ಬಿಜಾಪುರ ದರ್ಬಾರ್ ಗ್ರೌಂಡಿನಲ್ಲಿ ಏಪ್ರಿಲ್ 10 ರಿಂದ 14ರ ವರೆಗೆ ನಡೆಯುವ ಐದು ದಿನ ಬಿಬಿಬಿಬಿ ಪುಸ್ತಕ ಮೇಳದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದ ನಡಾವಳಿಗಳು
ಬಿಜಾಪುರ ಮೇ ಸಾಹಿತ್ಯ ಮೇಳ ಬಳಗವು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಏಪ್ರಿಲ್ 10 ರಿಂದ 14ರ ವರೆಗೆ ನಡೆಯುವ ನಡೆಸಲು ಉದ್ದೇಶಿಸಿರುವ “ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ”ದ ಮೂರನೆಯ ಪೂರ್ವಬಾವಿ ಸಭೆಯು ಭಾನುವಾರ, 01-03-2026 ರಂದು ವಿಜಾಪುರ ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ನಡೆದು ಮೇಳದ ರೂಪರೇಷೆ ಕುರಿತು ಚರ್ಚಿಸಲಾಯಿತು.
ಮೊದಲಿಗೆ ಎಲ್ಲರಿಗೂ ಸ್ವಾಗತ ಕೋರಿದ ಅನಿಲ ಹೊಸಮನಿ ಅವರು, ಏಪ್ರಿಲ್ 10 ರಿಂದ 14ರ ವರೆಗೆ ನಡೆಯುವ ಪುಸ್ತಕಮೇಳಕ್ಕೆ ನಗರಮಧ್ಯದ ದರ್ಬಾರ್ ಹೈಸ್ಕೂಲ್ ಮೈದಾನವನ್ನು ಉಚಿತವಾಗಿ ಒದಗಿಸಲು ಆಡಳಿತ ಮಂಡಳಿ ಒಪ್ಪಿಕೊಂಡಿದೆ ಎಂದು ಸಭೆಗೆ ತಿಳಿಸಿದರು. ಅದಕ್ಕಾಗಿ ಪತ್ರಕರ್ತ ಯುಸುಫ್ ನೇವಾರ ಅವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಹಾಗೆಯೇ ಹಿರಿಯ ಪತ್ರಕರ್ತ ಗೋಪಾಲ ನಾಯಕ ಕೂಡ ಶಿಫಾರಸು ಮಾಡಿರುವುದನ್ನು ಸ್ಮರಿಸಿದರು.
ಮುಖ್ಯವಾಗಿ ಐದು ದಿನಗಳ ವರೆಗೆ ಪುಸ್ತಕ ಮೇಳದ ಕಾರ್ಯಕ್ರಮ ಹೇಗಿರಬೇಕು ಎಂಬ ಬಗ್ಗೆ ಸಭೆಯಲ್ಲಿ ಭಾಗವಹಿಸಿದ ಸಂಗಾತಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಮೇಳದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಮತ್ತು ವ್ಯಾಪಕ ಪ್ರಚಾರ ಮಾಡಿದರೆ ಜನ ಭಾಗವಹಿಸುತ್ತಾರೆ ಎಂದು ನಾಗರಾಜ ಲಂಬು, ಸುರೇಶ ಬಿಜಾಪುರ, ರಾಜೇಶ ತೊರವಿ ಹೇಳಿದರಲ್ಲದೆ, ತಾವು ಎಲ್ಲಾ ತಾಲೂಕುಗಳಲ್ಲಿ ಸಂಚರಿಸಿ ಪ್ರಚಾರ ಮಾಡುವ ಜವಾಬ್ದಾರಿ ವಹಿಸಿಕೊಂಡರು. ಪುಸ್ತಕ ಮೇಳಕ್ಕೆ 50 ಸಾವಿರದಿಂದ ಒಂದು ಲಕ್ಷ ಜನ ವಿದ್ಯಾರ್ಥಿ ಯುವಜನ ಮತ್ತು ಸಾರ್ವಜನಿಕರು ಬಂದುಹೋಗುವಷ್ಟು ಪ್ರಚಾರ ಮಾಡುವ ವ್ಯವಸ್ಥೆ ಮತ್ತು ತಯಾರಿ ಆಗಬೇಕೆಂದು ನಿರ್ಧಾರ ಮಾಡಲಾಯಿತು
ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ ಅವರು, ಐದು ದಿನಗಳ ಪುಸ್ತಕ ಮೇಳದ ಜೊತೆಗೇ ಏನೇನು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬ ಕುರಿತು ಸಲಹೆ ನೀಡಿದರು.
ಅಂತಿಮವಾಗಿ ಕೆಳಗಿನಂತೆ ಕಾರ್ಯಕ್ರಮಗಳು ಇರಬೇಕೆಂದು ತೀರ್ಮಾನಿಸಲಾಯಿತು:
ಏಪ್ರಿಲ್ 10-
- ಪುಸ್ತಕ ಮೇಳದ ಉದ್ಘಾಟನೆ.
- ಉದ್ಘಾಟನೆಗೆ ಹೊರರಾಜ್ಯದಿಂದ ಒಬ್ಬರು ಮತ್ತು ನಮ್ಮ ರಾಜ್ಯದಿಂದ ಇಬ್ಬರು ಅಥವಾ ಮೂರು ಲೇಖಕರನ್ನು ಆಮಂತ್ರಿಸುವುದು. ಹೋರಾಟಗಾರರನ್ನು, ಜಿಲ್ಲೆಯ ಜನಸಂಘಟನೆಗಳ ನಾಯಕರನ್ನು ಆಹ್ವಾನಿಸುವ ನಿರ್ಧಾರಕ್ಕೆ ಬರಲಾಯಿತು.
- ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ ಸಂಸ್ಥಾಪಕ ಸದಸ್ಯರು ಮತ್ತು ಕ್ರಾಂತಿಕಾರಿ ಲೇಖಕರಾದ ಜೆ.ವಿ.ಪವಾರ, .ಮತ್ತು ಆಂಧ್ರಪ್ರದೇಶದ ಪ್ರೊ. ಕಾಂಚ ಐಲಯ್ಯ ಹೆಸರುಗಳು ಪ್ರಸ್ತಾಪಕ್ಕೆ ಬಂದವು.
- ಕರ್ನಾಟಕದಿಂದ ಬಂಜಗೆರೆ ಜಯಪ್ರಕಾಶ, ಅಗ್ರಹಾರ ಕೃಷ್ಣಮೂರ್ತಿ, ರಹಮತ ತರಿಕೆರೆ, ಎಚ್.ಎಸ್. ಅನುಪಮಾ, ಕೆ.ಪಿ.ಅಶ್ವಿನಿ, ವಸುಂಧರಾ ಭೂಪತಿ ಅವರ ಹೆಸರುಗಳು ಪ್ರಸ್ತಾಪಕ್ಕೆ ಬಂದವು. ರಾಜ್ಯದ ಪ್ರಕಾಶಕರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸುವ ಪ್ರಸ್ತಾಪ ಕೂಡ ಸಭೆಯ ಮುಂದೆ ಬಂದಿತು.
- ಜಿಲ್ಲೆಯ ಕನಿಷ್ಠ 100 ಜನ ಪ್ರಗತಿಪರ ಲೇಖಕರನ್ನು ಗುರುತಿಸಿ ಅವರೊಂದಿಗೆ ಡಾ. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಪುಸ್ತಕ ಮೇಳ ಸ್ಥಳದ ವರೆಗೆ (ದರ್ಬಾರ್ ಹೈಸ್ಕೂಲ್ ಮೈದಾನ) ಬರುವುದು. ಮೆರವಣಿಗೆಗೆ ಚಾಲನೆ ನೀಡಲು ಐವರು ವಿಶೇಷ ಅತಿಥಿಗಳನ್ನು ಆಹ್ವಾನಿಸುವುದು. ಲೇಖಕರನ್ನು ಗುರುತಿಸಲು ಜವಾಬ್ದಾರಿಯನ್ನು ದಾಕ್ಷಾಯಣಿ ಹುಡೇದ, ದಾನೇಶ ಅವಟಿ ಅವರು ಇರುವ ತಂಡಕ್ಕೆ ವಹಿಸಿಕೊಡಲಾಯಿತು.
- ಈ ಮೆರವಣಿಗೆಯನ್ನು ಉದ್ಘಾಟಿಸಲು ರಂಜಾನ್ ದರ್ಗಾ, ಸೋಮಲಿಂಗ ಗೆಣ್ಣೂರ, ಅರ್ಜುನ ಗೊಳಸಂಗಿ, ಜೆ.ಎಸ್. ಪಾಟೀಲ, ಮೀನಾಕ್ಷಿ ಬಾಳಿ, ಪರಶುರಾಮ ಶಿವಶರಣ, ಸುಜಾತಾ ಚಲವಾದಿ, ಮಹಾವೀರ ಬೋರಣ್ಣವರ, ಶಿವಾಜಿ ಮೋರೆ, ಶೇಷರಾವ ಮಾನೆ, ಬಿ.ಆರ್. ಬನಸೋಡೆ, ಗಣೇಶ ಕಾಂಬಳೆ ಹೆಸರುಗಳು ಪ್ರಸ್ತಾಪಕ್ಕೆ ಬಂದವು.
ಏಪ್ರಿಲ್ 11-
- ಮಹಾತ್ಮಾ ಫುಲೆ ಜನ್ಮದಿನದ ನಿಮಿತ್ಯವಾಗಿ 100 ಜನ ಸರಕಾರಿ ಶಾಲೆಗಳ ಶಿಕ್ಷಕ ದಂಪತಿಗಳನ್ನು ಗುರುತಿಸಿ, ಅವರನ್ನು ಸಾವಿತ್ರಿಬಾಯಿ ಫುಲೆ ಮಾರ್ಗದಿಂದ ಪುಸ್ತಕಮೇಳ ಸ್ಥಳಕ್ಕೆ ಕರೆತಂದು ಗೌರವಿಸುವುದು ಮತ್ತು ಫುಲೆ ದಂಪತಿಗಳ ಕಾರ್ಯಗಳ ಬಗ್ಗೆ ಸಂವಾದ ಏರ್ಪಡಿರುವುದು. ಮೆರವಣಿಗೆ ಚಾಲನೆಗೆ ಐವರು ಹಿರಿಯ ಹೋರಾಟಗಾರ್ತಯರನ್ನು ಲೇಖಕರನ್ನು ಗುರುತಿಸುವುದು.
- ಶಿಕ್ಷಕ ದಂಪತಿಗಳನ್ನು ಗುರುತಿಸುವ ಜವಾಬ್ದಾರಿಯನ್ನು ದಾಕ್ಷಾಯಿಣಿ ಹುಡೇದ, ದಾಕ್ಷಾಯಣಿ ಬಿರಾದಾರ ಮತ್ತು ಬಿ.ಎಚ್. ನಾಡಗಿರಿ ಅವರಿಗೆ ವಹಿಸಲಾಯಿತು. ಅವರು ಒಂದು ತಂಡ ರಚಿಸಿಕೊಳ್ಳಲು ಸೂಚನೆ ನೀಡಲಾಯಿತು
ಏಪ್ರಿಲ್ 12-
- ಬಸವತತ್ವಗಳ ಪರಿಪಾಲಕರಾದ 100 ಜನರನ್ನು ಗುರುತಿಸಿ, ಅವರನ್ನು ಬಸವಾದಿ ಶರಣರ ವಚನದ ಕಟ್ಟುಗಳೊಂದಿಗೆ ಬಸವೇಶ್ವರ ವೃತ್ತದಿಂದ ಪುಸ್ತಕಮೇಳ ಸ್ಥಳಕ್ಕೆ ಕರೆತರುವುದು. ಈ ಶರಣ ಮೇಳದ ಚಾಲನೆಗೆ ಐವರು ಹಿರಿಯ ಬಸವ ತತ್ವದ ಲೇಖಕರನ್ನು, ಬಸವ ತತ್ವದ ಪ್ರಚಾರಕರನ್ನು, ಸ್ಥಳೀಯ ಸ್ವಾಮಿಗಳನ್ನು ಗುರುತಿಸುವುದು
- ಇದರ ಜವಾಬ್ದಾರಿಯನ್ನು ಸಿ.ಬಿ. ಪಾಟೀಲ, ದಾನೇಶ ಅವಟಿ, ಸಿದ್ರಾಮ ಬಿರಾದಾರ ಅವರಿಗೆ ವಹಿಸಲಾಯಿತು.
ಏಪ್ರಿಲ್ 13-
- ದಲಿತರ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ಕಾಕಾ ಕಾರಖಾನೀಸ್ ಸ್ಮರಣಾರ್ಥವಾಗಿ ಅವರ ಬೋರ್ಡಿಂಗ್ ನಲ್ಲಿ ಓದಿದವರು ಅಂಥವರ ಕುಟುಂಬದವರನ್ನು ಗುರುತಿಸಿ ಅವರನ್ನು ಕಾಕಾ ಕಾರಖಾನೀಸ್ ಅವರ ಮನೆಯಿಂದ ಪುಸ್ತಕಮೇಳ ಸ್ಥಳಕ್ಕೆ ಮೆರವಣಿಗೆಯಲ್ಲಿ ಕರೆತರುವುದು. ಮತ್ತು ಪುಸ್ತಕ ಮೇಳದಲ್ಲಿ ಕಾಕಾ ಕಾರಖಾನೀಸ್ ಅವರ ಕಾರ್ಯಗಳನ್ನು ಸ್ಮರಿಸುವ ಸಂವಾದವನ್ನು ಏರ್ಪಡಿಸುವುದು. ಮೆರವಣಿಗೆಗೆ ಚಾಲನೆ ನೀಡಲು ಕಾಕಾ ಕಾರಖಾನೀಸ್ ರ ತತ್ವದಲ್ಲಿ ನಂಬಿಕೆ ಇರುವ ಹಿರಿಯರನ್ನು, ಅವರ ಶಾಲೆಗಳಲ್ಲಿ ಓದಿದ ಸಾಮಾಜಿಕ ಕಾಳಜಿ ಉಳ್ಳವರನ್ನು ಐವರು ಜನರನ್ನು ಗುರುತಿಸುವುದು
- ಇದರ ಜವಾಬ್ದಾರಿಯನ್ನು ಬಿ.ಆರ್. ಬನಸೋಡೆ, ದಾಕ್ಷಾಯಿಣಿ ಹುಡೇದ, ಸುರೇಶ ಬಿಜಾಪುರ ಅವರಿಗೆ ವಹಿಸಲಾಯಿತು.
ಏಪ್ರಿಲ್ 14-
- ಡಾ. ಅಂಬೇಡ್ಕರ್ ಜಯಂತಿ.
- ಶಾಲೆಗಳಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ಓದುವುದನ್ನು ಕಡ್ಡಾಯ ಮಾಡಲಾಗಿದ್ದು, ಹಾಗೆ ಸಂವಿಧಾನ ಪ್ರಸ್ತಾವನೆಯನ್ನು ಕಂಠಪಾಠ ಮಾಡಿರುವ 100 ಜನ ಸರಕಾರಿ ಶಾಲೆಗಳಿಂದ ನೂರು ವಿದ್ಯಾರ್ಥಿಗಳನ್ನು ಮತ್ತು ಒಬ್ಬ ವಿದ್ಯಾರ್ಥಿಯ ಜೊತೆಗೆ ಒಬ್ಬ ಶಿಕ್ಷಕರನ್ನು, ಪಾಲಕರನ್ನು ಗುರುತಿಸಿ, ಅವರನ್ನು ಸಂವಿಧಾನದ ಪ್ರಸ್ತಾವನೆಯ ಫಲಕಗಳೊಂದಿಗೆ ಡಾ. ಅಂಬೇಡ್ಕರ್ ವೃತ್ತದಿಂದ ಪುಸ್ತಕಮೇಳ ಸ್ಥಳಕ್ಕೆ ಮೆರವಣಿಗೆಯಲ್ಲಿ ಕರೆತರುವುದು. ಈ ಮೆರವಣಿಗೆಯ ಚಾಲನೆಗೆ ಅಂಬೇಡ್ಕರ್ ತಾತ್ವಿಕವಾದಿಗಳನ್ನು ಗುರುತಿಸುವುದು
- ಇದರ ಜವಾಬ್ದಾರಿಯನ್ನು ಬಿ.ಎಚ್. ನಾಡಗಿರಿ, ಅನಿಲ ಹೊಸಮನಿ, ದಾಕ್ಷಾಯಿಣಿ ಬಿರಾದಾರ ಅವರಿಗೆ ವಹಿಸಲಾಯಿತು.
ಏಪ್ರಿಲ್ 11 ರಿಂದ 14 ರವರೆಗೆ ಪ್ರತಿದಿನ ಸಂಜೆ 4 ಗಂಟೆಯಿಂದ 7. 30 ಗಂಟೆಯ ವರೆಗೆ
- ನಾಲ್ಕು ಜನ ಲೇಖರಿಂದ ಸಂವಾದ ಗೋಷ್ಠಿ. (ಇವರಲ್ಲಿ ಇಬ್ಬರು ಹೊರಜಿಲ್ಲೆಯವರು, ಇಬ್ಬರು ಸ್ಥಳೀಯರು)
- 7 ಜನ ಕವಿಗಳಿಂದ ಕವಿಗೋಷ್ಠಿ. (ಇವರಲ್ಲಿ ನಾಲ್ಕು ಜನ ಹೊರಗಿನವರು, ಐದು ಜನ ಸ್ಥಳೀಯ ಜಿಲ್ಲೆಯವರು), ಕಥಾಗೋಷ್ಠಿ, ಕಾದಂಬರಿ, ಸಾಮಾಜಿಕ ಸಂಗತಿಗಳ ಲೇಖಕರು, ಸಂಶೋದಕರ ಗೋಷ್ಠಿ. ಒಂದೊಂದು ದಿನ ಒಂದು ಏರ್ಪಡಿಸುವುದು..
- ಐದು ದಿನ ಪ್ರತಿ ದಿನ ಐದು ಜನ ವಿದ್ಯಾರ್ಥಿಗಳಿಂದ (ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ಮತ್ತು ಸಂಶೋಧನಾ ವಿದ್ಯಾರ್ಥಿಗಳು)”ನನ್ನ ನೆಚ್ಚಿನ ಪುಸ್ತಕ” ಬಗ್ಗೆ ಮಾತಾಡುವುದು.
- ಇದರ ಜವಾಬ್ದಾರಿಯನ್ನು ಡಾ. ಓಂಕಾರ ಕಾಕಡೆ, ಡಾ. ನಾರಾಯಣ ಪವಾರ, ಮಲ್ಲಿಕಾರ್ಜುನ ಗದ್ದನಕೇರಿ, ಡಾ. ಕುಶಾಲ ಬರಗೂರ ಅವರಿಗೆ ವಹಿಸಲಾಯಿತು.
- ಪ್ರತಿ ದಿನದಂತೆ ಐದು ದಿನ ಇಬ್ಬರು ಪತ್ರಕರ್ತರಿಂದ ಪತ್ರಕರ್ತನ ಸಾಮಾಜಿಕ ಜವಾಬ್ದಾರಿ ಅನುಭವಗಳನ್ನು ಹಂಚಿಕೊಳ್ಳುವುದು
- ಪುಸ್ತಕ ಮೇಳಕ್ಕೆ ಬಂದು ಅತಿಹೆಚ್ಚು ಪುಸ್ತಕ ಪಟ್ಟಿ ತಯಾರಿಸುವ ಹತ್ತು ಪುಸ್ತಕಗಳ ಬಗ್ಗೆ ಪುಟ್ಟ ನೋಟ್ ಬರೆದುಕೊಡುವ 25 ವಿದ್ಯಾರ್ಥಿಗಳನ್ನು ಗುರುತಿಸಿ ಪುಸ್ತಕ ಬಹುಮಾನ ಕೊಟ್ಟು ಗೌರವಿಸುವುದು
- ಐದೂ ದಿನಗಳ ಸಂಜೆ 7-30 ರಿಂದ 9-00 ಗಂಟೆಯ ವರೆಗೆ ಸ್ಥಳೀಯ ಕಲಾವಿದರಿಂದಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವುದು. ಅದರ ಜವಾಬ್ದಾರಿಯನ್ನು ಸುರೇಶ ಬಿಜಾಪುರ, ಅನಿಲ ಹೊಸಮನಿ ಅವರಿಗೆ ವಹಿಸಲಾಯಿತು.
- ಪುಸ್ತಕ ಮೇಳಕ್ಕೆ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡುವುದಕ್ಕಾಗಿ ಎಲ್ಲಾ ಡಿಗ್ರಿ ಕಾಲೇಜುಗಳು, ಮಹಿಳಾ ವಿವಿ, ರಾಣಿ ಚೆನ್ನಮ್ಮ ವಿವಿ ಪಿ.ಜಿ. ಸೆಂಟರ್, ಕಾನೂನು ಕಾಲೇಜು, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜುಗಳನ್ನು, ಹಾಸ್ಟೇಲುಗಳನ್ನು ಸಂಪರ್ಕಿಸುವುದು. ಅದರ ಜವಾಬ್ದಾರಿಯನ್ನು ಸುರೇಶ ಬಿಜಾಪುರ, ಬೋಗೇಶ ಸೋಲಾಪುರ, ವಿನೋದ ಖೇಡ, ಕಾವೇರಿ ರಜಪೂತ, ಅವರಿಗೆ ವಹಿಸಲಾಯಿತು.
- ಅನಿಲ ಹೊಸಮನಿ, ಬಿ.ಆರ್. ಬನಸೋಡೆ, ದಾಕ್ಷಾಯಿಣಿ ಹುಡೇದ, ಮಲ್ಲಿಕಾರ್ಜುನ ಗದ್ದನಕೇರಿ, ಚೆನ್ನು ಕಟ್ಟಿಮನಿ, ಮಿಲನಕುಮಾರ ನಾಮದಾರ, ಸುಭಾಸ ಹೊನ್ನಕಂಟಿ ಉಸ್ತುವಾರಿ ನೋಡಿಕೊಳ್ಳಬೇಕು.
- ಪುಸ್ತಕ ಮೇಳದಲ್ಲಿ ಭಾಗವಹಿಸುವ ಪ್ರಕಾಶಕರಿಗೆ ನಿತ್ಯ ಊಟದ ವ್ಯವಸ್ಥೆ ಮತ್ತು ಸಾಮಾನ್ಯ ವಸತಿ ವ್ಯವಸ್ಥೆ ಮಾಡಲು ನಿರ್ಧರಿಸಲಾಯಿತು.
- ಹಣಕಾಸು ಜವಾಬ್ದಾರಿಯನ್ನು ಬಿ.ಆರ್. ಬನಸೋಡೆ ಮತ್ತು ಅನಿಲ ಹೊಸಮನಿ ಅವರಿಗೆ ವಹಿಸಲಾಯಿತು.
- ಹಣಕಾಸು ವಹಿವಾಟಿಗಾಗಿ ಮೇ ಸಾಹಿತ್ಯ ಮೇಳದ ಗ್ರಾಮೀಣ ಬ್ಯಾಂಕ್ ಅಕೌಂಟನ್ನು ಬಳಸಿಕೊಳ್ಳುವಂತೆ ಸೂಚಿಸಲಾಯಿತು.
- ಮಾಧ್ಯಮ ಸಂಯೋಜನೆ ಜವಾಬ್ದಾರಿಯನ್ನು ಯುಸುಫ್ ನೇವಾರ್ ಅವರಿಗೆ ವಹಿಸಲಾಯಿತು.
ಮುಂದಿನ ಸಭೆಗಳು-
- ಮಾರ್ಚ್ 8 ರಂದು ಸ್ಥಳೀಯ ಸಮಿತಿಗಳ ಸಭೆ ನಡೆಸಿ, ಆಗಿರುವ ಕೆಲಸಗಳನ್ನು ಪರಿಶೀಲಿಸುವುದು.
- ಮಾರ್ಚ್ 10 ರಂದು ಪತ್ರಿಕಾಗೋಷ್ಠಿ
- ಮಾರ್ಚ್ 15 ರಂದು ವಿಸ್ತೃತ ಸಭೆ
- (ಎಲ್ಲಾ ಸಭೆಗಳು ಬುದ್ಧವಿಹಾರದಲ್ಲಿ)
ಸಭೆಯಲ್ಲಿ ರಾಜಶೇಖರ ಯಡಹಳ್ಳಿ, ಅನಿಲ ಹೊಸಮನಿ, ಬಸವರಾಜ ಸೂಳಿಬಾವಿ, ನಾಗರಾಜ ಲಂಬು, ಲಕ್ಷ್ಮಣ ಸಜ್ಜನ, ಬಿ.ಎಚ್. ನಾಡಗಿರಿ, ಪವನ ಚವಡಿಕರ, ಪವನ ವಾಘಮೋರೆ, ಹಣಮಂತ ಮಮದಾಪೂರ, ದಸ್ತಗೀರ ಉಕ್ಕಲಿ, ಬಿ.ಆರ್. ಬನಸೋಡೆ, ಮಲ್ಲಿಕಾರ್ಜುನ ಗದ್ದನಕೇರಿ, ದಾಕ್ಷಾಯಿಣಿ ಹುಡೇದ, ಮಿಲನಕುಮಾರ ನಾಮದಾರ, ಬಾಬುರಾವ ಬೀರಕಬ್ಬಿ, ಸಂತೋಷ ಶಹಾಪುರ, ಮಲ್ಲಿಕಾರ್ಜುನ ಎಚ್.ಟಿ., ಶಿವಾನಂದ ಶಿವಶರಣ, ದ್ಯಾಮಗೊಂಡ ಕಾಂಬಳೆ, ಯಮನಪ್ಪ ಚಲವಾದಿ, ಸಿ.ಬಿ. ಪಾಟೀಲ, ಮಹಾದೇವ ಬನಸೋಡೆ, ನಾಗೇಶ ಗಾಯಕವಾಡ, ಚಂದ್ರಕಾಂತ ಬನಸೋಡೆ, ಕೃಷ್ಣಪ್ಪ ಶಿವಶರಣ, ಸಾಬು ಚಲವಾದಿ, ವಾಸುದೇವ ಕಾಳೆ, ಎಸ್.ಎಸ್.ಗಲಗಲಿ, ರಾಜೇಶ ತೊರವಿ, ದಾನೇಶ ಅವಟಿ, ಸುರೇಶ ಬಿಜಾಪುರ, ಚೇತನ್ ಮ್ಯಾಗೇರಿ, ಪ್ರಸನ್ನ ಆಕಾಶಿ, ಸುಭಾಸಚಂದ್ರ ಹೊನ್ನಕಂಠಿ, ಸಂಘರ್ಷ ಹೊಸ ಮನಿ, ಎಸ್.ಎಸ್.ಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

