ಬೆಂಗಳೂರು: ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರ ಸಹಯೋಗದಲ್ಲಿ, ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ, ಕನ್ನಡ ಚಳವಳಿ ಸೇನಾನಿ, ಮಾಜಿ ವಿಧಾನಸಭಾ ಸದಸ್ಯರಾದ ಜಿ. ನಾರಾಯಣ ಕುಮಾರ್ ನೆನಪು, ನಮನ ಮತ್ತು “ಜಿ.ನಾ.ಕು. ಪ್ರಶಸ್ತಿ” ಪ್ರದಾನ ಸಮಾರಂಭ ಜರುಗಿತು.
ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಉದ್ಘಾಟನೆ ನೆರವೇರಿಸಿದರು. ಕನ್ನಡ ಚಳವಳಿ ನಾಯಕರು, ಮಾಜಿ ಶಾಸಕರಾದ ವಾಟಾಳ್ ನಾಗರಾಜ್ ಅವರು, ಜಿ.ನಾ.ಕು. ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕನ್ನಡ ಚಳವಳಿಗಾರರು ಹಾಗೂ ಪತ್ರಕರ್ತರಾದ ದಾವಣಗೆರೆ ಜಿಲ್ಲೆಯ ಬಸವರಾಜ ಐರಣಿ ಹಾಗೂ ಬೆಂಗಳೂರಿನ ಸಚಿವ ಶ್ರೀಧರ್ ಇವರಿಗೆ ಜಿ.ನಾ.ಕು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು, ಕಬ್ಬು ಬೆಳೆಗಾರರ ಹಾಗೂ ರಾಜ್ಯ ರೈತ ಸಂಘದ ಅಧ್ಯಕ್ಷರಾದ ರೈತರತ್ನ ಕುರುಬೂರು ಶಾಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ಪುರಸ್ಕೃತರಾದ ಸಚಿವ ಶ್ರೀಧರ್ ಹಾಗೂ ಬಸವರಾಜ ಐರಣಿ ಮಾತನಾಡಿದರು.
ಆರಂಭದಲ್ಲಿ ಕ.ಸಾ.ಪ.ಗೌ. ಕಾರ್ಯದರ್ಶಿ ಬಿ.ಎಂ. ಪಟೇಲ್ ಪಾಂಡು ಸ್ವಾಗತಿಸಿದರು. ಕನ್ನಡ ಚಳವಳಿಯ ನಾಯಕರಾದ ಹಾಗೂ ಕೇಂದ್ರ ಸಮಿತಿಯ ಅಧ್ಯಕ್ಷರಾದ ಗುರುದೇವ್ ನಾರಾಯಣಕುಮಾರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಚಳವಳಿ ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾದ ಶಿವರತನ್, ವಾರ್ತಾ ಇಲಾಖೆಯ ನಿವೃತ್ತ ನೌಕರ ಬಿ.ಎಸ್. ಬಸವರಾಜ್, ಸಂತೋಷ್ ಏಕಬೋಟೆ, ಮಯೂರ ಅಕ್ಕಮ್ಮನವರು, ಇವರು ಭಾಗವಹಿಸಿ ಶುಭ ಹಾರೈಸಿದರು.