Saturday, December 21, 2024
Homeಸಾರ್ವಜನಿಕ ಧ್ವನಿಗೌರಿಪುರ ಹೊಸೂರು ನಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆ.ಗ್ರಾಮಕ್ಕೆ ದೌಡಾಯಿಸಿದ ಅಧಿಕಾರಿಗಳು

ಗೌರಿಪುರ ಹೊಸೂರು ನಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆ.ಗ್ರಾಮಕ್ಕೆ ದೌಡಾಯಿಸಿದ ಅಧಿಕಾರಿಗಳು

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ಕ್ಯಾಸ ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೌರಿಪುರ ಗ್ರಾಮದ ಗೌರಿಪುರ ಹೊಸೂರಿನಲ್ಲಿ ಸುಮಾರು 400ಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದು, ಇಲ್ಲಿ ಸುಮಾರು 103ಕ್ಕೂ ಹೆಚ್ಚು ಮನೆಗಳಿರುತ್ತವೆ, ಈ ಪ್ರದೇಶದಲ್ಲಿ ಅತಿ ಕಡುಬಡತನ ಮತ್ತು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವ ಹೆಚ್ಚು ಕುಟುಂಬಗಳು ಕಂಡುಬರುತ್ತವೆ, ಪ್ರದೇಶದಲ್ಲಿ ಸುಮಾರು 20 ವರ್ಷಗಳಿಂದಲೂ ವಾಸ ಮಾಡುತ್ತಾ ಬಂದಿದ್ದು, 2002 ಮತ್ತು 2003 ಸಾಲಿನಲ್ಲಿ ಸರ್ಕಾರದಿಂದ 75 ಮನೆಗಳು ಗುಂಪು ಯೋಜನೆಯಲ್ಲಿ ಆಶ್ರಯ ಮನೆ ನಿರ್ಮಾಣ ಮಾಡಲಾಗಿದೆ, ಅಂದಿನಿಂದ ಮನೆ ಇಲ್ಲದೆ ಇರುವವರು ಆಶ್ರಯ ಮನೆಗಳಲ್ಲಿ ಕಡುಬಡತನ ಮತ್ತು ಕೂಲಿ ಕೆಲಸದಿಂದ ಜೀವನ ಜೀವನ ನಡೆಸುವವರು ವಾಸವಾಗಿರುತ್ತಾರೆ, ಇನ್ನೂ ಕೆಲವು ಕುಟುಂಬಗಳು ಮನೆಗಳಿಲ್ಲದ ಕಾರಣ ಆಶ್ರಯ ಮನೆಗಳ ಅಕ್ಕಪಕ್ಕ ದಲ್ಲಿ ಮನೆಗಳನ್ನು ಕಟ್ಟಿಕೊಂಡು ಸುಮಾರು 20 ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ, ಆದರೆ ಇದುವರೆಗೂ ಯಾವುದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಗ್ರಾಮದ ಜನರ ಬಗ್ಗೆ ಗಮನ ಹರಿಸಿಲ್ಲ ಹಾಗೂ ನಿರ್ಲಕ್ಷ ತೋರುತ್ತಿದ್ದಾರೆ,

ಹಲವಾರುಬಾರಿ ತಾಲೂಕು ದಂಡಾಧಿಕಾರಿಗಳಿಗೂ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳಿಗೂ ಗೌರಿಪುರ ಹೊಸೂರಿನಲ್ಲಿ ವಾಸವಿರುವ ಮನೆಗಳಿಗೆ ಹಕ್ಕುಪತ್ರ ನೀಡಬೇಕೆಂದು ಮನವಿಯನ್ನು ಸಲ್ಲಿಸಿದರು ಕೂಡ ಯಾವುದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಹಿಂದೆ 2023-24ನೇ ವಿಧಾನಸಭಾ ಚುನಾವಣೆ ಮತದಾನವನ್ನು ಗೌರಿಪುರ ಹೊಸೂರು ಗ್ರಾಮದ ಎಲ್ಲಾ ಜನರು ಬಹಿಷ್ಕಾರವನ್ನು ಮಾಡಲಾಗಿತ್ತು, ಅಂತಹ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳು, ತಾಲೂಕು ಪಂಚಾಯತಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಗೌರಿಪುರ ಹೊಸೂರು ಗ್ರಾಮಕ್ಕೆ ಭೇಟಿ ನೀಡಿ ಜನಸಾಮಾನ್ಯರ ಮನವೊಲಿಸುವ ಕಾರ್ಯವನ್ನು ಮಾಡಿದರು. ನಿಮಗೆ ಇನ್ನೂ 3 ತಿಂಗಳ ಒಳಗಾಗಿ ನಾವು ಹಕ್ಕುಪತ್ರವನ್ನ ನೀಡುತ್ತೇವೆ ದಯಮಾಡಿ ಮತದಾನ ಬಹಿಷ್ಕಾರವನ್ನು ಹಿಂಪಡೆಯುವಂತೆ ತಿಳಿಸಿ ಭರವಸೆಯನ್ನು ನೀಡಿದರು, ಆದರೆ ವಿಧಾನಸಭಾ ಚುನಾವಣೆ ಮುಗಿದು 1 ವರ್ಷವಾದರೂ ಯಾವುದೇ ರೀತಿಯಲ್ಲಿ ಗೌರಿಪುರ ಹೊಸೂರು ಗ್ರಾಮದ ಬಗ್ಗೆ ತಲೆ ಕೆಡಿಸಿಕೊಂಡಿರುವುದಿಲ್ಲ ಆದ್ದರಿಂದ ಬೇಸತ್ತ ಗ್ರಾಮಸ್ಥರು ಮನೆಗಳಿಗೆ ಹಕ್ಕು ಪತ್ರ ನೀಡುವವರೆಗೂ 2024ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಸಂಪೂರ್ಣವಾಗಿ ಬಹಿಷ್ಕರಿಸುತ್ತೇವೆ ಎಂದು ತಾಲ್ಲೂಕು ಆಡಳಿತಾಧಿಕಾರಿಗಳಿಗೆ ವಿಷಯವನ್ನು ತಿಳಿಸಲಾಯಿತು ತಕ್ಷಣ ಸ್ಥಳಕ್ಕೆ ಸ್ಥಳಕ್ಕೆ ಆಗಮಿಸಿದ CS, CEO, EO,

ಚುನಾವಣಾ ಅಧಿಕಾರಿಗಳು, ತಾಲೂಕ ದಂಡಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಗೌರಿಪುರ ಹೊಸೂರು ಗ್ರಾಮಕ್ಕೆ ಭೇಟಿ ನೀಡಿ ಚುನಾವಣೆ ಮುಗಿದ ತಕ್ಷಣ ಹಕ್ಕುಪತ್ರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ, ಆದರೆ ಈ ಹಿಂದೆ ಇದೇ ರೀತಿಯಾಗಿ ಭರವಸೆಯನ್ನು ನೀಡಿ ಹಕ್ಕುಪತ್ರವನ್ನು ನೀಡದೆ ಇರುವುದರಿಂದ ಅಧಿಕಾರಿಗಳ ಮನವಲಿಕೆಯನ್ನು ಗ್ರಾಮಸ್ಥರು ನಿರಾಕರಿಸಿ ಹಕ್ಕು ಪತ್ರ ನೀಡುವವರೆಗೂ ಯಾವುದೇ ರೀತಿಯಲ್ಲಿ ಮತದಾನ ಮಾಡುವುದಿಲ್ಲ ಎಂದು ಮತದಾನ ಬಹಿಷ್ಕಾರವನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಿ.ಐ.ಟಿ.ಯು. ಸಂಘದ ಕಾರ್ಮಿಕ ಮುಖಂಡರಾದ ಮೈಲೇಶ ವಕೀಲರು, ದಲಿತ ಸಂಘಟನೆಯ ಮುಖಂಡರಾದ ಸತ್ಯಮೂರ್ತಿ,
ಹನುಮಂತರಾಜು.ಅಜ್ಜೆಯ.ಬಸವರಾಜ್, ರವಿಕುಮಾರ್. ಬಸವರಾಜ್ .ಅಂಜಿನಪ್ಪ ಎಲ್ಲ ಗ್ರಾಮಸ್ಥರು ಇದ್ದರು.

       

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments