ದಾವಣಗೆರೆ:ಕನ್ನಡ ಕಲಾರಸಿಕರ ಆರಾಧ್ಯದೈವ ಕಲಾಕುಸುಮ ಕನ್ನಡ ಚಲನಚಿತ್ರ ರಂಗದ ಮೇರುನಟ ಕರ್ನಾಟಕ ರತ್ನ ಡಾಕ್ಟರ್ ವಿಷ್ಣುವರ್ಧನ್ ರವರ ಅಭಿಮಾನಿಗಳ ಸಡಗರ ಸಂಭ್ರಮದ ದಿನ ಈ ದಿನ.
ದಾವಣಗೆರೆಯ ನಮ್ಮ ಜೈ ಕರುನಾಡ ವೇದಿಕೆಯ ಅಧ್ಯಕ್ಷರಾದ ಶ್ರೀ ಮಂಜುನಾಥಗೌಡ ರವರ ನಿರಂತರ ಪರಿಶ್ರಮ ಮತ್ತು ನಗರದ ಬಹುತೇಕ ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರದಿಂದಾಗಿ ನಗರದ ಕೇಂದ್ರ ಬಿಂಧು ಕೆ.ಎಸ್.ಆರ್.ಟಿ.ಸಿ.ಕೇಂದ್ರ ಬಸ್ ನಿಲ್ದಾಣದ ಹಿಂದೆ ಭಗತ್ ಸಿಂಗ್ ನಗರ,ಗಣೇಶ್ ಲೇಔಟ್,ನಿಟುವಳ್ಳಿಗಳ ಸಂಪರ್ಕಿಸುವ ಮುಖ್ಯ ವೃತ್ತಕ್ಕೆ ಪುಣ್ಯಸ್ಮರಣೆಯ ಸಂಧರ್ಭದಲ್ಲಿ” ಕರ್ನಾಟಕ ರತ್ನ ಡಾಕ್ಟರ್ ವಿಷ್ಣುವರ್ಧನ್ “ವೃತ್ತವೆಂದು ನಾಮಕರಣದ ಫಲಕ ಅನಾವರಣ ಕಾರ್ಯಕ್ರಮ ವನ್ನು ನಮ್ಮ ಜೈ ಕರುನಾಡ ವೇದಿಕೆಯು ಹಮ್ಮಿಕೊಂಡಿದೆ.
ಡಾಕ್ಟರ್ ವಿಷ್ಣುವರ್ಧನ್ ರವರ ಅಭಿಮಾನಿಗಳಿಗೆ ಇದು ಅತ್ಯಂತ ಸಂತಸದ ವಿಷಯ ಮತ್ತು ಕನ್ನಡ ನಟನಿಗೆ ಸರ್ಕಾರ ನೀಡಿದ ಗೌರವವಾಗಿದೆ.ಈ ಕಾರ್ಯಕ್ರಮವು ದಿನಾಂಕ:07-12-2025,ರಂದು ಬೆಳಿಗ್ಗೆ 10-30,ಕ್ಕೆ ಕನ್ನಡ ಪರ ಹೋರಾಟಗಾರರಾದ ಶ್ರೀ ನಾಗೇಂದ್ರ ಬಂಡೀಕರ್ ಅವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇಸುವರು ಹಾಗೂ ಮಹಾನಗರಪಾಲಿಕೆಯ ಸ್ಥಾಯಿಸಮಿತಿ ಅಧ್ಯಕ್ಷರೂ ಆಗಿದ್ದ ಅಂತರ್ ರಾಷ್ಟ್ರೀಯ ಕ್ರೀಡಾಪಟು ಜನಾನುರಾಗಿ ಶ್ರೀ ಜೆ.ಎನ್.ಶ್ರೀನಿವಾಸ್ ರವರು ಹಾಗೂ ಜಿಲ್ಲಾಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಸಂಸದೆ ಶ್ರೀಮತಿ ಡಾಕ್ಟರ್ ಪ್ರಭಮಲ್ಲಿಕಾರ್ಜುನ ದಂಪತಿಗಳ ಸುಪುತ್ರ ಯುವಕರ ಆಶಾಕಿರಣ ಸಮರ್ಥ್ ರವರು ನಾಮಫಲಕ ಅನಾವರಣಗೊಳಿಸುವರು ಸಾಯಂಕಾಲ 5-00ಕ್ಕೆ ಹನ್ನೊಂದು ಜನ ಕುಸ್ತಿಪಟುಗಳಿಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ ನಗರದ ಕಲಾವಿದರು,ಕ್ರೀಡಾಪಟುಗಳು ಸಾರ್ವಜನಿಕರು ಭಾಗವಹಿಸಲು ನಮ್ಮ ಜೈ ಕರುನಾಡ ವೇದಿಕೆಯ ಸರ್ವ ಸದಸ್ಯರು ಅಭಿಮಾನಿಗಳು ತಿಳಿಸಿದ್ದಾರೆ.

