ದಾವಣಗೆರೆ:ದಾವಣಗೆರೆ ಜಿಲ್ಲೆಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವಸದಸ್ಯ ಸ್ನೇಹಿತರುಗಳಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುವುದೇನಂದರೆ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘಟನೆಯು ಈಗ ಸುಸಜ್ಜಿತ ಮತ್ತು ಸಕ್ರಿಯ ಚಟುವಟಿಕೆಗಳ ಸಂಘಟನೆಯಾಗಿದೆ.ಈ ಹಿಂದೆ ಸಂಘಟನೆ ಕೆಲವರ ಸ್ವತ್ತಿನಂತಾಗಿತ್ತು.ಕೆಲವರೇ ತಮ್ಮ ತಮ್ಮಲ್ಲೇ ಹೊಂದಾಣಿಕೆ ಮಾಡಿಕೊಂಡು ಬಹುತೇಕ ಸದಸ್ಯರುಗಳಿಗೆ ಯಾವುದನ್ನೂ ತಿಳಿಸದೆ ಕೆಲವರನ್ನು ಸದಸ್ಯತ್ವದಿಂದಲೂ ದೂರ ಇಡುವ ಪ್ರಯತ್ನಗಳು ನಡೆಯುತ್ತಬಂದಿದ್ದವು.ಆದರೆ ಕಳೆದಸಾಲಿನಲ್ಲಿ ಬಹುತೇಕರು ಸಂಘದ ಸದಸ್ಯರಾಗಲೂ ಬಯಸದವರು ಈ ಬಾರಿ ನಾಮುಂದು ತಾಮುಂದು ಎಂದು ಬರುತ್ತಿರುವುದು ಸಂಘಟನಾ ಕಾರ್ಯಚಟುವಟಿಕೆಯ ಶಕ್ತಿಯನ್ನು ಬಿಂಬಿಸುತ್ತದೆ.ಪ್ರಸ್ತುತ ಜಿಲ್ಲಾ ಕಾರ್ಯಕಾರಿಸಮಿತಿಯು ಇಎಂ.ಮಂಜುನಾಥರ ಅಧ್ಯಕ್ಷತೆಯಲ್ಲಿ ಪ್ರಧಾಕಾರ್ಯದರ್ಶಿ ಎ.ಫಕೃದ್ದಿನ್,ಖಜಾನ್ಸಿ ಬದ್ರಿನಾಥ್,ರಾಜ್ಯಕಾರ್ಯಕಾರಿಸಮಿತಿಯ ಚಂದ್ರಣ್ಣ ಇತರೆ ಪದಾಧಿಕಾರಿ ಮತ್ತು ಸದಸ್ಯರ ಜಿಲ್ಲಾ ತಂಡವು

ಅತ್ಯುತ್ತಮt ಕಾರ್ಯಚಟುವಟಿಕೆ ನಡೆಸಿ ಜಿಲ್ಲೆಯ ಪತ್ರಕರ್ತರ ಗರಿಮೆಯನ್ನು ಹೆಚ್ಚಿಸಿದೆ.ರಾಜ್ಯ ಸಮ್ಮೇಳನ ಯಶಸ್ವಿಗೊಳಿಸಿ ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿಯಾಗಿ ಪ್ರಶಂಸೆಪಡೆದಿದೆ.ಅಲ್ಲದೆ ಸಂಘಕ್ಕೆ ತಾತ್ಕಾಲಿಕ ಕಚೇರಿಯನ್ನು ಪಾಲಿಕೆ ಆವರಣದಲ್ಲಿ ಪಡೆಯಿತು ಹಾಗೂ ಪ್ರಮುಖವಾಗಿ ಜಿಲ್ಲಾ ಸಂಘಕ್ಕೆ ನಗರಾಭಿವೃದ್ಧಿಯಿಂದ ಸಿ ಎ.ನಿವೇಶನಪಡೆದು ಕಟ್ಟಡದ ಶಂಕುಸ್ಥಾಪನೆಯನ್ನೂ ಮಾಡಿ ಅತ್ಯುತ್ತಮವಾದ ಕಾರ್ಯಸಾಧನೆ ಮಾಡಿದೆ.ಇದು ತನ್ನ ಮೂರುವರ್ಷಗಳ ಅವಧಿಯಲ್ಲಿ ಮಾಡಿದ ಬಹುದೊಡ್ಡ ಸಾಧನೆಯಂದೇ ಹೇಳಬಹುದು.
ಪ್ರಸ್ತುತ ಆಡಳಿ ಅವದಿ ಕೊನೆ ಕೊಂಡು ಮತ್ತೆ ಚುನಾವಣೆ ಘೋಷಣೆ ಯಾಗಿದೆ.ಈ ಚುನಾವಣೆಯಲ್ಲೂ ವ್ಯಕ್ತಿ,ಪಕ್ಷ,ಜಾತಿ,ಆಮಿಷ,ದ್ವೇಶ,ಆವೇಷ ಎಲ್ಲವನ್ನೂ ತಮ್ಮ ತಮ್ಮ ಮನೆಯಲ್ಲೇ ಬಿಟ್ಟುಬಂದು ಸಂಘಟನೆ ಎತ್ತರಕ್ಕೆ ಬೆಳಸಬೇಕೆಂಬ ಗುರಿಯೊಂದಿಗೆ ಬನ್ನಿ.ಅಧಿಕಾರ ಯಾರಿಗೂ ಯಾವುದೂ ಶಾಸ್ವತವಲ್ಲಾ.ಅಸೂಯೆ,ಅಹಂಕಾರ,ತೋಳ್ಬಲ,ಹಣಬಲದಿಂದ ಸಾಧನೆಮಾಡಲುಸಾಧ್ಯವಿಲ್ಲಾ.ಎಲ್ಲರೂ ಸ್ನೇಹ,ಪ್ರೀತಿ,ವಿಶ್ವಾಸ,ಗಳ ಮುಖಾಂತರ ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡೋಣ.ಸಾಧ್ಯವಾದಷ್ಟು ಅವಿರೋಧಮಾಡೋಣ.ಇಲ್ಲಿಯ ವರೆಗೆ ಇದ್ದ ಜಿಲ್ಲಾ ಕಾರ್ಯಕಾರಿಸಮಿತಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ.ಮುಂದೆ ಬರುವ ಜಿಲ್ಲಾ ಕಾರ್ಯಕಾರಿಸಮಿತಿಯೂ ಉತ್ತಮ ಕಾರ್ಯಚಟುವಟಿಕೆಗೆ ಸಹಕರಿಸುವಂತ ಮಾಡುವಂಥವರನ್ನು ಗುರುತಿಸಿ ಆಯ್ಕೆಮಾಡಿ.
ಕೇವಲ ಅಧಿಕಾರಲಾಲಸೆಗೆ ಬರುವಂಥವರನ್ನು ಗಮನಿಸಿ ದೂರವಿಡಿ.ಸಂಘದ ಚಟುವಟಿಕೆ ಮಾದರಿಯಾಗಿನಡೆಯುವಂಥವರಿಗೆ ಮಾನ್ಯತೆ ನೀಡಿ ಜಿಲ್ಲೆಯ ಸಂಘವು ಇತರೆ ಜಿಲ್ಲೆಯವರಿಗೆ ಮಾದರಿಯಾಗುಂತಿರಲಿ.
ಈಗ ನಮ್ಮ ಮುಂದೆ ಇರುವ ದೊಡ್ಡ ಸವಾಲು ಎಂದರೆ ಜಿಲ್ಲಾ ಸಂಘಕ್ಕೆ ನಿವೇಶನ ಪಡೆದು ಕಟ್ಟಡ ಭೂಮಿಪೂಜೆ ಮಾಡಲಾಗಿದೆ.ಇದು ಈ ಅವದಿಯಲ್ಲಿ ಕಟ್ಟಡ ಪೂರ್ಣಗೊಂಡು ಉದ್ಘಾಟನೆಯಾಗಬೇಕು.ಇಲ್ಲದಿದ್ದರೆ ಬಹಳ ಅವಮಾನವಾಗ್ತದೆ.ಇಡೀರಾಜ್ಯದ ಮಧ್ಯಕೇಂದ್ರ ದಾವಣಗೆರೆಯಲ್ಲಿ ಸಂಘಕ್ಕೆ ಒಂದು ಕಚೇರಿಯಾಗಲಿ ನಿವೇಶನವಾಗಲಿ ಇದ್ದಿರಲಿಲ್ಲಾ ಕೇವಲ ಒಂದೇ ಅವಧಿಯಲ್ಲಿ ಕಚೇರಿ ಹಾಗೂ ನಿವೇಶನ ಎರಡನ್ನೂ ಮಾಡಿತೋರಿಸಿದ ತಂಡ ಮುಂದಿನಾವದಿಯಲ್ಲಿ ಕಟ್ಟಡನಿಮಾಣಮಾಡಿ ಪೂರ್ಣಗೊಳಿಸುವಂಥದ್ದಾಗಿರಬೇಕು.
ನಾನೂ ಕೂಡಾ ಸಂಘಟನೆಯ ನಿರ್ಧೇಶಕಸ್ಥಾನದಿಂದ ಹಿಡಿದು ಈಗ ರಾಷ್ಟ್ರೀಯ ಮಂಡಳಿಯ ಸದಸ್ಯನಾಗು ತನಕ ಸಹಕರಿಸಿ ಬೆಳಸಿದ ಪ್ರತಿಯೊಬ್ಬ ಪತ್ರಿಕಾಮಿತ್ರರಿಗೆ ಅಭಿನಂದನೆಗಳನ್ನು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ.ಎಲ್ಲಾ ಪತ್ರಕರ್ತಮಿತ್ರರಿಗೆ ಹೃತ್ಪೂರ್ವಕ ಅಭಿನಂದನೆಗೂ ಚುನಾವಣೆ ಶಾಂತಿ,ಸಹನೆ,ಸಹಕಾರ,ಸಹಮತದಿಂದ ನಡೆದು ಯಶಸ್ವಿಯಾಗಲೆಂದು ಹಾರೈಕೆ (ಎಸ್.ಕೆ.ಒಡೆಯರ್)

