾಜಕೀಯದಲ್ಲಿ ಹೊಸತನವನ್ನು ಎದುರುನೋಡುತಿದ್ದ ಜನಸಾಮಾನ್ಯರಿಗೆ ವಿನಯ್ ಕುಮಾರ್ ಸೂಕ್ತೆಂಬ ತೀರ್ಮಾನಕ್ಕೆ ಬಂದಾಗಿ ಬಿಟ್ಟಿತ್ತು ಅದರಂತೆ ಜನರ ಒಕ್ಕೂರಲ ಅಭಿಪ್ರಾಯ ಬಂಡಾಯ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡ್ರಿ ನಿಮಗೆ ನಮ್ಮ ಬೆಂಬಲವಿದೆ ಎಂಬ ಮಾತುಗಳು ಹಲವು ಕಾಂಗ್ರೆಸ್ ಕಾರ್ಯಕರ್ತರ ಬಾಯಿಯಿಂದಲೇ ಬಹಿರಂಗವಾಗಿ ಬರಲಾರಂಭಿಸಿತು.

ಆಗ ವಿನಯ್ ಕುಮಾರ್ ಮತ್ತಷ್ಟು ಜನರ ಮನದಾಶೆಯಂತೆ ಕ್ಷೇತ್ರದಲ್ಲಿ ಬಿರುಸಿನಿಂದ ಕಾರ್ಯಚಟುವಟಿಕೆ ನಡೆಸಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಎಂದು ಕ್ಷೇತ್ರದ ಮತದಾರರೇ ಬಹಿಂಗವಾಗಿ ಹೇಳತೊಡಗಿದರು.
ಇದರದ ಗಂಗಾಲಾದ ಕೆಲ ಕಾಣದ ಕೈ ಸ್ವಾರ್ಥನಾಯಕರು ಮತ್ತಷ್ಟು ಅತೃಪ್ತಗೊಂಡು ಎಲ್ಲಿ ರಿಪಬ್ಲಿಕ್ ಕೈತಪ್ಪುತ್ತೋ ಎನ್ನುವ ಭಯದದ ಇತ್ತೀಚೆಗೆ ಸಣ್ಣದೊಂದು ತಂತ್ರಗಾರಿಕೆ ರೂಪಿಸಿ ಬಂಡಾಯ ಶಮನವಾಯಿತು ಎನ್ನುವಂತೆ ಬಿಂಬಿಸಿ ಕ್ಷೇತ್ರದ ಮತದಾರ ಅದರಲ್ಲೂ ಅತೃಪ್ತ ಕಾಂಗ್ರೆಸ್ ವಲಯದಲ್ಲಿ ಮತ್ತು ವಿನಯ್ ಕುಮಾರ್ ಬೆಂಬಲಿಗರಲ್ಲಿ ಗೊಂದಲ ಸೃಸ್ಟಿಸಿತು.ಇದು ದಿಢೀರೆಂದು ಪ್ರಚಾರ ಪಡೆದು ಒಂದು ರೀತಿಯಲ್ಲಿ ಛಲವಂತರಿಗೆ ಬರೆ ಎಳೆದಂತಾಗಿತ್ತು.ಆದರೆ ರಾಜಕೀಚಾಣಾಕ್ಷನಲ್ಲದಿದ್ದರೂ ರಾಜಕೀಯ ಮಜಲುಗಳನ್ನು ಅರಿತಿರುವ ವಿನಯ್ ಕುಮಾರ್ ತಕ್ಷಣವೇ ಒಂದು ಹೇಳಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು.ನನಗೆ ಸಿ.ಎಂ.ಕರೆಸಿದ್ದು ನಿಜ.ಅಲ್ಲಿ ಜಿಲ್ಲೆಯನಾಯಕರು ಮತ್ತು ಗುರುಗಳು ಇದ್ದರು ಲೋಕಾರೂಢಿಯಾಗಿ ಮಾತನಾಡಿದರು ಅಷ್ಟೇ ಅಲ್ಲಿ ಅದನ್ನೇ ಬಂಡಾಯ ಶಮನವಾಯಿತೆಂಬಂತೆ ಬಿಂಬಿಸಲಾಗಿದೆ.ನಾನು ಸಿದ್ದರಾಮಯ್ಯನವರ ಅಭಿಮಾನಿಯೂಹೌದು.ಅದರಂತೆ ನಮ್ಮ ಗುರುಗಳ ಪರಮಭಕ್ತನೂ ಹೌದು ಆದರೆ ಅವರೆಲ್ಲರಿಗಿಂತಲೂ ಮಿಗಿಲಾಗಿ ನನಗೆ ಇಲ್ಲಿಯ ವರೆಗೆ ಬೆನ್ನು ತಟ್ಟಿ ನನ್ನ ಜೊತೆಗೂಡಿ ಹೆಜ್ಜೆ ಹಾಕಿದ ನನ್ನ ಆರಾಧ್ಯದೈವ ಜನಸಮೂದಾಯದ ಅಭಿಪ್ರಾಯ ಪಡೆಯುವೆ.ಕ್ಷೇತ್ರದ ಜನರಾಭಿಪ್ರಾದಂತೆ ನಾನೂ ತೀರ್ಮಾನಿಸುತ್ತೇನೆಂದು ಹೇಳಿದ್ದರು.ಅದರಂತೆ ದಿನಾಂಕ:10-04-2024ರಂದು ತನ್ನ

ಜನಸಂಪರ್ಕಕಚೇರಿಯಲ್ಲಿ ಜನಾಭಿಪ್ರಾಯ ಸಂಗ್ರಹ ಸಭೆಯನ್ನು ಕರೆದಿದ್ದರು ಆ ಸಭೆಯಲ್ಲಿ ಜಿಲ್ಲೆಯ ಬಹುತೇಕ ಎಲ್ಲಾ ವಿಧಾನಸಭೆಕ್ಷೇತ್ರದ ಗ್ರಾಮಗಳ ಹಾಗೂ ನಗರ ಪ್ರದೇಶದ ಕಾಂಗ್ರೆಸ್ ಮತ್ತು ವಿನಯ್ ಅಭಿಮಾನಿಗಳು ಹೆಚ್ಚಿನ ಸಂಖ್ಎಯಲ್ಲಿ ಸೇರಿದ್ದರು.ಅಲ್ಲಿ ಸೇರಿದ್ದ ಸಭಿಕರ ಪ್ರತಿಯೊಬ್ಬರ ಅಭಿಪ್ರಾಯ ವಿನಯ್ ಪಕ್ಷೇತರರಾಗಿ ಸ್ಪರ್ಧೆ ಮಾಡಲೇಬೇಕು ದಾವಣಗೆರೆ ಜಿಲ್ಲೆಯಲ್ಲಿ ಎರಡು ಕುಟುಂಬಗಳ ಜುಗಲ್ ಬಂಧಿ ರಾಜಕೀಯ ನಾಟಕದಲ್ಲಿ ದಲಿತ,ಹಿಂದುಳಿದ,ಅಲ್ಪಸಂಖ್ಯಾತ, ಅಲ್ಲದೆ ಪಂಚಮಸಾಲಿ,ಒಕ್ಕಲಿಗ ಮುಂತಾದ ಯಾವುದೇ ಸಮುದಾಯಕ್ಕೆ ರಾಜಕೀಯ ಸ್ಥಾನಮಾನಗಳು ಮರೀಚಿಕೆಯಾಗಿವೆ.

ಅವೆರಡು ಕುಟುಂಬಗಳಲ್ಲಿ ಯಾರಿಗೇ ಅಧಿಕಾರ ಸಿಕ್ಕರೂ ಕೂಡಾ ಒಂದೇ ಸಮುದಾಯದ ಕಾರ್ಯಭಾರಿಗಳೇ ಅಲ್ಲೂ ಇಲ್ಲೂ ಅವರೆ ಇರ್ತಾರೆ.ಬೇರೆ ಯಾರಿಗೂ ಅವಕಾಶಗಳೇ ಇಲ್ಲಾ.ಒಬ್ಬಿಬ್ಬರಿಗೆ ಅವಕಾಶಕೊಟ್ಟಿದ್ದರೂ ಸಹ ಅವು ಅವರ ಮನೆಬಾಗಿಲಿಂದಾಚೆ ಬರುವುದೇಇಲ್ಲಾ ಅಂಥವರಿಂದ ನಮ್ಮ ಇತರೆ ಸಮುದಾಯಗಳಿಗೆ ಯಾವುದೇ ಉಪಯೋಗವಿಲ್ಲಾ ಎಂದು ಹೇಳುವಮೂಲಕ ಅಭಿಪ್ರಾಯ ಹೊರಹಾಕಿದರು.

ಈಗ ದಾವಣಗೆರೆಯ ಜನತೆ ಹೊಸ ರಾಜಕೀಯ ನಾಯಕನ ಅನ್ವೇಷಣೆಯಲ್ಲಿರುವಾಗ ನೀವು ಒಂದು ವರವಾಗಿ ಬಂದಿದ್ದೀರಿ ನೀವು ಮುಂದಿಟ್ಟಹೆಜ್ಜೆ ಹಿಂದೆಇಡಬೇಡಿ ನಿಮ್ಮ ಹಿಂದೆ ನಾವಿದ್ದೇವೆ.ನಾವು ಕಾಂಗ್ರೆಸ್ ಪಕ್ಷ ವಿರೋಧಿಗಳಲ್ಲಾ ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕತ್ವದ ವಿರುದ್ಧವಿದ್ದೇವೆ ನೀವು ಗೆದ್ದರೂ ರಾಜ್ಯದಲ್ಲಿ ಕಗ್ರೆಸ್ ಪಕ್ಷವನ್ನೇ ಬಬಲಿಸಬೇಕು ಎಂಬಕಿವಿಮಾತನ್ನೂ ಈ ಸಮಯದಲ್ಲಿ ಕೆಲವರು ತಮ್ಮ ಅಭಿಪ್ರಾಯ ಹಂಚಿಕಡರು.
ಜನಾಭಿಪ್ರಾಯದ ಸಭೆಯಲ್ಲಿ ಪ್ರತಿಯೊಬ್ಬರ ಮನದಾಳದಮಾತುಗಳನ್ನಾಲಿಸಿದ ವಿನಯ್ ಕುಮಾರ್ ಎಲ್ಲರಿಗೂ ತಮ್ಮ ಅಭಿದನೆಗಳನ್ನು ತಿಳಿಸುತ್ತಾ ನನಗೆ ರಾಜಕೀಯಕಿಂತಹೆಚ್ಚಾಗಿ ನನ್ನ ಈ ಅಲ್ಪಸಮಯದಲ್ಲಿ ನನ್ನ ಆಳ ಅಂತರಾಳ ತಿಳಿದುಕೊಂಡು ನಾನು ಜಿಲ್ಲೆಯ ಮನೆಮನೆಗಳಿಗಷ್ಟೇ ಅಲ್ಲದೆ ರಾಜ್ಯದಮೂಲೆಮೂಲೆಗಳಿಗೆ ದೇಹಲಿಯ ನಾಯಕರ ಗಮನಸೆಳೆಯುಮಟ್ಟಿಗೆ ನನ್ನನ್ನು ಬೆಳಿಸಿ ಪ್ರೋತ್ಸಾಹಿಸಿದ ನಿಮ್ಮ ನಿರೀಕ್ಷೆ ಹುಸಿ ಗೊಳಿಸಲ್ಲಾ ನನ್ನ ಸೋಲು ಗೆಲುವು ಈ ಕ್ಷೇತ್ರದ ಮತದಾರನದೇ ಹೊರತು ನನ್ನದೇನಿಲ್ಲಾ.ನನ್ನನ್ನು ಗೆಲ್ಲಿಸಿದರೆ ದಾವಣಗೆರೆಜಿಲ್ಲೆಯ ಸ್ವಾಭಿಮಾನಿಮತದಾರರ ಕೀರ್ತಿ ದೇಹಲಿಯ ಪಾರ್ಲಿಮೆಂಟ್ ನಲ್ಲಿ ಅಷ್ಟೇಅಲ್ಲಾ ದೇಶದತುಂಬಾ ಹೆಸರಾಗಲಿದೆ.

ಪ್ರಜ್ಆವಂತ ಮತದಾರರ ಅಭಿಮಾನಕ್ಕೆ ಮನಿದು ದಿನಾಂಕ:12-04-204ರಂದು ಸಾಂಕೇತಿಕವಾಗಿ ಉಮೇದುವಾರಿಕೆ ಸಲ್ಲಿಸುತ್ತೇನೆ.ಅದರಂತೆ ಜಿಲ್ಲೆಯ ಸ್ವಾಭಿಮಾನಿ ಅಹಿಂದ ಮತ್ತು ಇತರೆ ಪ್ರಜ್ಞಾವಂತರ ಜೊತೆಗೆ ಭ್ರಹತ್ ಮೆರವಣಿಗೆ ಮೂಲಕ ಉಮೇದುವಾರಿಕೆ ಸಲ್ಲಿಸುತ್ತೇನದು ಸಭಿಕರಿಗೆ ಭರವಸೆ ಕೊಟ್ಟರು.ಹರ್ಷೋದ್ಘಾರದೊಂದಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments