ದೇಶದಲ್ಲಿ ನಿರಂತವಾಗಿ ತಾಪಮಾನವು ಹೆಚ್ಷಳ್ಳವಾಗುತ್ತಿದ್ದೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೆಳಿಗ್ಗೆ ೯ ಗಂಟೆಯ ನಂತ ಸರಿ ಸುಮಾರು ೩-೪ ಗಂಟೆಯತನಕ ತಾಪಮಾನವನ್ನು ತಾಳಲಾರದೆ ಜನತೆ ಪರಿತಪಿಸುವಂತಾಗಿದೆ. ಹಲವು ಕಡೆಗಳಲ್ಲಿ ಹೆಚ್ಚಿರುವ ತಾಪಮಾನದಿಂದ ಜನರ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತಿದೆ, ಈ ಹಿನ್ನೆಲೆಯಲ್ಲಿ ರಾಜ್ಯದ ಮಹಾನಗರ, ನಗರ, ಪಟ್ಟಣಗಳಲ್ಲಿ ನಾಗರಿಕಾ ಸೌಲಭ್ಯಗಳನ್ನು ಒದಸುವ ಮುನಿಸಿಪಾಲ್ ಕಾರ್ಮಿಕರು, ಪೌರಕಾರ್ಮಿಕರು ಕಸದಲೋರ‍್ಸ್, ಕಸಸಾಗಾಣಿಕೆ ಚಾಲಕರು, ಪಾರ್ಕಗಳಲ್ಲಿ ಕೇಲಸ ಮಾಡುವರು, ಯು.ಜಿ.ಡಿ ಕೆಲಗಾರರು, ನೀರು ಸರಬರಾಜು ಕಾರ್ಮಿಕರು ಉರಿವ ಬಿಸಿಲಲ್ಲಿ ೭-೯ ಗಂಟೆಗಳ ಕಾಲ ನಿತ್ಯ ಕೆಲಸ ಮಾಡುತ್ತಾ ಬಂದಿದ್ದಾರೆ. ತಾಪ ಮಾನ ಹೆಚ್ಚಳದಿಂದಾಗಿ ಈ ಕಾರ್ಮಿಕರು ತ್ರೀರ್ವ ಸಂಕಷ್ಟವನ್ನು ಅನುಭವಿಸುವಂತೆ ಅಗಿದೆ. ಬೆಳಿಗ್ಗೆ ೧೦ ಗಂಟೆನಂತರ ಕೆಲಸ ಮಾಡುವುದು ಅಸಾಧ್ಯವಾಗಿದೆ. ನಿತ್ಯ ಬೇವರಲ್ಲಿ ನೆಂದು, ಬಿಸಿಲಿಗೆ ಒಣಗಿ ಅರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಈ ಹಿನ್ನೆಲಯಲ್ಲಿ ಘನ ರಾಜ್ಯ ಸರ್ಕಾರವು ದೈಹಿಕ ಶ್ರಮವಹಿಸಿ ಹೋರಗಡೆ ದುಡಿವಎಲ್ಲಾ ಮುನಿಸಿಪಲ್ ಕಾರ್ಮಿಕರಿಗೆ ದಿನದ ದುಡಿವೆಯನ್ನು ಬೆಳಿಗ್ಗೆ ೬ ಗಂಟೆಯಿಂದ ೧೦ ಗಂಟೆ ತನಕ ಮಾತ್ರ ನಿಗಧಿಪಡಿಸುವಂತೆ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ. ರಿ ಸಿ.ಐ.ಟಿ.ಯು. ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ನಗರಾಭಿವೃದ್ದಿ ಸಚಿವರು, ಪೌರಾಡಳಿತ ಸಚಿವರು, ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದಾಗಿ, ಹವಾಮಾನ ಸೂಕ್ಷö್ಮ ಸಾಂಕ್ರಾಮಿಕ ರೋಗಗಳು, ಸಂಬಂದಿ ಖಾಯಿಲೆಗಳು, ಹೀಡ್ ಸ್ಟೋಕ್‌ಗಳಾಗುವ ಸಂಭವಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಉತ್ತರ ಭಾರತ ಸರ್ಕಾರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲವು ಈ ಸಂಬಂಧ ಏಪ್ರೀಲ್ ತಿಂಗಳಲ್ಲಿಯೇ ನೀಡಿರುವ ಸ್ಪಷ್ಟ ಮಾರ್ಗಧರ್ಶನವನ್ನು ಜಾರಿಗೆ ಕ್ರಮ ವಹಿಸುವಂತೆ ತಮ್ಮಲ್ಲಿ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ. ರಿ. ಸಿಐಟಿಯು ಒತ್ತಾಯಿಸುತ್ತದೆ.
ದೈಹಿಕವಾಗಿ ಹೋರಗೆ ಕೆಲಸ ಮಾಡುವ ಎಲ್ಲಾ ಮುನಿಸಿಪಲ್ ಕಾರ್ಮಿಕರಿಗೆ ಕಡ್ಡಾಯವಾಗಿ ಶುದ್ದವಾದ ೩-೪ ಲೀಟರ್ ನೀರುನ್ನು ನೀಡಬೇಕು. ವಿಶ್ರಾಂತಿಗೆ ಬೇಕಾದ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸುವುದು, ತಾಪಮಾನ ಹೆಚ್ಚಾದಾಗ ಕೆಲಸಕ್ಕೆ ನಿಯೋಜಿಸದಂತೆ ಕೆಲದ ಪಾಳಿಗಳನ್ನು ರೂಪಿಸುವುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯರು, ತಾಪಮಾನ ಹೆಚ್ಚಳದ ಸಮಯದಲ್ಲಿ ಕಾರ್ಮಿಕರು ಮತ್ತು ಕೆಲಸದ ಸಂಬಂದ ನೀಡಿರುವ ಮಾರ್ಗದರ್ಶನ ಅಂಶಗಳನ್ನು ಜಾರಿಗೆ ಕ್ರಮ ವಹಿಸುವುದು. ಈ ಸಂಕ್ರಮಣ ಕಾಲದಲ್ಲಿ ಹೇಗೆ ಕೆಲಸ ನಿರ್ವಹಿಸಬೇಕು ಎಂಬ ಬಗ್ಗೆ ಮುನಿಸಿಪಾಲ್ ಕಾರ್ಮಿಕರ ನಡುವೆ ಅರಿವು ಮುಡಿಸಬೇಕು.
ನಿರಂತರವಾಗಿ ರಾಜ್ಯ ನಗರ – ಪಟ್ಠಣಗಳಲ್ಲಿ ಜನತೆ ಆರೋಗ್ಯ ರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ಪಣಕ್ಕಿಟ್ಟು ದುಡಿವ ಪೌರಕಾರ್ಮಿಕರ–ಮುನಿಸಿಪಲ್ ಕಾರ್ಮಿಕರನ್ನು ಮನುಷ್ಯರಂತೆ ಪರಿಗಣಿಸಿ ಈ ಕೊರಿಕೆಗಳನ್ನು ಪರಿಗಣಿಸುವಂತೆ ಸರ್ಕಾರ ವನ್ನು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ. ರಿ ಸಿಐಟಿಯು ರಾಜ್ಯ ಸಮಿತಿ ಒತ್ತಾಯಿಸಿದೆ. ಈ ಸಂಬಂದ ಇಂದು ಪೌರಾಡಳಿತ ಜಂಟಿ ನಿರ್ದೇಶಕರ ವಿಜಯ್‌ಕುಮಾರ್ ಅವರಿಗೆ ಮುಖ್ಯಮಂತ್ರಿಗಳು ಮತ್ತು ನಗರಾಭಿವೃದ್ದಿ ಇಲಾಖೆಯ ಪ್ರಧಾನ ಕಾರ್ಯಧರ್ಶಿಗಳ ಕಛೇರಿ ದಿನಾಂಕ; ೪- ೫-೨೦೨೪ ಮಧ್ಯಾನ್ಹವೇ ಮನವಿಗಳನ್ನು ಸಲ್ಲಿಸಲಾಗಿದೆ.ಎಂದು ಜಿಲ್ಲಾ ಸಂಚಾಲಕರಾದ ಆನಂದರಾಜು ಕೆ.ಹೆಚ್.ಪ್ರಕಟಣೆಯಲ್ಲಿ ತಿಳಿಸಿದ್ದಾರೆ