ಹೊನ್ನಾಳಿ: ಭಾರತೀಯ ವಿದ್ಯಾಸಂಸ್ಥೆ, ಹೊನ್ನಾಳಿ ಯಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಗುರು ವಂದನೆ ಹಾಗೂ ಗುರು ಪೂರ್ಣಿಮೆನ್ನು ಆಚರಿಸಲಾಯಿತು.ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರತಿನಿತ್ಯ ಯೋಗ ಅಭ್ಯಾಸ ಮಾಡುವುದು ಒಳ್ಳೆಯದು ಎಂದು ಶಿವಳ್ಳಿ ಎಸ್ ಸೋಮಸುಂದರಪ್ಪ ತಿಳಿಸಿದರು.ಗುರು ಎಂದರೆ ಪಾಠ ಹೇಳಿಕೊಡುವ ವ್ಯಕ್ತಿಯಾಗಿರದೇ ಅಜ್ಞಾನವೆಂಬ ಕತ್ತಲೆ ಓಡಿಸಿ ಜ್ಞಾನವೆಂಬ ಬೆಳಕಿನ ಕಡೆ ಕೊಂಡೊಯ್ಯುವ ದಾರಿ ದೀಪವಾಗಿದೆ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರುವಿಗೆ ಪವಿತ್ರವಾದ ಸ್ಥಾನವಿದೆ ಆಷಾಢ ಮಾಸದ ಶುಕ್ಲ ಪಕ್ಷದಂದ ಗುರು ಪೂರ್ಣಿಮೆಯ ದಿನದಂದು ವೇದವ್ಯಾಸರ ಸ್ಮರಣಾರ್ಥವಾಗಿ ಆಚರಿಸುತ್ತೇವೆ ಯೋಗ ಶಾಸ್ತ್ರದ ಪ್ರಕಾರ ಸಪ್ತ ಋಷಿಗಳಿಗೆ ಶಿವನು ಯೋಗ ಶಾಸ್ತ್ರವನ್ನು ದಾರೆ ಏರಿದಂತಹ ದಿನ ಎಂದು .ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರ ಪ್ರಕಾಶ್ ಹೆಬ್ಬಾರ್ ನುಡಿ ನಮನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಗುರು ವಂದನೆಯನ್ನು ಮುಖ್ಯ ಅತಿಥಿಯಾದ ಶಿವಳ್ಳಿ ಎಸ್ ಸೋಮಸುಂದರಪ್ಪ ಅವರಿಗೆ ಅರ್ಪಿಸಲಾಯಿತು.ಕಾರ್ಯಕ್ರಮದಲ್ಲಿ
ಉಪಾಧ್ಯಕ್ಷರು ಸುಜಾತ ಬೆನ್ನೂರು ಮಠ ರಾಘವೇಂದ್ರ ವೈಶ್ಯರು ರುದ್ರೇಶ್ ಎಂಬಿ ಸುರೇಶ್ ಕುಂಬಾರ್ ಶ್ರೀಕಾಂತ್ ಕುರುಡೇಕರ್ ಜಗದಿಶ್ ಅರುಣ್ ಕುಮಾರ್ ಮತ್ತು ಪತಂಜಲಿ ಯೋಗ ಸಮಿತಿಯ ಸದಸ್ಯರು ಬಾಗವಹಿಸಿದ್ದರು

