ದಾವಣಗೆರೆ-ಏಪ್ರಿಲ್, 4: ದಾವಣಗೆರೆಯ ಶರದಿ ಕಲಾ ಸಾಂಸ್ಕೃತಿಕ ಸಂಸ್ಥೆ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಮೇ 4 ಮತ್ತು 5 ಶನಿವಾರ ಭಾನುವಾರ ಎರಡು ದಿನಗಳ ಕಾಲ ನಗರದ ಪಿ.ಬಿ. ರಸ್ತೆಯ ಗಾಂಧಿ ವೃತದ ಹತ್ತಿರದಲ್ಲಿ ಇರುವ ಆರ್.ಎಚ್.ಗೀತಾ ಮಂದಿರದಲ್ಲಿ ಸಂಗೀತಾಸಕ್ತ ಹಿರಿಯರಿಗೆ. ಪ್ರಯುಕ್ತ ಗೀತ ಗಾಯನ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶರದಿ ಕಲಾ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ವಿದುಷಿ ಶ್ರೀಮತಿ ಶೋಭಾ ರಂಗನಾಥ್ ತಿಳಿಸಿದ್ದಾರೆ.
ನಾಡಿನ ಖ್ಯಾತ ಸಂಗೀತಗಾರರಾದ ಬೆಂಗಳೂರಿನ ಉಪಾಸನ ಮೋಹನ್ ಸಂಗೀತ ತರಬೇತಿ ನಡೆಸಿಕೊಡಲಿದ್ದು ಆಸಕ್ತರು 25.04.2024ರ ಒಳಗೆ ಈ ಕೆಳಗೆ ವಿಳಾಸದಲ್ಲಿ ಪ್ರವೇಶ ಪತ್ರ ಪಡೆದು ಭರ್ತಿ ಮಾಡಿ ಕೊಡಬಹುದಾಗಿದೆ.
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಕನ್ನಡಕೃಪಕುವೆಂಪು ರಸ್ತೆ (ಲಾಯರ್ ರೋಡ್), ಕೆಬಿ ಬಡಾವಣೆ, ದಾವಣಗೆರೆ ಶರದಿ ಕಲಾ ಸಾಂಸ್ಕೃತಿಕ ಸಂಸ್ಥೆ, ಜಯನಗರ ‘ಎ’ಬ್ಲಾಕ್ ದಾವಣಗೆರೆ ಹೆಚ್ಚಿನ ಮಾಹಿತಿಗೆ 9538732777, 8904672275, 9740104082.
ಈ ಸನೀಹ ವಾಣಿಗಳಿಗೆ ಸಂಪರ್ಕಿ ಸಬಹುದು ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.