Friday, November 21, 2025
Homeಸ್ಮರಣೆ"ಒಂದು ನಾಡು, ಒಂದು ಭಾಷೆ, ಒಂದು ಕರ್ನಾಟಕ" ಎಂಬ ಘೋಷಣೆಯನ್ನು ಮೊಳಗಿಸಿ ಏಕೀಕರಣದ ಫಲವಾಗಿ ರಾಜ್ಯ...

“ಒಂದು ನಾಡು, ಒಂದು ಭಾಷೆ, ಒಂದು ಕರ್ನಾಟಕ” ಎಂಬ ಘೋಷಣೆಯನ್ನು ಮೊಳಗಿಸಿ ಏಕೀಕರಣದ ಫಲವಾಗಿ ರಾಜ್ಯ ಉದಯಿಸಿತು:ಸಚಿವ ಎಸ್ ಎಸ್.ಮಲ್ಲಿಕಾರ್ಜುನ

ದಾವಣಗೆರೆ ನ.01. ಕರ್ನಾಟಕ ನಿರ್ಮಾಣದ ಹಿಂದೆ ಶತಮಾನದ ಹೋರಾಟವಿದೆ. ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಭಾಷೆ ಆಧಾರದ ಮೇಲೆ 1956 ನವೆಂಬರ್ 1 ರಂದು ರಾಜ್ಯಪುನರ್ ರಚನೆ ಆಯೋಗದ ಶಿಫಾರಸಿನ ಮೇರೆಗೆ ಮೈಸೂರು (ಕರ್ನಾಟಕ) ರಾಜ್ಯ ಹುಟ್ಟಿಕೊಂಡಿತು. ಈ ದಿನವು ಕನ್ನಡಿಗರ ಆತ್ಮಸಮ್ಮಾನ, ಏಕತೆ ಹಾಗೂ ಗೌರವದ ದಿನವಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
 ನಗರದ ಜಿಲ್ಲಾಡಳಿತ ವತಿಯಿಂದ ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
 ಕನ್ನಡ ಭಾಷೆ ಮಾತನಾಡುವ ಪ್ರದೇಶಗಳಾದ ಮುಂಬೈ, ಮದ್ರಾಸ್, ಹೈದರಾಬಾದ್ ಮತ್ತು ಮೈಸೂರು ಸಂಸ್ಥಾನಗಳಲ್ಲಿ ಹರಡಿಕೊಂಡಿದ್ದ ನಾಡನ್ನು ಒಂದುಗೂಡಿಸಲು ಅಲೂರು ವೆಂಕಟರಾಯರು. ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪ್ಪ ಹಾಗೂ ಸಾವಿರಾರು ಕನ್ನಡಾಭಿಮಾನಿಗಳು “ಒಂದು ನಾಡು, ಒಂದು ಭಾಷೆ, ಒಂದು ಕರ್ನಾಟಕ” ಎಂಬ ಘೋಷಣೆಯನ್ನು ಮೊಳಗಿಸಿ ಏಕೀಕರಣದ ಫಲವಾಗಿ ರಾಜ್ಯ ಉದಯಿಸಿತು. ಇದರ ಫಲವಾಗಿ ಇಂದು ನಾವು 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.
  ರಾಜ್ಯಕ್ಕೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆ ಇದ್ದು 1200 ವರ್ಷಗಳಷ್ಟು ಪ್ರಾಚೀನ ಇತಿಹಾಸ ಹೊಂದಿದೆ. ಪಂಪ, ರನ್ನ, ಜನ್ನರಿಂದ ಹಿಡಿದು ಕುವೆಂಪು, ಬೇಂದ್ರೆ, ಗೋವಿಂದ ಪೈ, ಟಿ.ಪಿ. ಕೈಲಾಸಂ, ಕಾರಂತರಿಂದ ಚಂದ್ರಶೇಖರ ಕಂಬಾರ್ ತನಕ. ಬಸವಣ್ಣನ ಅನುಭವ ಮಂಟಪದಿಂದ ಹಿಡಿದು, ಕುವೆಂಪುವಿನ ವಿಶ್ವಮಾನವತೆಯ ಸಂದೇಶದವರೆಗೆ ನಮ್ಮ ನಾಡಿಗೆ ಹೆಮ್ಮೆ ತಂದಿವೆ. ಜೊತೆಗೆ ಸಂಗೀತದ ನಾಡು ಕೂಡ ಹೌದು. ತ್ಯಾಗರಾಜ, ಪುರಂದರ ದಾಸ, ಕನಕದಾಸರಿಂದ ಪ್ರಾರಂಭವಾದ ಸಂಪ್ರದಾಯದಿಂದ ಇಂದಿನ ಶಾಸ್ತ್ರೀಯ ಮತ್ತು ಜನಪದ ಸಂಗೀತದವರೆಗೆ ಎಲ್ಲೆಡೆ ಕನ್ನಡದ ಶಬ್ದ, ತಾಳ ಮತ್ತು ಭಾವ ಹರಿದಾಡುತ್ತಿದೆ ಎಂದರು.
 ಹೊಯ್ಸಳರ ಕಲೆ, ವಿಜಯನಗರ ಸಾಮ್ರಾಜ್ಯದ ವೈಭವ, ಶರಣರ ತತ್ವ, ಕಾವ್ಯ ಸಂಪ್ರದಾಯ, ಐಟಿ ತಂತ್ರಜ್ಞಾನ, ಎಲ್ಲವೂ ಒಂದೇ ನಾಡಿನಲ್ಲಿ ಒಂದಾಗಿವೆ. ಅಷ್ಟೇ ಅಲ್ಲದೇ ಕರ್ನಾಟಕ ವೈಭವ ಮತ್ತು ವೈವಿಧ್ಯತೆಯಲ್ಲಿಯು ಮುಂದಿದೆ. ಪ್ರಾಕೃತಿಕ ಸಂಪತ್ತು, ಸಾಂಸ್ಕೃತಿಕ ಪರಂಪರೆ ಮತ್ತು ಮಾನವ ಸಂಪನ್ಮೂಲದಿಂದ ಕೂಡಿದ ಶ್ರೀಮಂತ ರಾಜ್ಯ, ಬೆಂಗಳೂರು ಇಂದು ಭಾರತದ “ಸಿಲಿಕಾನ್ ವ್ಯಾಲಿ” ಎಂದು ಖ್ಯಾತಿ ಪಡೆದಿದೆ. ಐಟಿ, ಬಯೋಟೆಕ್, ಶಿಕ್ಷಣ, ಕೃಷಿ, ಕಲೆ, ಎಲ್ಲ ಕ್ಷೇತ್ರಗಳಲ್ಲಿಯೂ ಕರ್ನಾಟಕ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ ಎಂದು ಹೇಳಿದರು.
ಕರ್ನಾಟಕ ಅಭಿವೃದ್ಧಿಯ ಮಾರ್ಗದಲ್ಲಿ ಮುಂದಡಿಯಿಟ್ಟಿದೆ.  ಆದರೆ ಇನ್ನೂ ಅಭಿವೃದ್ಧಿ ಆಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ, ಆರೋಗ್ಯ, ಕೃಷಿ, ಕುಡಿಯುವ ನೀರು, ಯುವಕರಿಗೆ ಉದ್ಯೋಗ ದೊರೆಯುವಂತಾಗಬೇಕು. ಸರ್ವರಿಗೂ ಸಮಪಾಲು, ಸಮಬಾಳು ನೀಡಲು ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿಯೂ ಶಕ್ತಿ ತುಂಬಲಾಗಿದೆ .
 ನಮ್ಮ ಭಾμÉಯನ್ನು ಉಳಿಸಿಕೊಳ್ಳುವುದಲ್ಲದೆ, ತಂತ್ರಜ್ಞಾನ, ನವೋದ್ಯಮ ಮತ್ತು ಪರಿಸರ ಸಂರಕ್ಷಣೆಯ ಮೂಲಕ ಕರ್ನಾಟಕವನ್ನು ಇನ್ನಷ್ಟು ಅಭಿವೃದ್ಧಿಪಥದತ್ತ ಕೊಂಡೊಯ್ಯಬೇಕಾಗಿದೆ. ದಾವಣಗೆರೆ ನಗರಕ್ಕೆ ವಿವಿಧ ಐಟಿ, ಬಿಟಿ ಕಂಪನಿಗಳನ್ನು ಆಹ್ವಾನಿಸಲಾಗಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡುವ ಪ್ರಯತ್ನ ಭರರದಿಂದ ಸಾಗಿದ್ದು, ಮುಂದಿನ ದಿನಗಳಲ್ಲಿ ಸಾಕಾರಗೊಳ್ಳುವ ವಿಶ್ವಾಸವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆಕರ್ಷಕ ಪಥ ಸಂಚಲನ: 25 ವಿವಿಧ ತುಕಡಿಗಳು ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನದಲ್ಲಿ ಪ್ಲಟೂನ್ ಕಮಾಂಡರ್‍ನೊಂದಿಗೆ ಪಾಲ್ಗೊಂಡವು. ಮಹೇಶ್ ಪಾಟೀಲ್ ನೇತೃತ್ವದ ನಗರ ಉಪವಿಭಾಗ ಪೊಲೀಸ್ ತಂಡ ಸಚಿನ್ ಬಿರಾದಾರ್, ಗೃಹರಕ್ಷಕದಳ ಆರ್.ತಿಪ್ಪೇಸ್ವಾಮಿ, ಅರಣ್ಯ ರಕ್ಷಕ ದಳ ಕೃಷ್ಣಕುಮರ್, ಜಿಲ್ಲಾ ಅಗ್ನಿ ಶಾಮಕ ದಳ ಖಾಸಿಂಸಾಬ್, ಮಹಾನಗರಪಾಲಿಕೆ ತಂಡ ಅಜಯ್ ಕುಮಾರ್.ಆರ್.ಐ, ಡಿಆರ್‍ಎಂ ಅಭಿಷೇಕ್, ಎಆರ್‍ಜಿ ಲೋಕೇಶ್, ಜಿಎಫ್‍ಜಿಸಿ ಕಾಲೇಜ್ ಸಿದ್ದೇಶ್, ಎವಿಕೆ ಕಾಲೇಜು ಕು.ಮಾನ್ಯ, ಡಿಆರ್‍ಆರ್ ಪ್ರಮೋದ್ ಎಂ..ಬಿ, ಸೆಂಟ್ ಪೌಲ್ಸ್ ಗೈಡ್ ಟ್ರೂಪ್ ಸಾಚಿ ಪಿ.ಕೊಲ್ವಿತ್, ಭಾರತ್ ಸ್ಕೌಟ್ಸ್ & ಗೈಡ್ಸ್ ಡಿಸ್ಟ್ರಿಕ್ಟ್ ಟ್ರೂಪ್ ಗರ್ಲ್ ವೈಷ್ಣವಿ, ಜಿಲ್ಲಾ ಸ್ಕೌಟ್ಸ್ ತಂಡ ಸಿದ್ದೇಶ್ವರ ಸ್ಕೂಲ್ ಆನಗೋಡು ಹರ್ಷಿತ್, ಭಾರತ್ ಸೇವಾ ದಳ ಪಿ.ಎಂ ಶ್ರೀಆರ್‍ಎಂಎಸ್‍ಎ ಚಂದನಾ, ಎಸ್‍ಎಸ್‍ಎನ್‍ಪಿಎಸ್ ಸ್ಕೌಟ್ಸ್ ಶಾಲೆ ಜಿ.ಎಸ್ ತನುಷ್, ಎಸ್‍ಎಸ್‍ಎನ್‍ಪಿಎಸ್ ಶಾಲೆ ವೇದ ಹೆಚ್ ಎಂ, ತರಳಬಾಳು ಹೈಸ್ಕೂಲ್ ಸ್ಟೇಟ್ ವಂದನಾ, ತರಳಬಾಳು ಹೈಸ್ಕೂಲ್ ಸಿಬಿಎಸ್‍ಇ ಪ್ರೇರಣಾ, ಜೈನ್ ಪಬ್ಲಿಕ್ ಸ್ಕೂಲ್ ಸಾಯಿನೈನಾ, ಸಿದ್ದೇಶ್ವರ ಸ್ಕೂಲ್ ಆನಗೋಡು ಸೃಷ್ಠಿ, ರಾಷ್ಟೋತ್ತನ ಹೈಸ್ಕೂಲ್ ಜನತಾ ಕನ್ವರ್, ಸಿದ್ದಗಂಗಾ ಸ್ಕೂಲ್ ಮಹಮದ್ ಉನ್ನೀಸ್, ಸಿದ್ದಗಂಗಾ ಬಾಲಿಕಿಯರ ಪ್ರೈಮರಿ ಸ್ಕೂಲ್ ಕರುಣ.ಎ.ಎಸ್, ಡಿಎಆರ್‍ನ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡಗಳು ಭಾಗವಹಿಸಿದ್ದವು.
ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಗಣ್ಯರನ್ನು ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ತೊರಣಘಟ್ಟದ ಈಶ್ವರಾಚಾರ್ ಹರಿಕಥೆ ವಿದ್ವಾಂಸರು, ಹಾಗೂ ಎನ್ ನಿಂಗಪ್ಪ ಜಾನಪದ, ಚಟ್ಟಹಳ್ಳಿಯ ಎಸ್.ಪಿ ಚಂದ್ರಶೇಖರಪ್ಪ ಜಾನಪದ, ಹರಿಹರದ ಹೆಚ್.ಎಂ ಗೋಣಿಬಸಪ್ಪ ರಂಗಭೂಮಿ, ಹರಿಹರದ ಲಕ್ಷ್ಮಪ್ಪ ಕೊಕ್ಕನೂರು ಜಾನಪದ, ವಿನೋಬನಗರದ ಪಿ.ಚಂದ್ರಶೇಖರ ತಬಲವಾದನ, ದಾವಣಗೆರೆಯ ಕೆ.ಪಿ ಮಂಗಳಗೌರಿ ಸಂಗೀತ, ಪಾಂಡೋಮಟ್ಟಿಯ ಚಂದ್ರಮ್ಮ ಭಜನೆ, ಹೊನ್ನಾಳಿಯ ಡಾ.ಕೊಟ್ರೇಶ್ ಸಾಹಿತ್ಯ, ಚಿಕ್ಕಮಲ್ಲನಹೊಳೆಯ ಹನುಮಕ್ಕ ಜಾನಪದ, ಚನ್ನಗಿರಿಯ ಎಂ.ಯು ಚನ್ನಬಸಪ್ಪ ಸಾಹಿತ್ಯ, ದಾವಣಗೆರೆಯ ಎ ಸುರೇಗೌಡ ಹವ್ಯಾಸಿ ನಾಟಕ, ದಾವಣಗೆರೆಯ ದಾದಾಪೀರ್ ನವಿಲೇಹಾಳ್ ಶಿಕ್ಷಣ ಕ್ಷೇತ್ರ, ಯಲ್ಲಮ್ಮ ನಗರದ ಎಸ್.ಪ್ರೇಮ ನಾಟಕ, ಹರಿಹರ ಮಲ್ಲೇಶಪ್ಪ ಸಮಾಜ ಸೇವೆ, ಚಿಕ್ಕೂಲಿಕೆರೆ ಗ್ರಾಮದ ಕೆ.ಶಿವಲಿಂಗಪ್ಪ ಸಮಾಜ ಸೇವೆ, ದಾವಣಗೆರೆಯ ರಾಜಶೇಖರ.ವಿ.ಚಿ ಕನ್ನಡಪರ ಹೋರಾಟಗಾರರು, ದೇವರಾಜ್ ಅರಸ್ ಬಡಾವಣೆಯ ಎನ್ ಎಸ್ ಸುವರ್ಣ ಶಿವಮೂರ್ತಿ ಕನ್ನಡ ಪರ ಹೋರಾಟಗಾರರು, ದಾವಣಗೆರೆಯ ಪ್ರಜಾವಾಣಿಯ ಸ್ಥಾನಿಕ ಸಂಪಾದಕರಾದ ಸಿದ್ದಯ್ಯ ಹಿರೇಮಠ ಮಾಧ್ಯಮ, ಹರಿಹರದ ಕೆ.ವಿ ನಾಗರಾಜಚಾರಿ ಜಾನಪದ, ದಾವಣಗೆರೆ ವಿಜಯಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಸದಾನಂದ ಹೆಗಡೆ ಮಾಧ್ಯಮ, ಹರಿಹರದ ಇಲಿಯಾಸ್ ಅಹ್ಮದ್, ದಾವಣಗೆರೆಯ ಸೈಯದ್ ನಜೀರ್, ಜೆ.ಗಿರೀಶ್ ಕುಮಾರ್, ಜಿ.ಪ್ರಸನ್ನಕುಮಾರ್ ಮತ್ತು ದಯಾನಂದ ಬಿ.ಈ ಇವರುಗಳು ಕನ್ನಡಪರ ಹೋರಾಟಗಾರರು, ದಾವಣಗೆರೆಯ ವಿಜಯವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕರಾದ ನಾಗೇಂದ್ರಪ್ಪ ಮತ್ತು ಜನತಾವಾಣಿಯ ಹಿರಿಯ ವರದಿಗಾರರು ಮಂಜುಳ, ಹಾಗೂ ಭುವನೇಶ್ವರಿ ಪತ್ರಿಕೆಯ ಸಹಸಂಪಾದಕರಾದ ಎನ್.ಆರ್ ರವಿ, ಗ್ಯಾರಂಟಿ ನ್ಯೂಸ್ ಸುದ್ದಿವಾಹಿನಿಯ ಹಿರಿಯ ವರದಿಗಾರರಾದ ಮಲ್ಲಿಕಾರ್ಜುನ್ ಕೈದಾಳೆ, ದಾವಣಗೆರೆಯ ನ್ಯೂಸ್ ಫಸ್ಟ್ ಸುದ್ದಿವಾಹಿನಿಯ ಪಿ.ಎಸ್ ಲೋಕೇಶ್, ನಗರವಾಣಿಯ ಹಿರಿಯವರದಿಗಾರರಾದ ಎಸ್.ಎನ್ ಮಹೇಶ್ ಕಾಶೀಪುರ ಮಾಧ್ಯಮ, ತೋಳಹುಣಸೆಯ ಸುರೇಶ್ ರಾವ್.ಹೆಚ್, ಲಿಯಾಖತ್ ಅಲಿ, ಮಹಾಂತೇಶ್ ಬ್ರಹ್ಮ, ಪ್ರಶಾಂತ್.ಆರ್.ಟಿ, ಮಾಯಕೊಂಡ ಸುಧಾರಾಣಿ ಸಮಾಜಸೇವೆ, ದಾವಣಗೆರೆಯ ಕುಮಾರ್.ವೈ ಶಿಲ್ಪಕಲೆ, ಹಿರೇಕೊಗಲೂರು ಪತ್ರಕರ್ತರಾದ ಹೆಚ್ ಕುಮಾರ್, ದಾವಣಗೆರೆಯ ಶಾಂತ ಬಿ ವಿಜ್ಞಾನ, ಕಾರ್ತಿಕ್.ಸಿ.ಅಗಡಿ
ಕಣ್ಮನ ಸಳೆದ ಸಾಂಸ್ಕøತಿಕ ನೃತ್ಯ:  ನಿಜಲಿಂಗಪ್ಪ ಬಡಾವಣೆಯ ಗುರುಕುಲ ವಸತಿಯುತ ಶಾಲೆ, ನಿಜಲಿಂಗಪ್ಪ ಬಡಾವಣೆಯ ಏಜು ಏಷ್ಯ ಶಾಲೆ, ವಿನೋಬನಗರದ ಸೇಂಟ್ ಮೇರಿ ಶಾಲೆ, ಪಿ.ಜೆ ಬಡಾವಣೆಯ ಸೆಂಟ್ ಪೌಲ್ಸ್  ಶಾಲೆಯ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಕನ್ನಡ ಹಾಡುಗಳಿಗೆ ಹೆಜ್ಜೆ  ಹಾಕಿದರು.
  ಮೆರವಣಿಗೆ;  ರಾಜ್ಯೋತ್ಸವ ಅಂಗವಾಗಿ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ  ಅವರು, ಕನ್ನಡತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಕಲಾ ತಂಡಗಳೊಂದಿಗೆ ವಿವಿಧ ಸ್ತಬ್ದ ಚಿತ್ರಗಳೊಂದಿಗೆ ಮೆರವಣಿಗೆ ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿತು.
  ಆಕರ್ಷಕ ಪಥಸಂಚಲನದಲ್ಲಿ ಬಹುಮಾನ ಪಡೆದ ತಂಡಗಳು: ಪ್ರಥಮ ಡಿಎಆರ್.ತಂಡ, ದ್ವಿತೀಯ ಗೃಹ ರಕ್ಷಕ ದಳ ತಂಡ, ಅರಣ್ಯ ಇಲಾಖೆ ತಂಡ, ಎನ್ ಸಿ ಸಿ ತಂಡದ ವಿಭಾಗದಿಂದ  ಪ್ರಥಮ ಎ.ಆರ್.ಜಿ, ಕಾಲೇಜು ತಂಡ, ದ್ವಿತೀಯ ಎವಿಕೆ ಕಾಲೇಜು, ತೃತೀಯ ಜಿಎಫ್‍ಜಿಸಿ ಕಾಲೇಜು ತಂಡ ಮತ್ತು ಹೈಸ್ಕೂಲ್ ತಂಡಗಳ ವಿಭಾಗದಲ್ಲಿ ಪ್ರಥಮ ತರಳಬಾಳು ಶಾಲೆ, ದ್ವಿತೀಯ ಎಸ್‍ಎಸ್‍ಎನ್‍ಪಿಎಸ್ ಶಾಲೆ, ತೃತೀಯ ಭಾರತ ಸೇವಾದಳ ತಂಡ, ಬೆಸ್ಟ್ ಡ್ರೆಸ್ ವಿಭಾಗದಿಂದ ಪ್ರಥಮ ರಾಷ್ಟೋತ್ತನ ಶಾಲೆ, ದ್ವಿತೀಯ ಸಿದ್ದಗಂಗಾ ಶಾಲೆ, ತೃತೀಯ ಜೈನ್ ಶಾಲೆ ಮತ್ತು ಡಿಎಆರ್‍ನ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡಕ್ಕೆ ವಿಶೇಷವಾಗಿ ಕನ್ನಡ ನಾದಮೃತ ಪ್ರಶಸ್ತಿ  ಪಡೆದವು.
ಬಹುಮಾನ ಪಡೆದ ಸಾಂಸ್ಕøತಿಕ ನೃತ್ಯ ತಂಡಗಳು:  ಪ್ರಥಮ ನಿಜಲಿಂಗಪ್ಪ ಬಡಾವಣೆಯ ಗುರುಕುಲ ವಸತಿಯುತ ಶಾಲೆ, ದ್ವಿತೀಯ ಸೆಂಟ್ ಪಾಲ್ಸ್ ಶಾಲೆ, ತೃತೀಯ ಸೆಂಟ್ ಮೇರಿ ಶಾಲೆ ಬಹುಮಾನ ಪಡೆದವು.
 ಸಮಾರಂಭದಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಜಿ.ಪಂ ಸಿಇಒ ಗಿತ್ತೆ ಮಾಧವ್ ವಿಠ್ಠಲ್ ರಾವ್, ಎಸ್ಪಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ ಇನ್ನಿತರೆ ಗಣ್ಯರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments