Wednesday, February 4, 2026
Homeಸಾಧನೆ"ಸಿಪಿಐ ಶತಮಾನೋತ್ಸವ ಸಂಭ್ರಮದ ಜಾಥಾ"17 ರಂದು ದಾವಣಗೆರೆ ನಗರಕ್ಕೆ ಆಗಮನ.

“ಸಿಪಿಐ ಶತಮಾನೋತ್ಸವ ಸಂಭ್ರಮದ ಜಾಥಾ”17 ರಂದು ದಾವಣಗೆರೆ ನಗರಕ್ಕೆ ಆಗಮನ.

ದಾವಣಗೆರೆ – ದಿನಾಂಕ 17 ರಂದು ಸಿಪಿಐ ಶತಮಾನೋತ್ಸವ ಸಂಭ್ರಮದ ಜಾಥಾ ದಾವಣಗೆರೆ ಗೆ ಆಗಮಿಸುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ತಿಳಿಸಿದ್ದಾರೆ.
ಭಾರತ ಕಮ್ಯುನಿಸ್ಟ್ ಪಕ್ಷಕ್ಕೆ ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಜಾಥಾ ಕಳೆದ ಹದಿನೈದು ದಿನಗಳಿಂದಲೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ದಿನಾಂಕ 17 ರ ಬುಧವಾರದಂದು ದಾವಣಗೆರೆಗೆ ಆಗಮಿಸಲಿದೆ.
ಅಂದು ಬೆಳಗ್ಗೆ 10.30 ಕ್ಕೆ ಪಿಬಿ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯಿಂದ ಪಕ್ಷದ ಕಾರ್ಯಕರ್ತರು ಜಾಥಾವನ್ನು ಸ್ವಾಗತಿಸಿ ಬೈಕ್ ರ್ಯಾಲಿ ಮೂಲಕ ಪಿಬಿ ರಸ್ತೆ ಗಾಂಧಿ ಸರ್ಕಲ್, ಅಶೋಕ ರಸ್ತೆ ಮೂಲಕ ಜಯದೇವ ಸರ್ಕಲ್ ಗೆ ಆಗಮಿಸಿ ನಂತರ ಅಲ್ಲಿ ಬಹಿರಂಗ ಸಭೆ ನಡೆಸಲಾಗುವುದು.
ಬಹಿರಂಗ ಸಭೆಯಲ್ಲಿ ಜಾಥಾದ ನೇತೃತ್ವ ವಹಿಸಿ ಆಗಮಿಸುವ ಪಕ್ಷದ ರಾಜ್ಯ ಕಾರ್ಯದರ್ಶಿ ಕಾಂ ಸಾತಿ ಸುಂದರೇಶ್, ರಾಜ್ಯ ಸಹ ಕಾರ್ಯದರ್ಶಿ ಹೆಚ್ ಎಂ ಸಂತೋಷ್,ಪ್ರಗತಿಪರ ಚಿಂತಕರು ಮತ್ತು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕರಾದ ಎಬಿ ರಾಮಚಂದ್ರಪ್ಪ ಮತ್ತು ಪಕ್ಷದ ಜಿಲ್ಲಾ ಸಹಕಾರ್ಯದರ್ಶಿ ಕಾಂ ಹೆಚ್ ಜಿ ಉಮೇಶ್, ಟ್ರಸ್ಟ್ ಖಜಾಂಚಿ ಜಿ ಯಲ್ಲಪ್ಪ, ಮುಖಂಡರುಗಳಾದ ಕೆ ಜಿ ಶಿವಮೂರ್ತಿ, ಯರಗುಂಟೆ ಸುರೇಶ್, ಐರಣಿ ಚಂದ್ರು, ಸರೋಜಾ ಸೇರಿದಂತೆ ಇಫ್ಟಾ ಕಲಾವಿದರು, ಪಕ್ಷದ ಸದಸ್ಯರುಗಳು ಭಾಗವಹಿಸುವರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments