ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಹಾವರಗಿ ಗ್ರಾಮಪಂಚಾಯತಿಯ ವ್ಯಾಪ್ತಿಯ ಇಂದವಾರ ಗ್ರಾಮದ ಶ್ರೀ ಗುರಪ್ಪ ಬಸಪ್ಪ ಚಲವಾದಿ ಯುವಕ ವೃತ್ತಿಯಲ್ಲಿ ಮೀನುಗಾರನಾಗಿದ್ದು ದಿನಾಂಕ: ೨೧-೦೫-೨೦೨೬,ರಂದು ಎಂದಿನಂತೆ ಬಸವಸಾಗರ ಜಲಾಶಯದ ಹಿನ್ನೀರಿನಲ್ಲಿ ಮೀನು ಹಿಡಿಯಲು ಪುಟ್ಟಿಯೊಂದಿಗೆ ನೀರಿಗಿಳಿದನು.ಸಂಜೆ ನಾಲ್ಕು ಗಂಟೆಯ ಸಮಯದಲ್ಲಿ ಗಾಳಿಯ ತೀವ್ರತೆಯಿಂದಾಗಿ ಪುಟ್ಟಿಯಲ್ಲಿ ನೀರುತುಂಬಿದ್ದರಿಂದ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ದೂರದಿಂದಲೇ ಗಮನಿಸಿದವರೊಬ್ಬರು ಗ್ರಾಮಕ್ಕೆ ಬಂದು ಜನರಿಗೆ ವಿಷಯ ತಿಳಿಸಿದಾಗ ಗ್ರಾಮಸ್ಥರು ಹಾಗೂ ಕುಟುಂಬ ಸದಸ್ಯರು ನದಿಯ ದಡಕ್ಕೆ ಧಾವಿಸಿದ್ದಾರೆ.ಕೃಷ್ಣಾನದಿಯ ನಾರಾಣಪುರ ಜಲಾಶಯದ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ ಯುವಕ ಕಾಣದಾದಾಗ ಭಯಭೀತರಾದ ಗ್ರಾಸ್ತರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ ವಿಷಯತಿಳಿದ ಪೊಲೀಸರು ಹಾಗೂ ಅಗ್ನಿಶಾಮಕದಳದವರು ನಿರಂತರ ಎರಡು ದಿನಗಳಕಾಲ ಹುಡುಕಿದರೂ ಯುವಕ ಪತ್ತೆಯಾಗಲಿಲ್ಲಾ.ಮೂರನೆಯ ದಿನವಾದ ಇಂದು ನೀರಿನಲ್ಲಿ ಮುಳುಗಿದ್ದ ಯವಕನ ಮೃತದೇಹವು ಕಂಡಿದ್ದು ಸ್ಥಳೀಯ ಅಧಿಕಾರಿಗಳು,ಗ್ರಾಮದ ಹಿರಿಯರು ಹಾಗೂ ಕ್ಷೇತ್ರದ ಶಾಸಕರು ಸ್ಥಳಕ್ಕೆ ಭೇಟಿನೀಟಿ ಮೃತ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿ ಶಾಸಕರು ಶವ ಸಂಸ್ಕಾರ ಮತ್ತು ಇತರೆ ವಿಧಿವಿಧಾನಗಳ ನಿರ್ವಹಣೆಗಾಗಿ ಐವತ್ತು ಸಾವಿರ ರೂಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.ಅಲ್ಲದೆ ಈ ಸಮಯದಲ್ಲಿ ಮಾತನಾಡಿದ ಶಾಸಕರು ಮೃತನ ಕುಟುಂಬಕ್ಕೆ ಸೂಕ್ತಪರಿಹಾರ ಸರ್ಕಾರದಿಂದ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಇಂದವಾರ ಗ್ರಾಮದ ರೈತ ಮುಖಂಡರಾದ ಶ್ರೀ ನಾಗರಾಜ್ ಭೀಮಪ್ಪ ಹೂಗಾರ ಮಾತನಾಡಿ ಇಂದವಾರ ಗ್ರಾಮದ ಯುವಕ ಗುರಪ್ಪ ತನ್ನ ತಂದೆಯನ್ನು ಕಳೆದುಕೊಂಡು ಕುಟುಂಬದ ನಿರ್ವಹಣೆಗೆ ಈತನೇ ಆಧಾರ ಸ್ಥಂಭವಾಗಿದ್ದನು.ಅವನ ಸಹೋದರ ಸಹೋದರಿ ಹಾಗೂ ತಾಯಿಯನ್ನು ಈತನೇ ಸಲಹುತಿದ್ದ ಆದರೆ ವಿಧಿಯಾಟ ಕುಟುಂಬದ ಆಧಾರ ಸ್ಥಂಭ ವಾಗಿದ್ದ ಗುರಪ್ಪನೂ ವಿಧಿವಶನಾಗಿದ್ದರಿಂದ ಕುಟುಂಬದ ಸದಸ್ಯರು ಅಕ್ಷರ ಸಹ ಅನಾಥರಾಗಿದ್ದಾರೆ.ಅವರು ದಲಿತ ಸಮುದಾಯದ ಬಡ ಕುಟುಂಬವಾಗಿರುತ್ತದೆ.ದಯವಿಟ್ಟು ಮಾನ್ಯ ಶಾಸಕರು ಪ್ರಭಾವಿಗಳಿದ್ದು ಮುಖ್ಯ ಮಂತ್ರಿಗಳಿಗೆ ಈ ಬಡ ದಲಿತ ಕುಟುಂಬದ ಕಷ್ಟವನ್ನು ಮನವರಿಸಿ ಕನಿಷ್ಟ ಹತ್ತುಲಕ್ಷ ಪರಿಹಾರವನ್ನು ಕೊಡಿಸಬೇಕೆಂದು ಅಗ್ರಹಿಸಿದ್ದಾರೆ.ನಾಗರಾಜ್ ಹೂಗಾರ್ ದ್ವನಿಗೆ ಗ್ರಾಮಸ್ತರೂ ದ್ವನಿಗೂಡಿಸಿದ್ದಾರೆ.ಮೃತನ ಅಂತಿಮ ದರ್ಶನದಲ್ಲಿ ಸ್ಥಳೀಯ ಶಾಸಕರು, ಸ್ಥಳೀಯ ಕಂದಾಯ ಅಧಿಕಾರಿಗಳು,ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಮುಖಂಡರು,ಗ್ರಾಮಸ್ತರು ಭಾಗವಹಿದ್ದರು,
ಮೃತನ ಕುಟುಂಬಕ್ಕೆ ಹತ್ತುಲಕ್ಷ ಪರಿಹಾರ ನೀಡುವಂತೆ ರೈತ ಮುಖಂಡ ನಾಗರಾಜ್ ಹೂಗಾರ್ ಸರ್ಕಾರಕ್ಕೆ ಆಗ್ರಹ.
RELATED ARTICLES

