Tuesday, February 3, 2026
Homeಸಾಹಿತ್ಯಗೀತಾಮಂಜು ಅವರ ಕಿರು "ಬೆಳಕಿನ ಸೂಜಿ ಸೇರಿದಂತೆ ಹಲವು ಕೃತಿಗೆ" ಕಸಾಪ ದತ್ತಿ ಪ್ರಶಸ್ತಿ.

ಗೀತಾಮಂಜು ಅವರ ಕಿರು “ಬೆಳಕಿನ ಸೂಜಿ ಸೇರಿದಂತೆ ಹಲವು ಕೃತಿಗೆ” ಕಸಾಪ ದತ್ತಿ ಪ್ರಶಸ್ತಿ.

ದಾವಣಗೆರೆ:2024ರಜನವರಿಯಿಂದ
ಡಿಸೆಂಬರ್ ಅಂತ್ಯದವರೆಗೂ ಪ್ರಕಟಗೊಂಡ ಕೃತಿಗಳನ್ನು ಒಟ್ಟು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆಮಾಡಿದೆ. ಈಪೈಕಿವಸುದೇವಭೂಪಾಲಂ ದತ್ತಿಯಲ್ಲಿ ನಾಲ್ಕು ಪುಸ್ತಕಗಳಿಗೆ ಮತ್ತು ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿಯಲ್ಲಿ ಎರಡು ಪುಸ್ತಕಗಳಿಗೂ ಬಹುಮಾನ ನೀಡಲಾಗಿದೆ.

ಲೇಖಕರಾದ ಡಾ.ಎಚ್.ಡಿ.ಜಯಪದ್ಮಕುಮಾರ್- ಆರಾಧ್ಯ ಪುಣ್ಯ ಸೂತ್ರ (ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ ದತ್ತಿ ಪ್ರಶಸ್ತಿ), ಡಾ.ಪದ್ಮರಾಜ ದಂಡಾವತಿ-ಜೈನಧರ್ಮ (ಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ದತ್ತಿ), ರವಿ ಸೋಮಣ್ಣ ಅಂಬೋಜಿ- ಮಾರ್ಗದಾಳು (ಡಾ.ಎಚ್.ಎಸ್. ಮದನಕೇಸರಿ ಮತ್ತು ಎಂ.ಪಿ.ಗುಣಮಾಲ ದತ್ತಿ), ಶಾರದಾ ವಿ. ಮೂರ್ತಿ- ಸಾಧನೆ (ಕೆ.ಎಸ್.ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ), ಸುನೀತಾ ರಾಜು ನೇಪಥೈಯರು (ಗೌರುಭಟ್ ದತ್ತಿ ಪ್ರಶಸ್ತಿ), ರೇಣುಕಾ ಕೋಡಗುಂಟೆ- ಚಿಗುರೊಡೆದ ಬೇರು (ಡಾ. ವೀಣಾ ಶಾಂತೇಶ್ವರ ದತ್ತಿ), ಫೌಝಿಯಾ ಸಲೀಂ- ಕುಚುಕು (ದಿ. ಗೌರಮ್ಮ ಹಾರ್ನಹಳ್ಳಿಕೆ.ಮಂಜಪ್ಪದತ್ತಿ), ಅನುಸೂಯಯತೀಶ್-ಕೆನೆವಾಲ ಕಡೆದು (ಮಲ್ಲಿಕಾ ಪ್ರಶಸ್ತಿ ದತ್ತಿ), ಡಾ.ಸುಜಾತಾ

ಚಲವಾದಿ- ಲಚಮವ್ವ (ಅಂತಾರಾಷ್ಟ್ರೀಯ ಮಹಿಳಾ ವರ್ಷದ ಮಹಿಳಾದತ್ತಿ), ಉಮಾ ಅನಂತ್- ಆರೋಗ್ಯ ಮಾಹಿತಿ ಸ್ವಸ್ಥ ಬದು ಕಿಗೆ ಸ್ಫೂರ್ತಿ (ಶಾರದಾ ರಾಮಲಿಂಗಪ್ಪ ದತ್ತಿ) ಆಯ್ಕೆಯಾಗಿವೆ. ಮೇ.ನಾ.ತರಂಗಿಣಿ- ಒಂದಿಷ್ಟೇ ಇಷ್ಟು ತಾವು (ಲಿಂ.ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ), ಲತಾ ಹೆಗಡೆ- ಕೃಶಕಾಯದ ಕರಕರೆ (ನೀಲಗಂಗಾ ದತ್ತಿ), ಗೀತಾಮಂಜು ಬೆಣ್ಣೆಹಳ್ಳಿ- ಕಿರು ಬೆಳಕಿನ ಸೂಜಿ (ಶಾರದಾ ಆರ್. ರಾವ್ ದತ್ತಿ), ಸ್ಥಿತಾ, ಅಮೃತರಾಜ್ ಸಂಪಾಜೆ- ಅವರೆ ಚಪ್ಪರದ ಹಾಡು (ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ), ಡಾ. ಎನ್.ಎಂ. ಗಿರಿಜಾಪತಿ- ಷಡಕ್ಷರಿ ದೇವನ ಶಬರಶಂಕರ ವಿಳಾಸಂ (ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ), ರೇಷ್ಮಾ ಭಟ್ – ಕಂದನ ಮುಡಿಪೂ (ಜಿ.ಪಿ. ರಾಜರತ್ನಂ ಸಂಸ್ಮರಣ ದತ್ತಿ), ಡಾ.ಎ.ರಘುರಾಂ- ನುಡಿ ಚಿಗುರು (ಡಾ. ಹಾ.ಮಾ. ನಾಯಕ ಸ್ಮಾರಕ ದತ್ತಿ ಪ್ರಶಸ್ತಿ), ಚನ್ನಪ್ಪ ಅಂಗಡಿ- ಇನ್ನು ಕೊಟ್ಟೆನಾದೊಡೆ (ಡಾ. ಜಿ. ಚಂದ್ರಮೌಳೇಶ್ವರ ದತ್ತಿ), ಡಾ. ಎನ್.ಮಧುಸೂದನ- ಸ್ವಾಸ್ಥ್ಯ ಮುಖಿ (ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ), ರಮ್ಯಾ ಶ್ರೀಹರಿ-ಅನಿಶ್ಚಿತತೆಯಿಂದ ಆನಂದದೆಡೆಗೆ (ದಿ. ಡಾ. ಎ.ಎಸ್.

ಧರಣೇಂದ್ರಯ್ಯ -ಮನೋವಿಜ್ಞಾನ ದತ್ತಿ) ಆಯ್ಕೆಗೊಂಡಿವೆ. ಡಾ.ಕೆ.ವಿ.ಮುದ್ದವೀರಪ್ಪ-ನೆಲಮೂಲಸಂಸ್ಕೃತಿ (ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ), ಕಾರ್ಗಲ್ ಭೋಗರಾಜ್- ಅನಾವರಣ (ಭಾರತಿ ಮೋಹನ ಕೋಟಿ ದತ್ತಿ), ಎಂ.ಸಂಪತ್ ಕುರ್ಮಾ- ನಿಕಷ (ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ), ಸದಾನಂದಬಳಗುಂಟೆ-ಭಾವೈಕ್ಯದನೆಲೆಗಳು (ಡಾ. ಎಚ್.ನರಸಿಂಹಯ್ಯ ದತ್ತಿ), ಹೇಮಂತ್ ಲಿಂಗಪ್ಪ-ಮತ್ತೆ ಮತ್ತೆ ಮಳೆ (ದಿವಂಗತ ಕೆ.ವಿ. ರತ್ನಮ್ಮ ದತ್ತಿ), ಪ್ರೊ. ದೊಡ್ಡಣ್ಣ ಭಜಂತ್ರಿ – ಜಾನಪದ ಸಂಭ್ರಮ (ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ), ಎಚ್.ಎಸ್. ಚಂಪಾವತಿ – ತಲ್ಲಣ (ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ), ಕೋರಗಲ್‌ ವಿರೂಪಾಕ್ಷಪ್ಪ- ಕಲ್ಯಾಣದ ಉಳಿವು (ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ), ಕೆ.ಎಸ್.ಸತೀಶ್ – ಭೈರ (ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸ ರಾವ್ ದತ್ತಿ), ಡಾ. ಟಿ. ಲಕ್ಷ್ಮಿನಾರಾಯಣ- ಸ್ವಾತಂತ್ರ್ಯ ಸಮರ ಕರುನಾಡು ಅಮರ (ದಿ. ಕಾಕೋಳು ಸರೋಜಮ್ಮ ದತ್ತಿ) ಕೃತಿಗಳು ಆಯ್ಕೆಯಾಗಿವೆ. ದಸ್ತಗೀರಸಾಬ್ ದಿನ್ನಿ-ಮಧುಬಟ್ಟಲಿನ ಗುಟುಕು (ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ), ಸವಿರಾಜ್

ಆನಂದೂರು- ಗಂಡಸರನ್ನು ಕೊಲ್ಲಿರಿ (ನಾ.ಕು. ಗಣೇಶ್ ದತ್ತಿ), ಮಂದಗದ್ದೆ ಚಂದ್ರಮೌಳಿ- ಮಕ್ಕಳಿಗಾಗಿ ಚಿಕ್ಕ ಕಥೆಗಳು (ದಿ. ಎಚ್. ಕರಿಯಣ್ಣ ದತ್ತಿ ಪ್ರಶಸ್ತಿ), ಶಂಕರದೇವರು ಹಿರೇಮಠ ನಾವು ಭಾರತೀಯರು ವೀರ ಕನ್ನಡಿಗರು (ಪಳಕಳ ಸೀತಾರಾಮಭಟ್ಟದತ್ತಿ ಪ್ರಶಸ್ತಿ), ಅಕ್ಟರ್‌ಸಿ. ಕಾಲಿಮಿರ್ಚಿ-ಎಸ್ಕಲೇರ್ಟ(‘ಸಿಸು’ ಸಂಗಮೇಶ ದತ್ತಿ ಪ್ರಶಸ್ತಿ), ಪ್ರೊ. ಎಂ.ಎಸ್. ರಘುನಾಥ್- ಚೆಲುವಿನ ಅನಾ ವರಣ ( ದಿ. ಪದ್ಮ ಆರ್. ಸ್ಮರಣಾರ್ಥ ದತ್ತಿ ಪ್ರಶಸ್ತಿ), ಕಪಿಲ ಪಿ. ಹುಮನಾಬಾದೆ- ಬಣಮಿ (ಜಯಲಕ್ಷ್ಮಿ ಮತ್ತು ಬಾಪು ರಾಮಣ್ಣ ದತ್ತಿ), ಲಕ್ಷ್ಮಣ ಶರೆಗಾರ- ತಿಥಿಯ ತುದಿಗೆ ಬೆಂಕಿಯ ಉಗುಳು ( ಹೇಮರಾಜ್ ಕುಶಾಲನಗರದತ್ತಿ).ಶ್ರೀನಿವಾಸಜೋಕಟ್ಟೆ-ಅದೆಲ್ಲಾ ಬಿಟ್ಟು(ಕೆ.ವಾಸುದೇವಾಚಾರ್‌ದತ್ತಿ) ಅನಿಲಕುಮಾರಗುನ್ನಾಪೂರ-ಸರ್ವೆ ನಂಬರ್-97 (ಬೋರಮ್ಮ ಗೋವಿಂದಪ್ಪ ದತ್ತಿ), ಭವ್ಯ ಕಬ್ಬಳಿ- ದೇವರ ತೇರಿಗೂ ಗಾಲಿಗಳು ಬೇಕು (ಸುಮನ್ ಸೋಮ

ಶೇಖರ್‌ಸೋಮವಾರಪೇಟೆ ದತ್ತಿ ಪ್ರಶಸ್ತಿ) ಕೃತಿ ಆಯ್ಕೆಗೊಂಡಿವೆ. ಎ. ಇರಾಜ ವೃಷಭ- ನನಸಾಯಿತು ಕನಸು (ಡಾ. ಆರ್.ಜೆ. ಗಲಗಲಿ ದತ್ತಿ ಪ್ರಶಸ್ತಿ), ಅನಂತ ಕುಣಿಗಲ್- ಸಿಗ್ನಲ್ ಜಂಪ್ (ಪ್ರಕಾಶಕ ಆರ್. ಎನ್. ಹಬ್ಬು ದತ್ತಿ), ಬಸವರಾಜ ಕುಂಬಾರ-ಊರತುಂಬಾ ಉಸಾಬರಿ..! (ಪದ್ಯ) ಮತ್ತು ಡಾ. ನೀ.ಗೂ. ರಮೇಶ್- ಗಾಂಧೀ ಮರ (ಗದ್ಯ) (ರತ್ನಾಕರವರ್ಣಿ-ಮುದ್ದಣ-

ಅನಾಮಿಕ ದತ್ತಿ), ಡಾ. ಶೈಲೇಶ್ ಕುರ್ಮಾ-ಸುಪ್ತ ಸಾಗರದಾಚೆ ( ಡಾ.ರಮಾನಂದ ಮತ್ತು ಶಾಂತಕುಮಾರಿ ದತ್ತಿ), ದೀಪಕ ಬಿಳ್ಳೂರ-ದೀಪಗಳು ಬೆಳಕಿನತ್ತ ಪಯಣ (ಪ್ರೊ.ಡಿ.ಸಿ. ಅನಂತಸ್ವಾಮಿ ದತ್ತಿ), ರವಿಕುಮಾರ್‌ಹ ಅವು ಅಂಗೇ..! (ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿ), ಈರಣ್ಣ ಬೆಂಗಾಲಿ-ಅಮರ ಚಿಂತನೆ (ಜಿ.ಆರ್. ರೇವಯ್ಯ ದತ್ತಿ), ಸುಕನ್ಯಾ ಕಳಸ-ಮಾರ್ಜಾಲ ಮೋಹಿನಿಯರು (ದಿ.ಡಿ.ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ), ನಳಿನಿಟಿ.ಭೀಮಪ್ಪ-ಐಸ್ ಪೈಸ್(ಕುಂಬಾಸ ಪ್ರಶಸ್ತಿದತ್ತಿ).ಡಾ.ಬಿ.ಆರ್.ಹಿರೇಮಠ-ಬುದ್ಧಬಸವ ಅಂಬೇಡ್ಕರ್ (ಗಂಗಮ್ಮ ಮತ್ತು ಟಿ. ಶಿವಣ್ಣ ದತ್ತಿ) ಕೃತಿಗಳು ಆಯ್ಕೆಯಾಗಿವೆ. ವಸುದೇವ ಭೂಪಾಲಂದತ್ತಿ ಪ್ರಶಸ್ತಿಗೆ ಗುರುಪ್ರಸಾದ್ ಂಟಲಗೆರೆ-ಅಟ್ರಾಸಿಟಿ (ಕಾದಂಬರಿ), ಟಿ.ಎಂ. ರಮೇಶ- ಡೆಡ್ ಸ್ಟಾಕ್ (ಸಣ್ಣಕಥಾ ಸಂಕಲನ), ಎಸ್.ಎಸ್. ಸಾತಿಹಾಳ- ಅಜ್ಜಿಯ ಕೌದಿ (ಮಕ್ಕಳ ಸಾಹಿತ್ಯ ಕೃತಿ), ಡಾ.ಬಿ.ಸಿ. ನಾಗೇಂದ್ರ ಕುರ್ಮಾ-

ಅನುಸಂಧಾನ (ವೈಚಾರಿಕ ಲೇಖನಗಳ ಕೃತಿ) ಕೃತಿ ಆಯ್ಕೆಯಾಗಿವೆ. ‘ಪಿ. ಶಾಂತಿಲಾಲ್ ದತ್ತಿ ಪ್ರಶಸ್ತಿ’ ಹಾಗೂ ‘ಅಸುಂಡಿ ಹುದ್ದಾರ್ ಕೃಷ್ಣರಾವ್ ದತ್ತಿ ಪ್ರಶಸ್ತಿ ‘ ಆಯ್ಕೆಗೆ ಯಾವುದೇ ಪುಸ್ತಕಗಳು ಬಂದಿಲ್ಲ. ಆದ್ದರಿಂದ ಎರಡೂ ಪ್ರಶಸ್ತಿಗಳನ್ನು ಆಯ್ಕೆಗೆ ಪರಿಗಣಿಸಿರುವುದಿಲ್ಲ.(ಶ್ರೀಮತಿ ರುದ್ರಮ್ಮ)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments