Friday, May 17, 2024
Homeರಾಜಕೀಯಸರ್ವಜಾತಿ ಜನಾಂಗ ತಳಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯತೆ ನೀಡಿ ಮುಂಚೂಣಿಗೆ ತಂದ ಮಹಾನ್ ಅಹಿಂದ ನಾಯಕ ಡಿ.ದೇವರಾಜ್...

ಸರ್ವಜಾತಿ ಜನಾಂಗ ತಳಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯತೆ ನೀಡಿ ಮುಂಚೂಣಿಗೆ ತಂದ ಮಹಾನ್ ಅಹಿಂದ ನಾಯಕ ಡಿ.ದೇವರಾಜ್ ಅರಸ್.

ದಾವಣಗೆರೆ:ರಾಜ್ಯದ ಅಹಿಂದವರ್ಗದ ಬಾಳನ್ನು ಬೆಳಗಿಸಿ ಅಹಿಂದ ವರ್ಗದ ರಾಜಕೀಯ ಶಕ್ತಿಯನ್ನು ವೃದ್ಧಿಸಿದ ರಾಜ್ಯದ ಅತ್ಯುತ್ತಮ ಪ್ರಜಾನಾಯಕ ಡಿ.ದೇವರಾಜ್ ಅರಸು ರವರು.
ಎಪ್ಪತ್ತರ ದಶಕದಲ್ಲಿ ಅಹಿಂದ ವರ್ಗದಲ್ಲಿ ಬಹುಪಾಲು ಅವಿದ್ಯಾವಂತರ ಸಂಖ್ಯೆನೇ ಹೆಚ್ಚು.ಈಗಿನ ಹಾಗೆ ಪ್ರಚಾರಸಾಮಗ್ರಿಗಳ ಅರ್ಭಟವಿಲ್ಲದೆ ಕೇವಲ ಬೆರಳೆಣಿಕೆಯಷ್ಟು ದಿನಪತ್ರಿಕೆಗಳು ಕೆಲವೇ ಕೆಲವು ಓದುಗರನ್ನು ತಲುಪುತಿದ್ದವು. ಇನ್ನು ದೃಶ್ಯ ಮಾಧ್ಯಮಗಳ ಕನಸೂ ಕಾಣದ ಸಂದರ್ಭ.ಅಲ್ಲೊಂದು ಇಲ್ಲೊಂದು ಉಳ್ಳವರ ಮನೆಯಲ್ಲಿ ಆಕಾಶವಾಣಿ ರೇಡಿಯೋ ಬಿಟ್ಟರೆ ಬೇರೆನೂ ಇರಲಿಲ್ಲಾ ಅಂಥ ಸಂದರ್ಭದಲ್ಲಿ ಎಲ್ಲಾ ತಳ ಸಮುದಾಯದ ಜಾತಿ,ಧರ್ಮ ಜನಾಂಗಗಳನ್ನು ಗುರುತಿಸಿ ಒಂದು ಗೂಡಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲಾ. ಈಗ ಐದು ನಿಮಿಷದಲ್ಲಿ ಲಕ್ಷಾಂತರ ಜನರಿಗೆ ವಿಷಯ ಮುಟ್ಟಿಸುವ ಸುಲಭ ಸಂಪರ್ಕ ಸಾಧನಗಳಿವೆ.ಆದರೆ ಅಂದಿನ ಸಮಯದಲ್ಲಿ ಅಂಚೆಯ ಕಾರ್ಡ ಮುಖಾಂತರ ಅಥವಾ ಖುದ್ದಾಗಿಹೋಗಿ ವಿಷಯ ತಲುಪಿಸಬೇಕಾಗಿತ್ತು. ಅಂಥ ಕಠಿಣ ಸಮಯದಲ್ಲಿ ದೇವರಾಜ ಅರಸರವರು ಅಹಿಂದ ವರ್ಗದ ತಳ ಸಮುದಾಯಗಳನ್ನು ಹುಡುಕಿ ಅದರಲ್ಲಿ ಜನ ಸೇವಾ ಮನೋಭಾವದ ವ್ಯಕ್ತಿಗಳನ್ನು ಹೆಕ್ಕಿತಗೆದು ಅಂಥವರಿಗೆ ಜಾತಿನೆಲೆಗಟ್ಟು ಇಲ್ಲದಕಡೆಗಳಲ್ಲಿಯೂ ಕೂಡಾ ಬಹುಜನಾಂಗ ವಿದ್ದ ಕ್ಷೇತ್ರಗಳಲ್ಲೂ ಕಡಿಮೆ ಜನಾಂಗದ ಇರುವ ವ್ಯಕ್ತಿಗಳನ್ನು ಚುನಾವಣೆಗೆ ನಿಲ್ಲಿಸಿ ವಿಧಾನ ಸಭೆಗೆ,ಲೋಕಸಭೆಗೆ ಆಯ್ಕೆಮಾಡಿಕಳಿಸಿದ್ದಾರೆ.ಇದಕ್ಕೆ ಒಂದು ನಿದರ್ಶನ ಸಾಕು ಅನಿಸುತ್ತದೆ.1971ರ ಲೋಕಸಭೆಯ ಚುನಾವಣೆ ಸಂದರ್ಭ ನೆನಪಿಸಿಕೊಳ್ಳಬಹುದು.(ಕನಕಪುರ ಲೋಕಸಭೆ)ಈಗ ಬೆಂಗಳೂರು ಗ್ರಾಮಾಂತರ ದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತಗಳ ಪ್ರಾಭಲ್ಯವಿಲ್ಲದೆ ಬಹುಸಂಖ್ಯಾತ ಮೇಲ್ವರ್ಗದ ಮತಗಳಿರುವ ಕ್ಷೇತ್ರದಲ್ಲಿ ಸ್ಥಳಿಕರೂ ಅಲ್ಲದ ಮುಸ್ಲಿಮ್ ಸಮುದಾಯದ ಸಿ.ಕೆ.ಜಾಫರ್ ಷರೀಫರಿಗೆ ಟಿಕೇಟು ಕೊಡಿಸಿ ಲೋಕಸಭೆಗೆ ಆಯ್ಕೆಮಾಡಿ ಕಳಿಸಿದ ಡಿ.ದೇವರಾಜ ಅರಸರು ಅಹಿಂದ ವರ್ಗದ ಮೇರುಪರ್ವತವೆಂದೇ ಹೇಳಬೇಕಾಗುತ್ತದೆ.

ದೇವರಾಜ ಅರಸು ರವರು ಎಲ್ಲ ತಳ ಸಮುದಾಯದ ಬಹುತೇಕರಿಗೆ ರಾಜಕೀಯ ಸ್ಥಾನಮಾನ ನೀಡಿ ರಾಜ್ಯದ ಜನ ಮಾನಸದಲ್ಲಿ ಕಾಂಗ್ರೆಸ್ ಪಕ್ಷದ ಅಚ್ಚೊತ್ತಿದ್ದರು.
ಆದರೆ ಅಂಥ ಬಲಿಷ್ಟಗೊಳಿಸಿದ ಕಾಂಗ್ರೆಸ್ ಪಕ್ಷದಲ್ಲಿ ಗೆದ್ದಲಿನಲ್ಲಿ ನುಸುಳುಕೋರರಂತೆ ಸೇರಿಕೊಂಡ ಜಾತಿವಾದಿಗಳು,ಧನದಾಹಿಗಳು,ಸ್ವಾರ್ಥಿಗಳು,ಸಮಯಸಾಧಕರು ಕಾಂಗ್ರೆಸ್ ಪಕ್ಷವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಪಿತ್ರಾರ್ಜಿತ ಆಸ್ತಿಯನ್ನಾಗಿಸಿಕೊಂಡು ಪಾಳೆಗಾರಿಕೆಯ ರೀತಿ ಸಾಮ್ರಾಜ್ಯ ಸ್ಥಾಪಿಸುವ ನಿಟ್ಟಿನಲ್ಲಿ ಅಜ್ಜ,ಅಪ್ಪ,ಮಗ,ಮೊಮ್ಮಗ,ಸೊಸೆ,ಮಗಳು,ಮರಿಮೊಮ್ಮಗ,ಸಾಲದ್ದಕ್ಕೆ ತಮ್ಮ ಆಶೋತ್ತರಗಳನ್ನು ಈಡೇರಿಸಿ ಸಂತೃಪ್ತಪಡಿಸಿದವರಿಗೆ ಹೀಗೆ ತಮ್ಮೊಳಗೇ ಅಧಿಕಾರದ ಕೋಟೆಯನ್ನು ಕಟ್ಟಿಕೊಂಡು ಪರರಿಗೆ ಅವಕಾಶಕೊಡದೇ ಸರ್ವಾಧಿಕಾರಿಗಳಂತೆ ಇರುವವರಿಗೆ ಸಮಾಜ ತಲೆಬಾಗಬೇಕೆ?

ವಂಶ ಪಾರಂಪರಿಕವಾಗಿ ಅಪ್ಪ,ಮಗ,ಪತ್ನಿ,ಸೊಸೆ,ಮಗಳು,ಅಳಿಯ,ರಕ್ತಸಂಭಂದಿ,ಎಲ್ಲರೂ ನೀವೇ ಅಧಿಕಾರಕ್ಕೆ ಹಪಹಪಿಸಿ ಸುಶಕ್ಷಿತರು,ವಿದ್ಯಾವಂತರು,ಪ್ರಗತಿಪರ ಚಿಂತಕರು,ಜನಪರಹೋರಾಟಗಾರರನ್ನು ಅಪರಾಧಿಗಳಂತೆ ಬಿಂಬಿಸುತ್ತಿರುವ ಸ್ವಾರ್ಥಸಾಧಕರಿಗೆ ಪ್ರಜಾನಾಯಕರೆಂದು ಯಾವಬಾಯಿಯಿಂದ ಕರೆಯಬೇಕು?
ಯಾವುದೇ ಒಂದು ಸಾರ್ವಜನಿಕ ಸಂಘ,ಸಂಸ್ಥೆ, ಪಕ್ಷ ಸಂಘಟನಾತ್ಮಕವಾಗಿ ಬೆಳೆಯಬೇಕಾದರೆ ಎಲ್ಲಾಜಾತಿ,ಧರ್ಮ, ತಳಸಮುದಾಯದವರನ್ನು ಗುರುತಿಸಿ ಅಧಿಕಾರ ಹಂಚಿದರೆ ಅದು ಸಮೃದ್ಧ ಮತ್ತು ಸಧೃಡವಾಗಿರುತ್ತದೆ.ಹಿಂದೆ ದೇವರಾಜ್ ಅರಸು ರವರಲ್ಲಿ ಅಂಥಾ ಒಂದು ಅಗಾಧ ಶಕ್ತಿ ಇತ್ತು ಹಾಗಾಗಿ ಆ ಸಂರ್ಭದಲ್ಲಿ ಕಾಂಗ್ರೆಸ್ ಪಕ್ಷಕೂಡಾ ಸಧೃಡ ವಾಗಿತ್ತು.ತದನಂತರ ರಾಮಕೃಷ್ಣ ಹೆಗಡೆಯವರೂ ಅದನ್ನೇ ಅನುಸರಿಸಿದರು ಹಾಗಾಗಿ ಆಗ ಜನತಾ ಪರಿವಾರವೂ ಸದೃಢ ಮತ್ತು ಬಲಿಷ್ಠ ವಾಗಿತ್ತು.ದೇವರಾ ಅರಸು ಮತ್ತು ರಾಮಕೃಷ್ಣ ಹೆಗಡೆಯವರಂಥ ಜನನಾಯಕರು ಪ್ರಸ್ತುತ ಸನ್ನಿವೇಶದಲ್ಲಿ ನೆನಪಿಸಿಕೊಳ್ಳುವುದೂ ಕಷ್ಟ. ಅಂಥಾ ಇತರರನ್ನು ಬೆಳೆಸುವ ಮನೋಭಾವದ ಒಬ್ಬನೇ ಒಬ್ಬ ರಾಜಕಾರಣಿ ಇವತ್ತು ನಮ್ಮ ಮುಂದೆ ಇಲ್ಲಾ.
ಸ್ವಾರ್ಥ ಸಾಧನೆಗಾಗಿ,ಸ್ವಜಾತಿಯಹೆಸರು ದುರ್ಬಳಕೆಮಾಡಿಕೊಂಡು ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಸದಾ ಹಪಹಪಿಸುವ ಡೋಂಗಿ ಸಮಾಜಸೇವಕರನ್ನು ಜನನಾಯಕ ಎನ್ನಲಾದೀತೆ?ಹಣ ಹಂಚಿ ಬಹುಪಾಗ ಹೇಳಿಸಿಕೊಂಡು,ಡೋಣೆಷನ್ ಕೊಟ್ಟು ಬಿರುದುಪಡೆದು ಜಾಹೀರಾತುಗಳಲ್ಲಿ ರಾರಾಜಿಸಿ ಪರಿಚಯಿಸಿಕೊಳ್ಳುವವನು ಪ್ರಜಾನಾಯಕನೆ?

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments