ಬೆಂಗಳೂರು: ಕೆ.ಎನ್ ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮವು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ರಂಗಮಂದಿರದಲ್ಲಿ ಸಂಸ ಥಿಯೇಟರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕೆ.ಎನ್ ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕವಿಗೋಷ್ಠಿ ನಡೆಯಲಿದೆ. ಇಂದು ಡಿಸೆಂಬರ್ 14ರ ಭಾನುವಾರ ಸಂಜೆ 4 ಗಂಟೆಗೆ ಕವಿಗೋಷ್ಠಿ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನವನ್ನು ಖ್ಯಾತ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕರಾದ ಶೂದ್ರ ಶ್ರೀನಿವಾಸ್ ನೆರವೇರಿಸಲಿದ್ದಾರೆ.
ಸಂಜೆ 7ಕ್ಕೆ ಜೆ.ಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದ ನಯನ ರಂಗಮಂದಿರದಲ್ಲಿ
ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೆಚ್.ದಂಡಪ್ಪ, ಕಿ.ರಂ.ನಾಗರಾಜ, ಕೆ.ಎನ್ ವಿಜಯಲಕ್ಷ್ಮಿ ಮಕ್ಕಳಾದ ಕೆ.ಎನ್. ಸಹನ, ಡಾ. ಕೆ.ಎನ್ ಕವನ ಹಾಗೂ ಕೆ.ಎನ್. ಚಂದನ, ಸಂಸ ಥಿಯೇಟರ್ ಗೌರವಾಧ್ಯಕ್ಷರಾದ ಎಂ.ಜಯರಾಮ, 2023ರ ಹಾಗೂ 2024ರ ಕೆ.ಎನ್ ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ ಪುರಸ್ಕೃತರಾದ ಡಾ. ಮಲರ್ ವಿಳಿ ಹಾಗೂ ಪ್ರೊ. ಷಾಕಿರ ಖಾನಂ ಅವರು ಭಾಗವಹಿಸಲಿದ್ದಾರೆ.
ಸಂಸ ಸುರೇಶ್, ಸಹ ಪ್ರಾಧ್ಯಾಪಕರಾದ ಡಾ. ರುದ್ರೇಶ್ ಅದರಂಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿಯ ಕೆ.ಎನ್. ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿಗೆ ಕವಯಿತ್ರಿ, ಅನುವಾದಕಿ ಎಂ.ಆರ್.ಕಮಲ ಭಾಜನರಾಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

