ದಾವಣಗೆರೆ -ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ಎಐಟಿಯುಸಿ ದಾವಣಗೆರೆ ಜಿಲ್ಲಾ ಮಂಡಳಿಗಳ ನೇತೃತ್ವದಲ್ಲಿ ಮೇ 1ನೇ ತಾರೀಖಿನಂದು ವಿಶ್ವ ಕಾರ್ಮಿಕ ದಿನಾಚರಣೆ ಆಚರಿಸಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ತಿಳಿಸಿದ್ದಾರೆ.
ಅಂದು ಬೆಳಗ್ಗೆ 11 ಗಂಟೆಗೆ ಪಿ ಬಸವನಗೌಡ ರಸ್ತೆ (ನಿಟುವಳ್ಳಿ ರಸ್ತೆಯ) ಎಸ್ ಎಸ್ ಪಿ ಕಾಂಪ್ಲೆಕ್ಸ್ ಬಳಿಯಿಂದ ಕಾರ್ಮಿಕರ ಬೃಹತ್ ಮೆರವಣಿಗೆ ಆರಂಭಗೊಂಡು ನಗರದಲ್ಲಿ ಸಂಚರಿಸಿ ನಂತರ ಜಯದೇವ ಸರ್ಕಲ್ ಹತ್ತಿರದ ನಾಟ್ಯಾಚಾರ್ಯ ಕುಲಕರ್ಣಿ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಲಾಗುವುದು.
ಎ ಐ ಟಿ ಯು ಸಿ ರಾಜ್ಯ ಉಪಾಧ್ಯಕ್ಷರಾದ ಕಾಂ ಬಿ ಅಮ್ಜದ್ ರವರು ಬಹಿರಂಗ ಸಭೆ ಉದ್ಘಾಟನೆ ನೆರವೇರಿಸಿ ಮಾತನಾಡುವರು, ಸಿಪಿಐ ಹಿರಿಯ ಮುಖಂಡರಾದ ಕಾಂ ಆನಂದರಾಜ್ ರವರು ಅಧ್ಯಕ್ಷತೆ ವಹಿಸುವರು.
ಎ ಐ ಟಿ ಯು ಸಿ ಜಿಲ್ಲಾಧ್ಯಕ್ಷರಾದ ಕಾಂ ಕೆ ರಾಘವೇಂದ್ರ ನಾಯರಿ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್ ಜಿ ಉಮೇಶ್, ಟಿಎಸ್ ನಾಗರಾಜ್, ಎಂ ಬಿ ಶಾರದಮ್ಮ, ರುದ್ರಮ್ಮ ಬೆಳಲಗೆರೆ, ಜಯಪ್ಪ, ವಿ ಲಕ್ಷ್ಮಣ, ಟಿ ಹೆಚ್ ನಾಗರಾಜ್, ಮಹಮದ್ ಭಾಷಾ, ಮಹಮ್ಮದ್ ರಫೀಕ್, ಅವರಗೆರೆ ವಾಸು, ಐರಣಿ ಚಂದ್ರು ಇತರರು ವೇದಿಕೆಯಲ್ಲಿರುವರು.
ಸಿಪಿಐ ಮತ್ತು ಎಐಟಿಯುಸಿ ಎಲ್ಲಾ ಸಾಮೂಹಿಕ ಸಂಘಟನೆಗಳ ಕಾರ್ಯಕರ್ತರು ಕಾರ್ಮಿಕರು ಮಹಿಳಾ ಸಂಘಟನೆಗಳ ಕಾರ್ಯಕರ್ತರು ವಿದ್ಯಾರ್ಥಿ ಯುವಜನರು ತಪ್ಪದೆ ಕಾರ್ಮಿಕ ದಿನಾಚರಣೆಯ ಮೆರವಣಿಗೆ ಮತ್ತು ಬಹಿರಂಗ ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.