ವಿಜಯಪುರ:– ಕಳೆದ ಹಲವಾರು ವರ್ಷಗಳಿಂದ ಕಣಕಿ ಹುಲ್ಲು ಮಾರಾಟ ಮಾಡುವ ಬೀದಿ ಬದಿಯ ಬಡ ರೈತಾಪಿ ವ್ಯಾಪಾರಸ್ಥರನ್ನು ದಿಢೀರ್ ಎಂದು ಎತ್ತಂಗಡಿ ಮಾಡುತ್ತಿರುವ ಮಹಾನಗರ ಪಾಲಿಕೆಯ ಅಧಿಕಾರಿಗಳ ನಡೆ ಖಂಡನೀಯ ಎಂದು ನ್ಯಾಯವಾದಿ ದಾನೇಶ ಅವಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನಾಂಕ 02-08-2 024ಶನಿವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು.
ನಗರದ ಮಧ್ಯವರ್ತಿ ಸ್ಥಳವಾದ ಬಸ್ ನಿಲ್ದಾಣ ಹತ್ತಿರ ಕಣಕಿ ಬಜಾರ್ ನಿಂದ ಕರಿಮುದ್ದೀನ್ ಮಸೀದಿ ವೃತ್ತಕ್ಕೆ.ಅಲ್ಲಿಂದ ಡಿಡಿಪಿಆಯ್ ಕಚೇರಿ ಹತ್ತಿರ ಖುಲ್ಲಾ ಜಾಗೆಗೆ ಮತ್ತೇ ಈಗ ಅಲ್ಲಿಂದಲ್ಲೂ ಏಕಾಏಕಿ ಯಾವುದೇ ಮಾಹಿತಿ ನೀಡದೇ ಕಣಕಿ -ಹುಲ್ಲು ಮಾರುವ ರೈತ. ಬಡ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರು ಮಹಾನಗರ ಪಾಲಿಕೆಯ ಕೆಲವು ಅಧಿಕಾರಿಗಳಿಂದ ನಡೆದಿದ್ದು ಖಂಡನೀಯ ಎಂದು ಪ್ರತಿಭಟಿಸಿ ಹಲವಾರು ಸಂತ್ರಸ್ತ ಬೀದಿ ಬದಿಯ ವ್ಯಾಪಾರಸ್ಥರ ಜೊತೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ.ಈಗ ಇರುವ ಲ್ಲಿಯೇ ವ್ಯಾಪಾರ ಮಾಡಲುಅವಕಾಶ ಮಾಡಿ ಕೊಡಿ ಅಥವಾ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ. ಬೀದಿಗೆ ಬೀಳಲಿರುವ ಹಲವಾರು ಕುಟುಂಬಗಳಿಗೆ ಅನುಕೂಲ ಕಲ್ಪಿಸಿ ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಸಾಮಾಜಿಕ ಹೋರಾಟಗಾರ ಅಜೀಜ್ ಮುಕಬಿಲ್ ಮಾತನಾಡಿ ನಗರದಲ್ಲಿರುವ ಜನ ಜಾನುವಾರು ಕುದುರೆ ಕುರಿ ಮೇಕೆಗಳಿಗೆ ಇಲ್ಲಿಂದಲೇ ಸೊಪ್ಪು ಸವದೆ ಹುಲ್ಲು ಕಣಿಕೆ ಒಯ್ಯುತ್ತಾರೆ.ಈಗ ಈ ವ್ಯಾಪಾರಸ್ತರು ಈ ಉದ್ಯೋಗದಿಂದ ವಿಮುಖರಾದರೆ ಹಲವಾರು ಕುಟುಂಬಗಳು ಬೀದಿಗೆ ಬೀಳುತ್ತವೆ.ಇವರನ್ನು ನಂಬಿದ ಜಾನುವಾರು ಮೂಕ ಪ್ರಾಣಿಗಳು ಹಸಿವಿನಿಂದ ಬಳಲುತ್ತವೆ. ಇದು ಎಲ್ಲರಿಗೂ ಅನುಕೂಲವಾದ ಮಧ್ಯವರ್ತಿ ಸ್ಥಳ ಇಲ್ಲಿ ಆಡಳಿತ ಪಕ್ಷದ ಮಂತ್ರಿಗಳಿ ನಗರ ಶಾಸಕರು.ಮಹಾನಗರ ಪಾಲಿಕೆ ಮೇಯರ್.ಸದಸ್ಯರು.ವಿವಿಧ ಪಕ್ಷದ ನಾಯಕರು.ಆಯುಕ್ತರು ಅಧಿಕಾರಿಗಳು ಬೀದಿ ಬದಿಯ ವ್ಯಾಪಾರಸ್ಥರ ಹೊಟ್ಟೆಯ ಮೇಲೆ ಹೊಡೆಯದೆ ಅವರ ತಿನ್ನುವ ಅನ್ನಕ್ಕೆ ಕಲ್ಲು ಹಾಕದೇ ದೊಡ್ಡ ಮನಸು ಮಾಡಿ ಅವರಿಗೆ ಇಲ್ಲಿಯೇ ವ್ಯಾಪಾರ ಮಾಡಲು ಅವಕಾಶ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕೆಂದರು.
ಬೀದಿ ಬದಿ ಹುಲ್ಲು-ಕಣಿಕೆ ಮಾರುವ ರೈತರಾದ ಅಂಬರೀಷ್ ನರಸಿಂಗ.ಹಜ್ಜೇರಿ ಮಾತನಾಡಿ ನಮ್ಮ ತಾತನ ಕಾಲದಿಂದಲೂ ನಾವು ಕಣಕಿ-ಹುಲ್ಲು ಮಾರುವ ವೃತ್ತಿ ಮಾಡಿಕೊಂಡು ಬಂದಿರುವ ನಮಗೆ ಮತ್ತೊಂದು ವೃತ್ತಿಯ ಬಗ್ಗೆ ಮಾಹಿತಿ ಇಲ್ಲ. ಕಾರಣ ಈ ವೃತ್ತಿಯನ್ನು ಬಿಟ್ಟರೆ ಬೇರೆ ಯಾವ ವೃತ್ತಿಯು ನಮಗೆ ಬರುವದಿಲ್ಲ ಕಾರಣ ಇಲ್ಲಿಂದ ನಮ್ಮನ್ನು ಒಕ್ಕಲೆಬ್ಬಿಸಿದರೆ ನಾನು ನನ್ನಂತೆ ಹಲವಾರು ಕುಟುಂಬಗಳು ಬೀದಿಗೆ ಬರುವದು ನಿಶ್ಚಿತ. ಕಾರಣ ನಮಗೆ ಇಲ್ಲಿಯೇ ವ್ಯಾಪಾರ ಮುಂದುವರೆಸಲು ಅನುಮತಿಸಬೇಕೆಂದು ಇಲ್ಲದಿದ್ದರೆ ತಾವು ಹೋರಾಟದ ಹಾದಿ ಹಿಡಿಯುವ ಮೊದಲೇ ನಮಗೆ ಇದ್ದಲ್ಲಿಯೇ ವ್ಯಾಪಾರ ಮಾಡಲು ಅನುಮತಿ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೀರಾ ಮಣಿ ರಾಥೋಡ್. ಸುಭಾನ್ ನಾಗರಬಾವಡಿ. ಸಲೀಂ ಕನ್ನೂರ.ಆಕಾಶ ರಾಥೋಡ್ ಮ್ಸೀತಾಬಾಯಿ ರಾಠೋಡ್. ಮೇನಕಾಬಾಯಿ ಚವ್ಹಾಣ ಶಾರುಬಾಯಿ ರಾಠೋಡ್. ಶಾಂತಬಾಯಿ ಪವಾರ್. ಮೋತಿಲಾಲ್ ರಾಥೋಡ್. ಫಾತಿಮಾ ಇನಾಂದಾರ್. ಆಕಾಶ್ ರಾಥೋಡ್ ಮುಂತಾದವರಿದ್ದರು.